ಕಾಂಗ್ರೆಸ್, ಬಿಜೆಪಿ ಅಂತ ನಾನು ಹೇಳೋದಿಲ್ಲ. ನಮ್ಮ ಕುಟುಂಬದ ಮೇಲೆ ಬಳ್ಳಾರಿ ಜನರ ಆಶೀರ್ವಾದ ಇರಲಿ: ಜನಾರ್ದನ ರೆಡ್ಡಿ
ಬಳ್ಳಾರಿ(ನ.05): ಹಸಿವಾದಾಗ ಹುಲಿ ಬೇಟೆ ಆಡುತ್ತೇ, ರಾಜಕೀಯಕ್ಕೆ ಬಿಜೆಪಿ, ಕಾಂಗ್ರೆಸ್ ಯಾವ್ದೋ ಗೊತ್ತಿಲ್ಲ. ಹುಲಿ ಬೇಟೆಗೆ ನಿಂತ್ರೆ ಬೇಟೆ ಆಡೇ ಆಡುತ್ತದೆ. ರಸ್ತೆಯಲ್ಲಿ ಓರ್ವ ಹುಡುಗ ಹುಲಿ ಪೋಟೋ ತೋರ್ಸಿ ನನ್ನ ಹುಲಿ ಅಂತ ಕರೆದಿದ್ದಾನೆ. ಹುಲಿಗೆ ಹಸಿವಾದಾಗ ಬೇಟೆಗೆ ಬರುತ್ತೇ, ಬೇಟೆ ಹೊಡೆದೇ ಹೊಡಿಯುತ್ತದೆ. ರಕ್ತದಲ್ಲಿ ಇರೋದನ್ನ ಯಾರು ತಗೆಯಲಿಕ್ಕೆ ಸಾಧ್ಯವೇ ಇಲ್ಲ. ಕೆಲವೊಬ್ಬರು ಮತ್ತೆ ನನ್ನ ಬಳ್ಳಾರಿಯಿಂದ ಹೊರ ಹಾಕ್ತಿದ್ದಾರೆ. ಎರಡ್ಮೂರು ತಿಂಗಳಲ್ಲಿ ಮತ್ತೆ ಬಳ್ಳಾರಿಗೆ ಬರುತ್ತೇನೆ ಅಂತ ಮಾಜಿ ಸಚಿವ ಜನಾರ್ದನ ರೆಡ್ಡಿ ಗುಡುಗಿದ್ದಾರೆ.
ನಗರದಲ್ಲಿ ನಿನ್ನೆ(ಶುಕ್ರವಾರ) ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಅವರು, ನನ್ನ ತಂದೆ ಪೊಲೀಸ್ ಪೇದೆ ಆಗಿ ಕೆಲಸ ಮಾಡಿರಬಹುದು. ಆದ್ರೇ ನನ್ನ ತಾತಂದಿರು ರಾಜರಂತೆ ಬದುಕಿದ್ದರು. ಅವರ ರಕ್ತ ನನ್ನಲಿದೆ ಅದನ್ನ ಬದಲಾಯಿಸಲಾಗದು. 12 ವರ್ಷ ನಾನು ಸುಮ್ನೆ ಇದ್ದೀನಿ ಅಂದ್ರೆ ನನ್ನ ಕೈಯಲ್ಲಿ ಏನೂ ಆಗೋದಿಲ್ಲ ಅಂತ ಅಲ್ಲ. ಒಂದೂವರೆ ವರ್ಷದಿಂದ ಬಳ್ಳಾರಿಯ ಮನೆಯಿಂದ ಹೊರ ಬಂದಿಲ್ಲ. ಯಾಕಂದ್ರೇ ಆಗುವ ಕೆಲಸ ಆಗುವುದಿಲ್ಲ ಎಂದು ಸುಮ್ಮನಿದ್ದೇ. ನಮ್ಮ ಕುಟುಂಬ ಬಳ್ಳಾರಿ ಅಭಿವೃದ್ಧಿಗೆ ಬದ್ಧವಾಗಿದೆ ಅಂತ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
undefined
ಜನಾರ್ದನ ರೆಡ್ಡಿ ಸಹಾಯಕ್ಕೆ ಹೋಗದ ಯಡಿಯೂರಪ್ಪ ವಿರುದ್ಧ ಗುಡುಗಿದ ಯತ್ನಾಳ್..!
ಕಾಂಗ್ರೆಸ್, ಬಿಜೆಪಿ ಅಂತ ನಾನು ಹೇಳೋದಿಲ್ಲ. ನಮ್ಮ ಕುಟುಂಬದ ಮೇಲೆ ಬಳ್ಳಾರಿ ಜನರ ಆಶೀರ್ವಾದ ಇರಲಿ ಅಂತ ಹೇಳಿದ್ದಾರೆ. ಇತ್ತೀಚೆಗೆ ಜನಾರ್ದನ ರೆಡ್ಡಿಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನಗಳು ಸಿಕ್ಕಿಲ್ಲ, ಹೀಗಾಗಿ ಗಣಿ ಧನಿ ಕಾಂಗ್ರೆಸ್‌ಗೆ ಸೇರ್ತಾರಾ ಎಂಬುದನ್ನ ಕಾಲವೇ ಉತ್ತರಿಸಬೇಕಿದೆ.
ನಾವು ಯಾವತ್ತೂ ಜನರ ಜೇಬಿಗೆ ಕತ್ತರಿ ಹಾಕಿಲ್ಲ, ಯಾರಿಗೂ ನಾವು ಮೋಸ ಮಾಡಿಲ್ಲ ಅದೃಷ್ಟದಿಂದ ಮೇಲೆ ಬಂದಿದ್ದೇವೆ. ಹೆಲಿಕಾಪ್ಟರ್ ತೆಗೆದುಕೊಂಡಿದ್ದಕ್ಕೆ ಕೆಲವರು ಮಾತನಾಡಿದರು. ಆದ್ರೇ, ನಾನು ಸಚಿವನಾಗಿದ್ದಾಗ ರಸ್ತೆ ಮೂಲಕ ಬೆಂಗಳೂರಿಗೆ ಹೋದ್ರೆ ಏಳೆಂಟು ಗಂಟೆಯಾಗುತ್ತಿತ್ತು. ನನಗೆ ಬಳ್ಳಾರಿಯ ಜನರಿಗೆ ಸಮಯ ಕೊಡೋಕೆ ಆಗ್ತಾ ಇರಲಿಲ್ಲ. ಹೀಗಾಗಿ ಹೆಲಿಕಾಪ್ಟರ್ ತೆಗೆದುಕೊಂಡಿದ್ದೆ, ಎರಡು ಗಂಟೆಯಲ್ಲಿ ಬೆಂಗಳೂರಿಗೆ ಹೋಗಿ ಬಂದು ಬಳ್ಳಾರಿ ಜನರ ಜೊತೆ ಸಮಯ ಕಳೆಯುತ್ತಿದ್ದೆ ಎಂದ ಜನಾರ್ದನ ರೆಡ್ಡಿ ಹೇಳಿದ್ದಾರೆ.