ಜುಲೈನಿಂದಲೇ ಫ್ರೀ ವಿದ್ಯುತ್‌: ಸಚಿವ ಕೆ.ಜೆ.ಜಾರ್ಜ್‌

Published : Jul 31, 2023, 12:30 AM IST
ಜುಲೈನಿಂದಲೇ ಫ್ರೀ ವಿದ್ಯುತ್‌: ಸಚಿವ ಕೆ.ಜೆ.ಜಾರ್ಜ್‌

ಸಾರಾಂಶ

ಗೃಹ ಜ್ಯೋತಿ ಜುಲೈನಿಂದಲೇ ಪ್ರಾರಂಭ ಆಗಿದೆ. ಜುಲೈ ತಿಂಗಳ ಬಿಲ್‌ ಆಗಸ್ಟ್‌ನಲ್ಲಿ ಬರಲಿದೆ. ಆಗ ಎಲ್ಲರಿಗೂ ಫ್ರೀ ವಿದ್ಯುತ್‌ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. 

ಚಿಕ್ಕಮಗಳೂರು (ಜು.31): ಗೃಹ ಜ್ಯೋತಿ ಜುಲೈನಿಂದಲೇ ಪ್ರಾರಂಭ ಆಗಿದೆ. ಜುಲೈ ತಿಂಗಳ ಬಿಲ್‌ ಆಗಸ್ಟ್‌ನಲ್ಲಿ ಬರಲಿದೆ. ಆಗ ಎಲ್ಲರಿಗೂ ಫ್ರೀ ವಿದ್ಯುತ್‌ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಲಬುರ್ಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್‌ ಅವರು ಗೃಹ ಜ್ಯೋತಿಗೆ ಆ. 5 ರಂದು ಚಾಲನೆ ನೀಡಲಿದ್ದಾರೆ ಎಂದರು. ರಾಜ್ಯದಲ್ಲಿ ಫ್ರೀ ವಿದ್ಯುತ್‌ಗೆ 1.40 ಕೋಟಿ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. 

ಜೂನ್‌ ತಿಂಗಳ ಬಿಲ್‌ನಲ್ಲಿ ಗೊಂದಲ ಇತ್ತು. ಈಗ ಬಗೆಹರಿದಿದೆ. ಬಿಲ್‌ ಕಟ್ಟಿದವರಿಗೆ ಹಣ ವಾಪಸ್‌ ಕೊಡಲಾಗುವುದು ಎಂದು ಹೇಳಿದರು. ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಬಿ.ಆರ್‌.ಪಾಟೀಲ್‌ ಅವರು ಯಾರ ಕ್ಷಮೆ ಕೇಳಿಲ್ಲ. ಅವರ ವಿಚಾರದಲ್ಲಿ ಎಲ್ಲರೂ ಒಳ್ಳೆಯದನ್ನೇ ಮಾತನಾಡಿದ್ದಾರೆ ಎಂದರು. ಅಭಿವೃದ್ಧಿ ಕೆಲಸಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಹೀಗಾಗಿ ಕೆಲ ಶಾಸಕರು, ಸಚಿವರಿಗೆ ಬೇಜರಾಗಿರ ಬಹುದು. ಅವುಗಳನ್ನು ಮತ್ತೆ ಪ್ರಾರಂಭ ಮಾಡಲು ಆದೇಶ ಕೊಡಲು ಸರ್ಕಾರ ಮುಂದಾಗಿದೆ. 

ಹಣ ಹಾಗೂ ಹೆಣದ ಮೇಲೆ ಕಾಂಗ್ರೆಸ್‌ ರಾಜಕಾರಣ: ಎನ್‌.ರವಿಕುಮಾರ್‌

ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಅಭಿವೃದ್ಧಿ ಕೆಲಸಗಳು ಆಗುತ್ತವೆ. ಹೊಸ ಕಾರ್ಯಕ್ರಮಗಳಿಗೆ ಅಷ್ಟೇ ನಿರ್ಬಂಧ ಎಂದರು. ಕಸ್ತೂರಿ ರಂಗನ್‌ ವರದಿ ಕುರಿತು ಕೇಳಿದಾಗ ಯಾವ ಮಂತ್ರಿ ಮಂಡಲದಲ್ಲೂ ಅರಣ್ಯ ಸೂಕ್ಷ್ಮ ವಲಯದ ಬಗ್ಗೆ ತೀರ್ಮಾನ ಆಗಿರಲಿಲ್ಲ. ಈ ಸಂಬಂಧ ಸಚಿವ ಸಂಪುಟದ ಉಪ ಸಮಿತಿಗೆ ಅಧಿಕಾರ ನೀಡಲಾಗಿದೆ. ಉಪ ಸಮಿತಿಯಲ್ಲಿ ಚರ್ಚೆಯಾದ ನಂತರ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಅಹಂಕಾರ ಮನೋಭಾವನೆ ಏಳಿಗೆಗೆ ತೊಡಕಾಗಲಿದೆ: ನಾನು, ನನ್ನಿಂದ, ನನಗಾಗಿ ಎಂಬ ಅಹಂಕಾರದ ಮನೋಭಾವನೆ ನಮ್ಮ ಏಳಿಗೆಗೆ ತೊಡಕಾಗಲಿದೆ ಎಂದು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು. ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಸಂಯುಕ್ತಾ ಶ್ರಯದಲ್ಲಿ ಸರ್ಕಾರಿ ನೌಕರರ ಸಂಘದ ಭವನದ ಸಭಾಂಗಣದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾನು, ನನ್ನಿಂದ, ನನಗಾಗಿ ಎಂಬ ಮನೋಭಾವದಿಂದ ಹೊರಗೆ ಬರಬೇಕು. ನಾವು, ನಮ್ಮಿಂದ, ನಮಗಾಗಿ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಎಲ್ಲರ ಏಳಿಗೆ ಸಾಧ್ಯ ಎಂದರು.

ನಾನು, ರಾಜಕೀಯ ಕುಟುಂಬದಿಂದ ಬಂದವನಲ್ಲ, ಆರಂಭದಲ್ಲಿ ಹಾಗೂ ನಂತರದಲ್ಲಿ ಹಂತ ಹಂತವಾಗಿ ಈ ಮಟ್ಟಕ್ಕೆ ಬರಲು ಕಾರಣರಾದವರು ಪತ್ರಕರ್ತರು ಎಂದು ಹೇಳಿದರು. ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಪತ್ರಕರ್ತರು ಹಲವು ಸಲಹೆ ನೀಡಿದ್ದಾರೆ. ಅವುಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಸಚಿವರು, ಈ ಜಿಲ್ಲೆಯಲ್ಲಿ ಜನಪರ ಕೆಲಸ ಮಾಡುವ ಉತ್ಸಾಹಿ ಶಾಸಕರು, ಕಾಂಗ್ರೆಸ್‌ನ ಪ್ರಭಾವಿ ಮುಖಂಡರು ಇದ್ದಾರೆ. ಹಾಗಾಗಿ ಜಿಲ್ಲೆ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.

ವಿಧಾನಪರಿಷತ್‌ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಮಾತನಾಡಿ, ದೇಶ, ರಾಜ್ಯವನ್ನು ಕಟ್ಟುವುದರಲ್ಲಿ, ಜಿಲ್ಲೆಯ ಅಭಿವೃದ್ಧಿಯಲ್ಲಿ ಪತ್ರಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ. ನಾವಿಡುವ ಹೆಜ್ಜೆ ಗುರುತುಗಳನ್ನು ಆ ಸಮಾಜ ಅನುಕರಣೆ ಮಾಡುತ್ತದೆ. ಪತ್ರಿಕಾ ರಂಗದಿಂದಾಗಿ ಸಾಮಾಜಿಕ ನ್ಯಾಯ ಸಿಗುತ್ತದೆ. ಅದ್ದರಿಂದ ಜವಾಬ್ದಾರಿ ಹೆಚ್ಚಿರುತ್ತದೆ. ಬೇರೆಯವರಿಗೆ ತೊಂದರೆ ನೀಡಬಾರದು. ನಾವು ಅವರಿಗಿಂತ ಎತ್ತರದಲ್ಲಿ ಬೆಳೆಯಬೇಕೆಂಬ ಮನೋಭಾವ ಹೊಂದಬೇಕು ಎಂದು ಸಲಹೆ ಮಾಡಿದರು.

ಭರವಸೆಗಳ ಈಡೇರಿಕೆಗೆ ಕಾಂಗ್ರೆಸ್‌ ಆದ್ಯತೆ: ಸಚಿವ ಶಿವಾನಂದ ಪಾಟೀಲ

ಒಳ್ಳೆಯ ಕೆಲಸಗಳು ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿಲ್ಲ. ಅದರ ಬದಲು ತಪ್ಪು ಹೆಚ್ಚು ವೈಭವೀಕರಿಸಲಾಗುತ್ತಿದೆ. ರಾಜಕಾರಣ ಬೇರೆ, ಪ್ರೀತಿಯ ವಿಸ್ವಾಸ ಬೇರೆ, ಕಾರ್ಯಕರ್ತರ ನಡುವೆ ದ್ವೇಷ, ಹುಟ್ಟು ಹಾಕುವ ಕೆಲಸ ಆಗಬಾರದು ಎಂದರು. ಶಾಸಕ ಎಚ್‌.ಡಿ. ತಮ್ಮಯ್ಯ ಮಾತನಾಡಿ, ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಆ.15 ರವರೆಗೆ ಸಾಮಾನ್ಯ ವರ್ಗಾವಣೆ ನಡೆಯಲಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕ ಅಧಿಕಾರಿಗಳನ್ನು ಜಿಲ್ಲೆಗೆ ತರುವ ಕೆಲಸ ನಡೆಸಲಾಗುವುದು. ಜನರಿಗೆ ಗೌರವ ಕೊಡಬೇಕು. ಉತ್ತಮ ಕೆಲಸ ಮಾಡಬೇಕು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ