* ತೀವ್ರ ಕುತೂಹಲ ಮೂಡಿಸಿದ ದಿವಂಗತ ಅನಂತ ಕುಮಾರ್ ಪುತ್ರಿಯ ಟ್ವೀಟ್
* ಜೆಡಿಎಸ್ ಸ್ಟ್ರಾಂಗ್ ಎಂದು ಟ್ಟೀಟ್ ಮಾಡಿದ ಅನಂತ್ ಕುಮಾರ್ ಪುತ್ರಿ
* ದಿವಂಗತ ಅನಂತ್ ಕುಮಾರ್ ಪುತ್ರಿ ವಿಜೇತ ಅನಂತ್ ಕುಮಾರ್ ರಿಂದ ಟ್ವೀಟ್
* ಕರ್ನಾಟಕ ರಾಜಕೀಯ ನಿಜವಾಗಿಯೂ ಏಕೆ ಆಸಕ್ತಿದಾಯಕವಾಗಿದೆ..?
ಬೆಂಗಳೂರು(ಜು. 29) ದಿವಂಗತ ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ಮಾಡಿರುವ ಟ್ವೀಟ್ ಒಂದು ದೊಡ್ಡ ಸುದ್ದಿ ಮಾಡುತ್ತಿದೆ. ಜತೆಗೆ ಹಲವಾರು ಪ್ರಶ್ನೆಗಳನ್ನು ಎತ್ತಿದೆ.
ಕರ್ನಾಟಕದಲ್ಲಿ ರಾಜಕಾರಣ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದ್ದು ಈ ಹಿಂದೆ ಜನತಾ ಪರಿವಾರದಲ್ಲಿದ್ದ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಪ್ರಮಾಣ ತೆಗೆದುಕೊಂಡಿದ್ದಾರೆ.
undefined
'ಕರ್ನಾಟಕದ ರಾಜಕೀಯ ನಿಜವಾಗಿಯೂ ಆಸಕ್ತಿದಾಯಕವಾಗಿದೆಯೇ.. ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗಿಯೇ ಇದೆ' ಎಂದಿದ್ದಾರೆ. ಈ ಒಂದು ಟ್ವಿಟ್ ಹಲವು ಪ್ರಶ್ನೆಗಳಿಗೆ ಆರಂಭ ಒದಗಿಸಿದೆ.
ತಾಯಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಇಂಥ ಟ್ವೀಟ್ ಮಾಡಿದ್ರಾ? ಜೆಡಿಎಸ್ ಕಡೆ ಒಲವು ತೋರಿದರಾ ಎನ್ನುವ ಪ್ರಶ್ನೆಯೂ ಮೂಡಿದೆ. ಇನ್ನೊಂದು ಕಡೆ ಜೆಡಿಎಸ್ ಕಾರ್ಯಕರ್ತರು ಇದನ್ನು ಸ್ವಾಗತ ಮಾಡಿದ್ದಾರೆ. ತೇಜಸ್ವಿನಿ ಅನಂತ್ ಕುಮಾರ್ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬೊಮ್ಮಾಯಿ ಬಿಜೆಪಿಯಲ್ಲಿದ್ದರೂ ಜನತಾ ಪರಿವಾರದವರೆ
ಬೊಮ್ಮಾಯಿ ಸಿಎಂ ಮಾಡಿದ್ದಕ್ಕೆ ಟಾಂಗ್? ಈ ಹಿಂದೆ ಜನತಾ ಪರಿವಾರದಲ್ಲಿದ್ದು ನಂತರ ಬಿಜೆಪಿಗೆ ಬಂದವರು ಬಸವರಾಜ ಬೊಮ್ಮಾಯಿ. ಅವರಿಗೆ ಸಿಎಂ ಸ್ಥಾನ ಒಲಿದು ಬಂದಿದೆ. ಮೂಲ ಬಿಜೆಪಿಯ ನಾಯಕರಿಗೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಈ ರೀತಿ ಟ್ವೀಟ್ ಮಾಡಿದ್ರಾ?
ಅಮ್ಮನ ಕೈತಪ್ಪಿದ್ದ ಟಿಕೆಟ್: ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬದಲಾದ ಸಂದರ್ಭದಲ್ಲಿ ತೇಜಸ್ವಿನಿ ಬದಲು ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಸಿಕ್ಕಿತ್ತು. ನಂತರ ಗೆದ್ದು ಬಂದಿದ್ದರು.
ಬೆಳಗಾವಿ ಲೋಕಸಭಾ ಚುನಾವಣೆ; ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿಯವರು ಕೊರೋನಾಕ್ಕೆ ಬಲಿಯಾಗಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಾಗ ಬಿಜೆಪಿ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನೀಡಿತು. ಅವರು ಗೆದ್ದು ಬಂದರು. ಸಾರ್ವತ್ರಿಕ ಚುನಾವಣೆಯಲ್ಲಿ ತೇಜಸ್ವಿನಿ ಅವರಿಗೆ ಟಿಕೆಟ್ ಕೈತಪ್ಪಿದ್ದರೆ ಇಲ್ಲಿ ಮಂಗಳಾಗೆ ಸಿಕ್ಕಿತ್ತು. ಈ ಬಗ್ಗೆಯೂ ಚರ್ಚೆಗಳಾಗಿದ್ದವು.
ಸೋಶಿಯಲ್ ಮೀಡಿಯಾ: ಕರ್ನಾಟಕದಲ್ಲಿ ಸಿಎಂ ಆಗುತ್ತಿರುವವರೆಲ್ಲ ಜನತಾ ಪರಿವಾರದವರು, ದೇವೇಗೌಡರ ಜತೆ ನಂಟು ಹೊಂದಿದ್ದವರು ಎಂಬ ಅರ್ಥದ ಬರಹಗಳು ಸೋಶಿಯಲ್ ಮೀಡಿಯಾ ತುಂಬಾ ಹರಿದಾಡುತ್ತಲೇ ಇವೆ. ಜೆಡಿಎಸ್ ತೊರೆದು ಬೇರೆ ಪಕ್ಷ ಸೇರಿದರೆ ಅವರು ಸಿಎಂ ಆಗಬಹುದು ಎಂದು ಹೇಳಿದವರು ಇದ್ದಾರೆ. ಈ ಮಾತಿಗೆ ಉತ್ತರ ನೀಡಲು ಇಂಥ ಟ್ವೀಟ್ ಮಾಡಿದ್ರಾ?
ಒಟ್ಟಿನಲ್ಲಿ ರಾಜಕಾರಣದ ಮಾತುಗಳಿಂದ ದೂರವೇ ಉಳಿದಿದ್ದ ದಿವಂಗತ ಅನಂತ್ ಕುಮಾರ್ ಪುತ್ರಿ ಈಗ ಮಾಡಿರುವ ಟ್ವೀಟ್ ಅನೇಕ ಪ್ರಶ್ನೆ ಎತ್ತಿದೆ. ರಾಜಕಾರಣದಲ್ಲಿ ಪ್ರತಿಯೊಬ್ಬರು ತಮ್ಮದೇ ದೃಷ್ಟಿಕೋನದಲ್ಲಿ ನೋಡುತ್ತಿದ್ದಾರೆ.
what do you all feel?
will it be one among the trending names or will Modi avaru surprise us?