ಇದು ಕೇವಲ ಬಿಜೆಪಿ ಬಜೆಟ್ ಅಲ್ಲ, ಎನ್‌ಡಿಎ ಮೈತ್ರಿಕೂಟದ ಬಜೆಟ್ ಆಗಿದೆ. ನಾನು ಕೂಡ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದೇನೆ. ನಾನು ಮುಂದಿನ ಬಜೇಟ್ ಮೇಲೆ ಮಾತನಾಡ್ತಿನೋ ಇಲ್ಲವೊ ಗೊತ್ತಿಲ್ಲ. ಹೀಗಾಗಿ ನಾನು ಮಾತನಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.
ನವದೆಹಲಿ (ಜು.29): ಇದು ಕೇವಲ ಬಿಜೆಪಿ ಬಜೆಟ್ ಅಲ್ಲ, ಎನ್‌ಡಿಎ ಮೈತ್ರಿಕೂಟದ ಬಜೆಟ್ ಆಗಿದೆ. ನಾನು ಕೂಡ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದೇನೆ. ನಾನು ಮುಂದಿನ ಬಜೇಟ್ ಮೇಲೆ ಮಾತನಾಡ್ತಿನೋ ಇಲ್ಲವೊ ಗೊತ್ತಿಲ್ಲ. ಹಾಗಾಗಿ, ನನಗೆ ನಿಮ್ಮ ಸಮಯದಲ್ಲಿ ನನಗೆ ಮಾತನಾಡಲು ಅವಕಾಶ ನೀಡಿ ಎಂದು ಆಡಳಿತ ಪಕ್ಷದ ರಾಜ್ಯಸಭಾ ನಾಯಕ ಜೆ.ಪಿ. ನಡ್ಡಾ ಬಳಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಮನವಿ ಮಾಡಿದ್ದಾರೆ.
ರಾಜ್ಯಸಭಾ ಕಲಾಪದಲ್ಲಿ ಸೋಮವಾರ ಕೇಂದ್ರದ ಬಜೆಟ್ ಮೇಲೆ ಚರ್ಚೆ ಮಾಡಿದ್ದಾರೆ. ಇದು ಕೇವಲ ಬಿಜೆಪಿ ಬಜೆಟ್ ಅಲ್ಲ, ಇದೊಂದು ಎನ್‌ಡಿಎ ಮೈತ್ರಿಕೂಟದ ಬಜೆಟ್ ಆಗಿದೆ. 2014ರ ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನರೇಂದ್ರಮೋದಿ ಗೆಲುವು ಸಾಧಿಸಿದ್ರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡೋದಾಗಿ ಹೇಳಿಕೆ ನೀಡಿದ್ದೆನು. ಆದರೆ, ಇವತ್ತು ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಬಜೇಟ್ ಅನ್ನ ನಾನು ಸ್ವಾಗತ ಮಾಡುತ್ತೆನೆ. ನಾನು ಈ ಬಜೆಟ್ ಅನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.
ಲಕ್ಷ್ಮೀ ನಿವಾಸ: ಭಾವನಾಗೆ ತಾಳಿ ಕಟ್ಟಿದ್ದ ಸಿದ್ದೇಗೌಡ್ರು ತಗ್ಲಾಕೊಂಡ; ಮನೆಯವರಿಗೆ ಹೇಳ್ತಾನಾ ವೆಂಕಿ
ನಾನು ಮುಂದಿನ ಬಜೇಟ್ ಮೇಲೆ ಮಾತನಾಡ್ತಿನೋ ಇಲ್ಲವೊ ಗೊತ್ತಿಲ್ಲ. ಹಾಗಾಗಿ, ನನಗೆ ನಿಮ್ಮ ಸಮಯದಲ್ಲಿ ನನಗೆ ಮಾತನಾಡಲು ಅವಕಾಶ ನೀಡಿ. ಆಡಳಿತ ಪಕ್ಷದ ರಾಜ್ಯಸಭಾ ನಾಯಕ ಜೆ.ಪಿ. ನಡ್ಡಾಗೆ ಮನವಿ ಮಾಡಿದ್ದಾರೆ. ನಾನು ಎನ್ ಡಿ ಎ ಭಾಗವಾಗಿರುವೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ನಡ್ಡಾ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇನ್ನು ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮೀತ್ ಶಾ ಅವಧಿಯಲ್ಲಿ ಗುಜರಾತ್ ಅಭಿವೃದ್ದಿಯಾಗಿದೆ. ನಾನು 1964ರಲ್ಲಿ ಗುಜರಾತ್ ಗೆ ಹೋದಾಗ ಹೆಗಿತ್ತು.? ಈಗ ಹೇಗಿದೆ ಎಂದು ಗೊತ್ತಿದೆ. ಈಗ ತುಂಬಾ ಅಭಿವೃದ್ದಿಯ ಪಥದತ್ತ ಗುಜರಾತ್ ಸಾಗಿದೆ ಎಂದು ಹೊಗಳಿದರು.
ಎನ್ ಡಿ ಎ ಮೈತ್ರಿಕೂಟದ ಭಾಗವಾಗಿರೋ ಬಿಹಾರ ಮತ್ತು ಆಂಧ್ರಪದೇಶ ರಾಜ್ಯಗಳಿಗೆ ನೀಡಿದ ಅನುದಾನ ಬಗ್ಗೆ ನಾನು ಹೃದಯಪೂರ್ವಕವಾಗಿ ಸ್ವಾಗತ ಮಾಡುತ್ತೆನೆ. ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಾಜಪೇಯಿ ವಿರೋಧ ಪಕ್ಷದ ನಾಯಕರಾಗಿದ್ದರು. ಆ ಸಂದರ್ಭದಲ್ಲಿ ಲೋಕಸಭೆ ಅಥವಾ ರಾಜ್ಯಸಭೆ ಯಾವುದೇ ಅಡೆತಡೆ ಮಾಡಲಿಲ್ಲ. ಜೆಡಿಎಸ್ ಕೆಲವು ಸ್ಥಾನ ಗೆದ್ದಿದ್ದರೂ ಕುಮಾರಸ್ವಾಮಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಿರೋದಕ್ಕೆ ಧನ್ಯವಾದ ತಿಳಿಸುತ್ತೇನೆ. ಕಳೆದ ಐದಾರು ದಶಕಗಳಿಂದ ರೈತ ಸಮುದಾಯ ಶೋಷಣಕ್ಕೆ ಒಳಗಾಗಿದೆ. ಶೇ.68 ಪ್ರತಿಶತ ಇದ್ದ ರೈತರ ಪ್ರಮಾಣ ಈಗ ಕೇವಲ ಶೇ.40ಕ್ಕೆ ಇಳಿಕೆಯಾಗಿದೆ. ಈ ಬಾರಿಯ ಬಜೆಟ್ ರೈತಪರವಾಗಿರೋದು ಕಾಣುತ್ತಿದೆ ಎಂದು ಹೇಳಿದರು.
ನವರತ್ನ ಕಂಪನಿಗಳಲ್ಲಿ ಹೂಡಿಕೆ ಹಿಂಪಡೆಯೋ ಬದಲು ಮರು ಹೂಡಿಕೆ ಮಾಡಿ. ಇದರಿಂದ ನಿರುದ್ಯೋಗ ಸಮಸ್ಯೆಯನ್ನ ಪರಿಹಾರ ಮಾಡಲು ಪ್ರಧಾನಿ ಮೋದಿಗೆ ಸಲಹೆ ನೀಡಿದರು. ಬೆಂಗಳೂರಿನ ಕುಡಿಯೋ ನೀರಿನ ಪರಿಹಾರಕ್ಕಾಗಿ, ಪ್ರಧಾನಿ ನರೇಂದ್ರ ಮೋದಿಗೂ ಗೊತ್ತು ಮತ್ತು ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರೋ ನಿರ್ಮಲಾ ಸೀತಾರಾಮನ್ ಗೂ ನೀರಿನ ಸಮಸ್ಯೆ ಗೊತ್ತು. ಕಾವೇರಿ ನ್ಯಾಯಾಧಿಕರಣ ತೀರ್ಪು ಬಂದಾಗ ಬೆಂಗಳೂರಿನ ಜನಸಂಖ್ಯೆ ಕೇವಲ 80 ಲಕ್ಷ ಮಾತ್ರ ಇತ್ತು. ಇಂದು ಒಂದುವರೆ ಕೋಟಿ ಜನಸಂಖ್ಯೆ ದಾಟಿದೆ. ಕುಡಿಯೋ ನೀರು ನಮ್ಮ ಮೂಲಭೂತ ಹಕ್ಕಾಗಿದೆ ಜನರು ಇದರಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಜುಲೈ 10ನೇ ತಾರೀಖಿನ ಆದೇಶದ ಪ್ರಕಾರ ಜುಲೈ 31 ರ ವರೆಗೆ 19 ಟಿಎಂಸಿ ನೀರು ಬಿಡಲು ಆದೇಶಿಸಿತ್ತು. ಆದರೆ, ವರುಣ ದೇವರ ಕೃಪೆಯಿಂದ ಅದಕ್ಕಿಂತ ಹೆಚ್ಚು ನೀರು ಹರಿದಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ ಸೇರಿ ಎಲ್ಲಾ ಜಲಾಶಯ ಮತ್ತು ಕೆರೆಗಳು ತುಂಬಿದ್ದಾವೆ. ಆದರೆ, ಬರ ಆವರಿಸಿದ್ದ ಸಂದರ್ಭ ಹತ್ತು ವರ್ಷದಲ್ಲಿ ಮೂರು ವರ್ಷ ಬಂದಿದೆ. ಕಾವೇರಿ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ತಮಿಳುನಾಡು ಸಂಸದರ ಆಕ್ಷೇಪ ಮಾಡಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಒಟ್ಟು 27 ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ. ಆದರೂ, ಈ ಭಾಗದಲ್ಲಿ ಎಂಡಿಎಗೆ ಜನರು ಮತ ನೀಡಿದ್ದಾರೆ.
ಈ ಹಿನ್ನಲೆ ನಾವು ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿರುವ ಹಣ ಮತ್ತು ಬೆಂಗಳೂರು ಸೇರಿದಂತೆ ಕುಡಿಯೋ ನೀರಿನ ಸಮಸ್ಯೆಗೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನರ್ಮದಾ ಪ್ರಾಜೆಕ್ಟ್ ಸೇರಿ ಹಲವು ಪ್ರಾಜೆಕ್ಟ್ ನಾನು ಮಂಜುರಾತಿ ನೀಡಿದ್ದೆನೆ. ಮುಂದಿನ ಬಜೆಟ್ ಗೆ ನಾನು ಬರ್ತಿನೋ ಇಲ್ಲ ಗೊತ್ತಿಲ್ಲ. ನಾನೊಬ್ಬ ಸಣ್ಣ ರೈತ, ನಾನು ಪ್ರಧಾನಿಯಾಗಿದ್ದಾಗ ಸ್ವಲ್ಪ ಸೇವೆ ಮಾಡಿದ್ದೆನೆ. ಅದನ್ನ ಗುರುತಿಸಿ ಪ್ರಧಾನಿ ಮ್ಯೂಸಿಯಂನಲ್ಲಿ ಅದನ್ನ ಬಿತ್ತರಿಸಲಾಗಿದೆ. ಅದಕ್ಕೆ ಮೋದಿಗೆ ಧನ್ಯವಾದ ತಿಳಿಸಿದ್ದೆನೆ ಎಂದು ಹೇಳಿದರು.