ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತಂದು ಕೊನೆಯುಸಿರು ಬಿಡುವಾಸೆ: ಎಚ್‌.ಡಿ.ದೇವೇಗೌಡ

By Girish Goudar  |  First Published May 10, 2022, 6:10 AM IST

*  ಪ್ರಾದೇಶಿಕ ಪಕ್ಷ ಉಳಿಸಬೇಕು, ಅಧಿಕಾರಕ್ಕೆ ತರಬೇಕೆಬುದು ನನ್ನ ಹಠ
*  ಚಿಕ್ಕಮಗಳೂರಿನಲ್ಲಿ ‘ಜನತಾ ಜಲಧಾರೆ’, ಜೆಡಿಎಸ್‌ ಕಾರ್ಯಕರ್ತರ ಸಭೆ
*  ಸ್ವತಃ ನಾನೇ ಕ್ಷೇತ್ರದಲ್ಲಿ ಅಭಿಪ್ರಾಯವನ್ನು ಸಂಗ್ರಹಿಸಿ ತೀರ್ಮಾನ ಮಾಡುತ್ತೇನೆ
 


ಚಿಕ್ಕಮಗಳೂರು(ಮೇ.10): ದೇವೇಗೌಡರಿಗೆ(HD Devegowda) 90 ವರ್ಷ ವಯಸ್ಸಾಗಿದೆ ಎಂದು ಯಾರೋ ಹೇಳಿದರು. 90 ಮುಖ್ಯವಲ್ಲ ನನಗೆ ನನ್ನ ಜೀವನದ ಕೊನೆಯಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಉಳಿಸಿ, ಅಧಿಕಾರಕ್ಕೆ ತಂದು ಕೊನೆಯುಸಿರು ಬಿಡಬೇಕೆಂಬುದೇ ನನ್ನ ಹಠ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು. ನಗರದ ಎಐಟಿ ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಜೆಡಿಎಸ್‌(JDS) ಹಮ್ಮಿಕೊಂಡಿದ್ದ ‘ಜನತಾ ಜಲಧಾರೆ’ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾರೂ ತಪ್ಪು ತಿಳಿಯಬೇಡಿ, ಪಕ್ಷವನ್ನು ಉಳಿಸಲು ಓರ್ವ ರಾಜಕೀಯ ಮುಖಂಡನಾಗಿ ಎಲ್ಲಿ ನಾವು ತಪ್ಪುತ್ತಿದ್ದೇವೆ, ಹೇಗೆ ನಾವು ನಡೆದುಕೊಳ್ಳಬೇಕು, ಸೂಕ್ಷ್ಮವಾಗಿ ಎಲ್ಲವನ್ನು ನೋಡುತ್ತೇನೆ. ಈ ಬಗ್ಗೆ ನನ್ನ ಮನಸ್ಸಿನಲ್ಲಿ ಆತಂಕವಿದೆ. ಆದರೆ ಈ ಪಕ್ಷ ಉಳಿಸಬೇಕೆಂಬ ಒಂದೇ ಒಂದು ಆಸೆ ಇದೆ ಎಂದರು.

Tap to resize

Latest Videos

ರಾಜ್ಯದಲ್ಲಿ ನೀರಾವರಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿರುವ ಏಕೈಕ ವ್ಯಕ್ತಿ ದೇವೇಗೌಡ: ವೈ.ಎಸ್.ವಿ.ದತ್ತಾ

ಎಲ್ಲ ಜಿಲ್ಲೆಯಲ್ಲೂ ಪ್ರವಾಸ ಮಾಡಿ ನಮ್ಮ ರಾಜಕೀಯ ಪಕ್ಷವನ್ನು (Political Party) ಉಳಿಸಿ, ಇದು ನನ್ನ ಕೊನೆ ಹೋರಾಟ ಎಂದು ಮನೆಗಳಿಗೆ ಹೋಗಿ ಕೇಳಿಕೊಳ್ಳುತ್ತೇನೆ. ಬಿಟ್ಟರೆ ದೇಶ ಹಾಳಾಗುತ್ತದೆ. ರಾಜ್ಯದಲ್ಲಿ ಓರ್ವರು ಹೇಳುತ್ತಾರೆ, ಇದೊಂದು ದರಿದ್ರ ಸರ್ಕಾರ ಎಂದು. ಆ ದರಿದ್ರ ಸರ್ಕಾರ ತಂದವರು ಯಾರು? ಕುಮಾರಸ್ವಾಮಿನಾ? 16 ಜನ ಹೋದವರಾರ‍ಯರು, ಕಳಿಸಿಕೊಟ್ಟವರಾರ‍ಯರು ಎಂಬುದನ್ನು ಜನ ಯೋಚನೆ ಮಾಡಬೇಕು. ದೇವೇಗೌಡರು ಕೊನೆಘಟ್ಟದಲ್ಲಿ ಬಂದು ನಮಗೆ ಒಂದು ಓಟು ಕೇಳಿದ್ದಾರೆ ಎನ್ನುವ ಭಾವನೆ ಜನತೆಯಲ್ಲಿ ಬಂದರೆ ಹಣದಿಂದ ಪಕ್ಷ ಉಳಿಯಲ್ಲ, ಆತ ಸಾಯುವ ಮುನ್ನ ಓಟು ಹಾಕೋಣ ಎನ್ನುವ ಭಾವನೆ ಬಂದರೆ 2023 ರಲ್ಲಿ ನಮ್ಮ ಸರ್ಕಾರ ಬರುತ್ತದೆ. ನನ್ನ ನೋವನ್ನು ಅರ್ಥೈಸಿಕೊಂಡು ಜನ ಸಹಾಯ ಮಾಡುತ್ತಾರೆ ಎಂದುಕೊಂಡ್ದಿದೇನೆ ಎಂದು ಹೇಳಿದರು.

ದೇವರಾಜ ಅರಸು ಆದಮೇಲೆ ನಿನ್ನನ್ನು ಮುಖ್ಯಮಂತ್ರಿ ಮಾಡುತ್ತೇನೆಂದು ಇಂದಿರಾ ಗಾಂಧಿ ಅವರು ಮಾತುಕತೆಗಾಗಿ ತ್ರಿಪಾಟಿ ಅವರನ್ನು ಕಳುಹಿಸಿಕೊಟ್ಟಿದ್ದರು. ಅದಕ್ಕೆ ಆಸೆ ಪಡಲಿಲ್ಲ, ಪ್ರಧಾನಮಂತ್ರಿಯಾಗಿ ಮುಂದುವರಿಸುತ್ತೇನೆಂದು ವಾಜಪೇಯಿ ಹೇಳಿದರು. ಆದರೆ ನಾನು ನಿಮ್ಮ ಬೆಂಬಲದಲ್ಲಿ ಮುಂದುವರಿಯುವುದಿಲ್ಲ ಎಂದೆ. ದೇವೇಗೌಡರ ಜೀವನದಲ್ಲಿ ಪಕ್ಷಾಂತರ ಮಾಡಲಿಲ್ಲ. ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಈ ದೇಶ, ಏನು ನಡೆಯುತ್ತಿದೆ ಕರ್ನಾಟಕದಲ್ಲಿ ಎಂದರು.
ಈ ದೇಶ ಕಟ್ಟುವ ವ್ಯವಸ್ಥೆಯಾ ಇದು? ಮುಸಲ್ಮಾನ(Muslims) ಬಂಧುಗಳ ಆಜಾನ್‌(Azan) ಕೂಗುತ್ತಿರುವುದು ನಿನ್ನೆಯಿಂದಲಾ? ಸುಪ್ರಭಾತವನ್ನು ನಮ್ಮಲ್ಲಿ ಅನುಷ್ಠಾನದಲ್ಲಿಟ್ಟು ಇಕೊಂಡಿಲ್ಲವಾ? ಶುರುವಾಯ್ತು ಅದರ ವಿರುದ್ಧ ದೇವಸ್ಥಾನಲ್ಲಿ ಇಂದು ಸುಪ್ರಭಾತ. ಅಂದು ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿ, ಯಡಿಯೂರಪ್ಪ ವಿರೋಧ ಪಕ್ಷದ ನಾಯಕ ಹೇಗೆ ನಡೆಯತ್ತದೆ ಎಂದು ಪ್ರತಿಯೊಂದು ಗೊತ್ತು ನನಗೆ. ಆಗ ಹೈಕೋರ್ಚ್‌ಗೆ ಅರ್ಜಿ ಹಾಕಿಸಿ ಇಬ್ಬರು ಮುಸ್ಲಿಮರು ಇಬ್ಬರು ಹಿಂದೂಗಳು ಸುಪ್ರಿಂ ಕೋರ್ಚ್‌ನಲ್ಲಿ ಯಾರೇ ಅದನ್ನು ಮಾಡಿದರು ಅರೆಸ್ಟ್‌ ಮಾಡಿ ಎಂದು ತುಂಬಾ ಮಾತನಾಡಲು ಹೋಗುವುದಿಲ್ಲ ನೋವಿದೆ ಮಿಸ್ಟೇಕ್‌ ಮಾಡಿಕೊಳ್ಳಬೇಡಿ ಎಂದಷ್ಟೆ ಹೇಳಿದರು.

ಮೇ 13ರ ಕಾರ್ಯಕ್ರಮ ಮುಗಿದ ಮೇಲೆ ಮನೆಯಲ್ಲಿ ಕೂರುವುದಿಲ್ಲ ನನಗೆ ಬುದ್ಧಿಶಕ್ತಿಯಿದೆ. ಶರೀರದಲ್ಲಿ ಆತಂಕವಿಲ್ಲ, ಕೊಂಚ ನೋವಿದೆ. ಇನ್ನೂ 10 ತಿಂಗಳಿದೆ ಒಂದು ತಿಂಗಳಲ್ಲಿ ಕನಿಷ್ಠ ಎರಡು ಕ್ಷೇತ್ರದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ. ಸ್ವತಃ ನಾನೇ ಆ ಕ್ಷೇತ್ರದ ಅಭಿಪ್ರಾಯವನ್ನು ಸಂಗ್ರಹ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

ಕುಮಾರಸ್ವಾಮಿಗೆ(HD Kumaraswamy) ಕೆಲವರು ಹೊಗಳಬಹುದು, ಕೆಲವರು ಬಯ್ಯಬಹುದು. ಅದಲ್ಲ ಮುಖ್ಯ. ನನ್ನ ಪಕ್ಷ, ಕಾರ್ಯಕರ್ತರು ಮುಖ್ಯ. ನಾನೇನು ತಪ್ಪು ಮಾಡಿದ್ದೇನೊ ಗೊತ್ತಿಲ್ಲ. 62 ವರ್ಷ ದುಡಿದ್ದೇನೆ ಯಾರಿಗೂ ತೊಂದರೆ ನೀಡಲಿಲ್ಲ ಎಂದರು.

ವಿಧಾನ ಪರಿಷತ್ತು ಸದಸ್ಯ ಎಸ್‌.ಎಲ್‌. ಭೋಜೇಗೌಡ ಮಾತನಾಡಿ, ಕುಮಾರಸ್ವಾಮಿ ಅವರು ಅವರಪ್ಪನಣೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದವರು ಇಂದು ಕೂಡ ಕಾಂಗ್ರೆಸ್‌ನಲ್ಲಿದ್ದಾರೆ. ಆದರೆ ಕುಮಾರಸ್ವಾಮಿ ಸಿಎಂ ಆಗಿ ಎಷ್ಟೇ ಕಷ್ಟವಿದ್ದರೂ, ಸರ್ಕಾರ ನಡೆಸಲು ಎಷ್ಟೇ ಅಡೆತಡೆಗಳಿದ್ದರೂ ಎಲ್ಲ ಎಡರು ತೊಡರುಗಳನ್ನು ಮೀರಿ ಕೊಟ್ಟಮಾತಿನಂತೆ ನಾಡಿನ ರೈತರ ಸಾಲ ಮನ್ನಾ ಮಾಡಿ ಏಕೈಕ ನಾಯಕ ಕುಮಾರಸ್ವಾಮಿ. ರೈತರ ಸಾಲಮನ್ನಾ ಮಾಡುತ್ತೇವೆಂದು ಹೇಳಿದ ಕಾಂಗ್ರೆಸ್ಸಿಗರು ಮುಖ್ಯಮಂತ್ರಿ ಆಗಿ ಕೆಳಗಿಳಿದರೂ ಆ ಸಾಲ ಮನ್ನಾ ಮಾಡದೇ ಅದನ್ನು ಕುಮಾರಸ್ವಾಮಿ ಹೆಗಲಿಗೆ ಹೊರಿಸಿ, ಮತ್ತೆ ಅವರೇ ಮನ್ನಾ ಮಾಡುವಂತೆ ಮಾಡಿದಿರಿ ಎಂದರು.

ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ರಾಜಕೀಯ ಪಕ್ಷಗಳು ಹೊರತುಪಡಿಸಿ ಜಾತ್ಯತೀತ, ಪಕ್ಷಾತೀತವಾಗಿ ನೀರಾವರಿ ಬಗ್ಗೆ ಮಾತನಾಡುವ ನೈತಿಕತೆ ಇರುವ ಏಕೈಕ ವ್ಯಕ್ತಿ ಎಚ್‌.ಡಿ. ದೇವೇಗೌಡರು ಮಾತ್ರ ಎಂದರು.
ದೇವೇಗೌಡರು, ಪ್ರಧಾನಿ ಆದ ತಕ್ಷಣ, ನೀರಾವರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದರು. ಅದರ ಮೂಲಕ ಕರ್ನಾಟಕ ರಾಜ್ಯಕ್ಕೆ 50 ಸಾವಿರ ಕೋಟಿ ರು. ನೀರಾವರಿಗೆ ಬಂತು. ಆದರೆ, ಈಗ ಈ ಕಾರ್ಯಕ್ರಮ ಜಾರಿಗೆ ಬಂದಿಲ್ಲ ಎಂದು ಹೇಳಿದರು.

‘ಜನತಾ ಜಲಧಾರೆ’ ಬರೀ ಕಾರ್ಯಕ್ರಮ ಅಲ್ಲ, ಇದು ನಮ್ಮ ಹಕ್ಕೊತ್ತಾಯ. ಬಿಜೆಪಿ ಸರ್ಕಾರಕ್ಕೆ ರೈತರ ಬಗ್ಗೆ ಬದ್ಧತೆ ಇದ್ರೆ, ದೇವೇಗೌಡರು ನೀರಾವರಿಗಾಗಿ ಮಾಡಿರುವ ಕೆಲಸವನ್ನು ಪ್ರಧಾನಿ ಮೋದಿ ಅವರು ಗಮನಕ್ಕೆ ತರಬೇಕು. ಕೃಷ್ಣ ಮತ್ತು ಕಾವೇರಿ ಕೊಳ್ಳದ ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಣೆ ಮಾಡಲು ಆಗ್ರಹಿಸಬೇಕು ಎಂದರು.

ದೇಶದ ಐಕ್ಯತೆಗೆ ಧಕ್ಕೆ ತರಲು ಮತಾಂಧ ಶಕ್ತಿಗಳ ಪ್ರಯತ್ನ: ಎಚ್‌.ಡಿ. ದೇವೇಗೌಡ

ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಯುಗ, ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಪಕ್ಷವನ್ನು ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಪಣ ತೊಡಬೇಕು ಎಂದು ಹೇಳಿದರು. ಇದು, ಎಲ್ಲರೂ ವಾಸ ಮಾಡುವ ಪುಣ್ಯ ಭೂಮಿ, ಒಗ್ಗಟ್ಟಿಗೆ ಭಂಗ ತರುವ ಕೆಲಸ ಆಗುತ್ತಿದೆ. ಇದನ್ನು ನೋಡಿ ಸುಮ್ಮನೆ ಇರಲು ಸಾಧ್ಯವಿಲ್ಲ. ಕೋಮು ಸಾಮರಸ್ಯ ಕೆಡಿಸುವ ಕೆಲಸ ಆಗುತ್ತಿದೆ. ಅದಕ್ಕೆ ಅವಕಾಶ ನೀಡಬಾರದು ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್‌, ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌, ಮುಖಂಡರಾದ ಬಿ.ಎಂ.ತಿಮ್ಮಶೆಟ್ಟಿ, ಎಚ್‌.ಎಸ್‌.ಮಂಜಪ್ಪ, ಚಂದ್ರಪ್ಪ, ಹೊಲದಗದ್ದೆ ಗಿರೀಶ್‌, ದೇವಿ ಪ್ರಸಾದ್‌, ನಿಸಾರ್‌ ಅಹಮದ್‌, ಪ್ರೇಮ್‌ಕುಮಾರ್‌, ಸಿ.ಕೆ.ಮೂರ್ತಿ, ಆನಂದ ನಾಯ್ಕ, ವಸಂತಕುಮಾರಿ, ಶ್ರೀದೇವಿ, ನಗರಸಭಾ ಸದಸ್ಯರಾದ ಗೋಪಿ, ಎ.ಸಿ.ಕುಮಾರ್‌, ದಿನೇಶ್‌ ಇದ್ದರು.
 

click me!