ಚನ್ನಪಟ್ಟಣ ಉಪಚುನಾವಣೆ: ಈ ಸರ್ಕಾರ ತೆಗೆವವರೆಗೆ ಉಸಿರು ಎಳೆಯಲ್ಲ, ದೇವೇಗೌಡ

By Kannadaprabha News  |  First Published Nov 9, 2024, 8:59 AM IST

2028ರ ವಿಧಾನಸಭೆ ಚುನಾವಣೆಯಲ್ಲಿ ನಿಲ್ಲುತ್ತೇನೆ. ಈ ನಾನು ನಿಲ್ಲಲ್ಲ ಎಂದು ನಿಖಿಲ್ ಹಠ ಹಿಡಿದಿದ್ದ. ಆದರೆ ಮೋದಿ, ನಡ್ಡಾ, ಶಾ ಅವನನ್ನು ನಿಲ್ಲಿಸಿದ್ದಾರೆ. ಚನ್ನಪಟ್ಟಣ ಬಿಡಬಾರದು ಎಂದು ನಿಲ್ಲಿಸಿದ್ದಾರೆ ಎಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ 
 


ಚನ್ನಪಟ್ಟಣ(ನ.09): ಈ ಸರ್ಕಾರವನ್ನು ತೆಗೆಯುವ ಕೊನೆ ಹಂತದವರೆಗೆ ಈ ಆತ್ಮದಿಂದ ಕೊನೆ ಉಸಿರು ಎಳೆಯುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ತಾಲೂಕಿನ ಸಿಂಗರಾಜಿಪುರ ಗ್ರಾಮದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ನಡೆಸಿದ ಅವರು, ನಿಮಗೆ ಮೀಸಲಾತಿ ತಂದ ವ್ಯಕ್ತಿ ಇದ್ದರೆ ಅದು ದೇವೇಗೌಡ. ೧೯೯೫ ರಲ್ಲಿ ಮಹಿಳೆಯರಿಗೆ ಮೀಸಲಾತಿ ಕಾನೂನು ತಂದು ನಿಮ್ಮ ಮುಂದೆ ನಿಂತಿದ್ದೇನೆ. ಈಗಿರುವ ಸರ್ಕಾರ, ಒಂದು ಸರ್ಕಾರನಾ ? ನಿಮ್ಮ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಿ. ಇದನ್ನ ಸರ್ಕಾರ ಅಂತಾ ಕರೆಯುತ್ತೀರಾ ಎಂದು ಪ್ರಶ್ನಿಸಿದರು. 

Tap to resize

Latest Videos

undefined

5 ಗ್ಯಾರಂಟಿ ಕೊಡಿ ಎಂದು ಜನ ಕೇಳಿದ್ರಾ?: ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

ಸಿಂಗರಾಜಿಪುರ ನನಗೆ ಅತ್ಯಂತ ಪ್ರಿಯವಾದ ಗ್ರಾಮ. ನಮ್ಮ ಪಕ್ಷದ ಮುಖಂಡರಾಗಿದ್ದ ಸಿಂ.ಲಿಂ.ನಾಗರಾಜ್ ಒಬ್ಬ ಪ್ರಾಮಾಣಿಕ ವ್ಯಕ್ತಿ ಎಂದು ಅಗಲಿದ ಹಿರಿಯ ಮುಖಂಡ ಸಿಂ.ಲಿಂ.ನಾಗರಾಜು ಅವರನ್ನು ನೆನೆದರು. ೨೦೨೮ರ ವಿಧಾನಸಭೆ ಚುನಾವಣೆಯಲ್ಲಿ ನಿಲ್ಲುತ್ತೇನೆ. ಈ ನಾನು ನಿಲ್ಲಲ್ಲ ಎಂದು ನಿಖಿಲ್ ಹಠ ಹಿಡಿದಿದ್ದ. ಆದರೆ ಮೋದಿ, ನಡ್ಡಾ, ಶಾ ಅವನನ್ನು ನಿಲ್ಲಿಸಿದ್ದಾರೆ. ಚನ್ನಪಟ್ಟಣ ಬಿಡಬಾರದು ಎಂದು ನಿಲ್ಲಿಸಿದ್ದಾರೆ ಎಂದರು.

ಚನ್ನಪಟ್ಟಣದ ಜನ ದ್ರೋಹ ಮಾಡಲ್ಲ. ನಿಖಿಲ್‌ರನ್ನ ಚುನಾವಣೆಯಲ್ಲಿ ಗೆಲ್ಲಿಸಿ ವಿಧಾನಸೌಧಕ್ಕೆ ಕರೆತಂದು ಕೂರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!