ಕುಸುಮಾ ಬೆನ್ನಿಗೆ ನಿಂತ ಉಮಾಶ್ರೀ : ನೋವುಂಡವರಿಗೆ ಗೊತ್ತು ಅದರ ಸಂಕಷ್ಟ

By Kannadaprabha NewsFirst Published Oct 12, 2020, 1:28 PM IST
Highlights

ಧಾರ್ಮಿಕ ವಿಧಿಯಂತೆ ರವಿಯವರನ್ನು ವಿವಾಹವಾಗಿದ್ದ ಕುಸುಮಾ ಅವರ ಗಂಡನ ಹೆಸರನ್ನು ಹೇಳಬಾರದೆಂದರೆ ಹೇಗೆ.. ನೋವು ಮರೆತು ಸಾಮಾಜಿಕ ಸೇವೆಗೆ ಬಂದವರಿಗೆ ಬೆಂಬಲಿಸಬೇಕು ಎಂದು ಮಾಜಿ ಸಚಿವ ಉಮಾಶ್ರೀ ಹೇಳಿದ್ದಾರೆ

ಬೆಂಗಳೂರು (ಅ.12) : ರಾಜ್ಯದಲ್ಲಿ ಸತ್ತವರ ಹೆಸರನ್ನೇ ಹೇಳಿಕೊಂಡು ರಾಜಕೀಯ ಮಾಡಿದವರಿದ್ದಾರೆ. ಕುಸುಮಾ ಡಿ ಕೆ ರವಿ ಅವರನ್ನು ಧಾರ್ಮಿಕ ವಿಧಿಗಳಂತೆ ಮದುವೆಯಾದವರು. ಅವರು ಗಂಡನ ಹೆಸರು ಹಾಕಿಕೊಳ್ಳುವುದು ಬೇಡ ಅಂದರೆ ಹೇಗೆ ಎಂದು ಮಾಜಿ  ಸಚಿವೆ ಉಮಾಶ್ರೀ ಹೇಳಿದ್ದಾರೆ. 

ಕುಸುಮಾ ಡಿ.ಕೆ ರವಿ ಹೆಸರು ಹೇಳಬಾರದು ಎಂದು ಹೇಳಿದ ಶೋಭಾ ಕರಂದ್ಲಾಜೆ  ಮಾತಿಗೆ ಉಮಾಶ್ರೀ ತಿರುಗೇಟು ನೀಡಿದ್ದಾರೆ. 

 ಅವರ ಗಂಡನ ಹೆಸರನ್ನು ಬಳಸುವ ಬಗ್ಗೆ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಕುಸುಮಾ ವೈಫ್ ಆಫ್ ಡಿ.ಕೆ.ರವಿ. ನೋವುಂಡವರ ನೋವು ಅವರಿಗೇ ಗೊತ್ತು.  ಶೋಭಾ ಕರಂದ್ಲಾಜೆ ಒಂದೇ ದಿಕ್ಕಿನಲ್ಲಿ ಯೋಚಿಸಬಾರದು ಎಂದು ಉಮಾಶ್ರೀ ಹೇಳಿದ್ದಾರೆ.

ಡಿ.ಕೆ ರವಿ ತಾಯಿ ಹೇಳಿಕೆಗೆ ಕುಸುಮಾ ಮೊದಲ ರಿಯಾಕ್ಷನ್ ...

ಸಣ್ಣ ವಯಸ್ಸಿನಲ್ಲೇ ಗಂಡನನ್ನ ಕಳೆದುಕೊಂಡ ಹೆಣ್ಣುಮಗಳು ಕುಸುಮಾ. ಕುಸುಮಾ  ನೋವು ಯಾರಿಗೆ ಅರ್ಥ ವಾಗುತ್ತೆ. ನೋವನ್ನ ಮರೆತು ಸಾಮಾಜಿಕ ಸೇವೆಗೆ ಬಂದಿದ್ದಾರೆ. ಅಂತವರ ಬಗ್ಗೆ ಹೀಗೆ ಹೇಳಿಕೆ ಸರಿಯಲ್ಲ. ಶೋಭಾ ಅವರೇ ನೀವೇನು ಜ್ಯೋತಿಷಿಯಲ್ಲ. ಒಬ್ಬ ಸಂಸದೆಯಾಗಿ ನೀವು ಮಾತನಾಡಿ ಎಂದು ಉಮಾಶ್ರೀ ವಾಗ್ದಾಳಿ ನಡೆಸಿದರು.

ಯಾವುದೇ ಪಕ್ಷದ ಹೆಣ್ಣುಮಗಳಿರಲಿ ಅಂತವರ ಬಗ್ಗೆ ಇಂತಹ ವಿಚಾರ ಚರ್ಚಾ ವಿಷಯ ಮಾಡಬೇಡಿ.  ಕುಸುಮಾ ಕ್ಯಾಂಡಿಡೇಟ್ ಆಗಿರೋದು ನಿಮಗೆ ಅಂಜಿಕೆಯಾಗಿರಬೇಕು.  ಅದಕ್ಕೆ ಇಂತಹ ಮಾತುಗಳನ್ನ ಹೇಳ್ತಿದ್ದೀರ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಉಮಾಶ್ರೀ ಗುಡುಗಿದ್ದಾರೆ. 

click me!