ಬಿಜೆಪಿಗೆ ರಾಜೀನಾಮೆ ನೀಡಲು ಸೊಗಡು ಶಿವಣ್ಣ ತೀರ್ಮಾನ: ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ

By Kannadaprabha News  |  First Published Apr 13, 2023, 1:00 AM IST

ಬಿಜೆಪಿ ಟಿಕೆಟ್‌ ಘೋಷಣೆ ಬೆನ್ನಲ್ಲೇ ತುಮಕೂರು ಜಿಲ್ಲೆಯಲ್ಲಿ ಬಂಡಾಯ ಭುಗಿಲೆದ್ದಿದ್ದು, ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಚಿವ ಸೊಗಡು ಶಿವಣ್ಣ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ತೀರ್ಮಾನಿಸಿದ್ದಾರೆ.


ತುಮಕೂರು (ಏ.13): ಬಿಜೆಪಿ ಟಿಕೆಟ್‌ ಘೋಷಣೆ ಬೆನ್ನಲ್ಲೇ ತುಮಕೂರು ಜಿಲ್ಲೆಯಲ್ಲಿ ಬಂಡಾಯ ಭುಗಿಲೆದ್ದಿದ್ದು, ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಚಿವ ಸೊಗಡು ಶಿವಣ್ಣ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ತೀರ್ಮಾನಿಸಿದ್ದಾರೆ. ತುಮಕೂರಿನ ಮಾಕಂ ಕಲ್ಯಾಣ ಮಂಪಟದಲ್ಲಿ ಬುಧವಾರ ಸಂಜೆ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ನಾನು ಪಕ್ಷಕ್ಕೆ ರಾಜಿನಾಮೆ ಕೊಡುವುದು ಸತ್ಯ. ಈಗಾಗಲೇ ಬ್ಯಾಂಕ್‌ ಅಕೌಂಟ್‌ ಓಪನ್‌ ಮಾಡಿದ್ದೇನೆ. ಎನ್‌ಓಸಿ ತೆಗೆದುಕೊಂಡಿದ್ದೇನೆ, ಯಾವತ್ತು ನಾಮಪತ್ರ ಸಲ್ಲಿಸಬೇಕೆಂದು ತಿಳಿಸುತ್ತೇನೆ ಎಂದರು. ನನ್ನ ಪಕ್ಷದ ಹಿರಿಯ ಮುಖಂಡರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ರಾಜಿನಾಮೆ ಸಲ್ಲಿಸುತ್ತೇನೆ. 

ಇನ್ನು ಪಕ್ಷದ ಕಚೇರಿಯನ್ನು ಸಹ ತುಳಿಯಲು ಇಷ್ಟಪಡುವುದಿಲ್ಲ. ಇನ್ನು ಪಕ್ಷದಲ್ಲಿ ನನಗೆ ಯಾವ ಸ್ಥಾನ ಇರುವುದಿಲ್ಲ, ಗುರುವಾರ ನನ್ನ ರಾಜಿನಾಮೆ ಸಲ್ಲಿಸುವುದಾಗಿ ತಿಳಿಸಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಬೆಂಬಲಿಗರ ಸಭೆಯಲ್ಲಿ ಬೆಂಬಲಿಗರ ಎಲ್ಲ ಮಾತುಗಳನ್ನು ಆಲಿಸಿದ ಸೊಗಡು ಶಿವಣ್ಣ ಅಂತಿಮವಾಗಿ ಪಕ್ಷಕ್ಕೆ ರಾಜಿನಾಮೆ ಸಲ್ಲಿಸುವುದಾಗಿ ಘೋಷಿಸುವುದರೊಂದಿಗೆ ಸುಮಾರು 4 ದಶಕಗಳ ಪಕ್ಷದ ಸಂಬಂಧವನ್ನು ಕಡಿದುಕೊಳ್ಳಲು ತೀರ್ಮಾನಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos

undefined

ರಾಮ​ನ​ಗರ ಕ್ಷೇತ್ರ​ದಲ್ಲಿ ಕಾಂಗ್ರೆಸ್‌-ಜೆಡಿಎಸ್‌​ ಅಭ್ಯ​ರ್ಥಿ​ಗ​ಳಿಗೆ ಅಳಿವು ಉಳಿ​ವಿನ ಪ್ರಶ್ನೆ?

ಕುಣಿಗಲ್‌ನಲ್ಲೂ ಬಂಡಾಯ: ಕುಣಿಗಲ್‌ನಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಮುದ್ದಹನುಮೇಗೌಡ ಹಾಗೂ ರಾಜೇಶ್‌ಗೌಡ ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಹೆಬ್ಬೂರಿನ ತೋಟದ ಮನೆಯಲ್ಲಿ ಬೆಂಬಲಿಗರ ಸಭೆ ನಡೆಸಿದ ಮುದ್ದಹನುಮೇಗೌಡ ಅವರು ತಾವು ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಆದರೆ ನನಗೆ ಟಿಕೆಟ್‌ ನೀಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಜನರ ಬಳಿ ಹೋಗಿ ಎಂದು ಬೆಂಬಲಿಗರು ಹೇಳಿದ್ದಾರೆ. ಜನರ ತೀರ್ಮಾನವನ್ನು ಗೌರವಿಸಬೇಕು ಎಂದರು. ಇನ್ನು ಕುಣಿಗಲ್‌ನಿಂದ ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಾಜೇಶಗೌಡ ಅವರು ಇನ್ನೆರೆಡು ದಿವಸದಲ್ಲಿ ತಮ್ಮ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ. 

ಇನ್ನೊಂದೆಡೆ ಅವರ ಬೆಂಬಲಿಗರು ತುಮಕೂರು ಜಿಲ್ಲಾ ಬಿಜೆಪಿ ಕಚೇರಿ ಮುಂದೆ ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು. ನಿಷ್ಠಾವಂತ ಕಾರ್ಯಕರ್ತನಿಗೆ ಬಿಜೆಪಿ ಪಕ್ಷ ಮೋಸ ಮಾಡಿದೆ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮಧುಗಿರಿಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಹನುಮಂತೇಗೌಡ ಕೂಡ ಟಿಕೆಟ್‌ ಸಿಗದೇ ಇದ್ದುದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಹೈಕಮಾಂಡ್‌ ಟಿಕೆಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ನಿಷ್ಟಾವಂತನಾಗಿ 14 ವರ್ಷ ಪಕ್ಷಕ್ಕೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ಪಕ್ಷ ಕಟ್ಟುವುದಕ್ಕೆ ಮಧುಗಿರಿ ತಾಲೂಕಿನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಜನರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಟಿಕೆಟ್‌ ಬಗ್ಗೆ ಮತ್ತೆ ವರಿಷ್ಠರಲ್ಲಿ ಮನವಿ ಮಾಡಿದ್ದೇನೆ. ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್‌ ಕೊಡಬೇಕು ಅನ್ನುವ ಮರುಬೇಡಿಕೆ ಇಟ್ಟಿರುವುದಾಗಿ ತಿಳಿಸಿದರು. ವರಿಷ್ಠರ ಭೇಟಿಗೆ ತೆರಳುತ್ತಿದ್ದು, ಆ ಬಳಿಕ ಪಕ್ಷದ ನಿರ್ಧಾರದಂತೆ ನಾನು ಮುಂದುವರೆಯುತ್ತೇನೆ ಎಂದರು. ಮನೆ ಮಠ ಬಿಟ್ಟು ನನಗೆ ಅಂತಾ ದುಡಿದಂತವರು ಇದ್ದಾರೆ. ಪಾರ್ಟಿಯ ಹಿನ್ನೆಲೆಯಿಂದ ಬಂದು ಬೇರೆ ಬೇರೆ ನಿರ್ಧಾರಗಳನ್ನ ತೆಗೆದುಕೊಳ್ಳೋ ವ್ಯಕ್ತಿ ನಾನಲ್ಲ ಎಂದರು. ನಿಷ್ಠಾವಂತನಾಗಿ ದುಡಿದು ಈ ವಿಚಾರದಲ್ಲಿ ನೋವಾಗಿದೆ. ಆ ನೋವನ್ನೂ ಸಹಿಸಿಕೊಂಡು ಪಕ್ಷವನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟುವ ಹುಮ್ಮಸ್ಸು ಹೆಚ್ಚಾಗಿದೆ ಎಂದರು.

ಚುನಾವಣಾಧಿಕಾರಿಯನ್ನೇ ಹೊರಕಳಿಸಿದ ಬೆಂಬಲಿಗರು: ತುಮಕೂರು ನಗರದ ಮಾಕಂ ಕಲ್ಯಾಣ ಮಂಟಪದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಚುನಾವಣಾಧಿಕಾರಿಗಳನ್ನೇ ಹೊರಕಳಿಸಿದ ಘಟನೆ ನಡೆದಿದೆ. 300 ಕ್ಕೂ ಹೆಚ್ಚು ಬೆಂಬಲಿಗರು ಸೇರಿ ಸಭೆ ನಡೆಸುತ್ತಿದ್ದ ವೇಳೆ ಸಭೆಗೆ ಅನುಮತಿ ಇಲ್ಲದ ಕಾರಣ ಫ್ಲೈಯಿಂಗ್‌ ಸ್ವಾ$್ಕಡ್‌ ಅಧಿಕಾರಿಗಳ ಭೇಟಿದಾಗ ಸಭೆಗೆ ಅನುಮತಿ ಕೋರಿದರೂ ನೀವು ನೀಡಿಲ್ಲ ಎಂದು ಚುನಾವಣಾಧಿಕಾರಿಯನ್ನೇ ಬೆಂಬಲಿಗರು ತರಾಟೆಗೆ ತೆಗೆದುಕೊಂಡರು. ಅನುಮತಿ ಇಲ್ಲದ ಕಾರಣ ಸಭೆ ನಿಲ್ಲಿಸಲು ಆಗಮಿಸಿದ್ದ ಫ್ಲೈಯಿಂಗ್‌ ಸ್ಕಾ$್ವಡ್‌ಗಳನ್ನು ಬೆಂಬಲಿಗರ ತರಾಟೆ ಹಿನ್ನೆಲೆ ವಾಪಸ್ಸಾದರು.

ಮಹದೇಶ್ವರನ ಆಶೀರ್ವಾದದಿಂದ ಚಾಮರಾಜನಗರ ಮಾದರಿ ಜಿಲ್ಲೆಯಾಗಿಸುವಾಸೆ: ಸಚಿವ ಸೋಮಣ್ಣ

ನಾನು ಪಕ್ಷಕ್ಕೆ ರಾಜಿನಾಮೆ ಕೊಡುವುದು ಸತ್ಯ. ಯಾವತ್ತು ನಾಮಪತ್ರ ಸಲ್ಲಿಸಬೇಕೆಂದು ತಿಳಿಸುತ್ತೇನೆ. ಇನ್ನು ಪಕ್ಷದಲ್ಲಿ ನನಗೆ ಯಾವ ಸ್ಥಾನ ಇರುವುದಿಲ್ಲ, ಹಾಗೂ ಕಚೇರಿಯನ್ನು ತುಳಿಯಲೂ ಸಹ ಇಷ್ಟಪಡುವುದಿಲ್ಲ. ಗುರುವಾರ ನನ್ನ ರಾಜಿನಾಮೆ ಸಲ್ಲಿಸಲಿದ್ದೇನೆ
-ಸೊಗಡು ಶಿವಣ್ಣ , ಮಾಜಿ ಸಚಿವ

click me!