ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ ರಾಜ್ಯ ಬಿಜೆಪಿ ಸಂಸದರಿಗೆ ಸವಾಲು ಹಾಕಿದ್ದಾರೆ.
ಕೊಪ್ಪಳ, (ಫೆ.14): ನಮ್ಮ ಸಂಸದರಿಗೆ ತಾಕತ್ ಇದ್ರೆ ಮೋದಿ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲಿ. ಮೋದಿ ಇವರನ್ನು ಹತ್ತಿರಕ್ಕೂ ಕೂಡ ಬಿಟ್ಟುಕೊಳ್ಳಲ್ಲ. ನಮ್ಮ ಸಂಸದರನ್ನ 200 ಮೀಟರ್ ದೂರ ನಿಲ್ಲಿಸುತ್ತಾನೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದ್ದಾರೆ.
ಇಂದು (ಭಾನುವಾರ) ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಂಗಡಗಿ, ಮೋದಿಗೆ ನಮ್ಮ ಕರ್ನಾಟಕದ ಸಂಸದರೆಂದರೆ ನಿರ್ಲಕ್ಷ್ಯ. ಕರ್ನಾಟಕದ ಸಂಸದರು ಕೆಲಸ ಮಾಡುವುದು ಬೇಡ. ಪ್ರಧಾನಿ ಮೋದಿಗೆ ಗೊತ್ತಿದೆ ಸಂಸದರ ಅವಶ್ಯಕತೆ ಇಲ್ಲ. ಯಾಕಂದರೆ ಅವರನ್ನು EVMನಿಂದ ಗೆಲ್ಲಿಸಿದ್ದೇನೆಂದು ಗೊತ್ತಿದೆ ಎಂದರು.
24 ಗಂಟೆಯಲ್ಲಿ 5 ಕಾಂಗ್ರೆಸ್ ಶಾಸಕರ ರಾಜೀನಾಮೆ: ಹೊಸ ಬಾಂಬ್ ಸಿಡಿಸಿದ ಸಚಿವ
ಇನ್ಮುಂದೆ ಮೋದಿ ಅಂದ್ರೆ ಪೆಟ್ರೋಲ್, ಡೀಸೆಲ್ ಅನ್ನಬೇಕು. ಮೋದಿ ಅಂದ್ರೆ ಸುಳ್ಳ ಅನ್ನಬೇಕು ಎಂದು ವಾಗ್ದಾಳಿ ನಡೆಸಿದ ಶಿವರಾಜ್ ತಂಗಡಗಿ, ಮೋದಿ ಯಾವ ನೈತಿಕತೆಯಲ್ಲಿ ಕಾಂಗ್ರೆಸ್ ಬಗ್ಗೆ ಮಾತಾಡುತ್ತಾರೆ. ಬಿಜೆಪಿಯವರು ಅಂದ್ರೆ ಸುಳ್ಳುಕೋರರ, ದಗಾಕೋರರೆಂದು ಕಿಡಿಕಾರಿದರು.
ಭಾರತ ದೇಶವನ್ನು ಆಳುತ್ತಿರುವುದು ಇಬ್ಬರು ಗುಜರಾತಿಗಳು. ನರೇಂದ್ರ ಮೋದಿ, ಅಮಿತ್ ಶಾ ದೇಶವನ್ನು ಮಾರುತ್ತಿದ್ದಾರೆ. ಅಂಬಾನಿ, ಅದಾನಿ ಇಡೀ ದೇಶವನ್ನೇ ಖರೀದಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.