ಯಡಿಯೂರಪ್ಪ ಹೊರಗಿಟ್ಟು ಜೆಡಿಎಸ್‌ ಜತೆ ಮೈತ್ರಿ: ರೇಣುಕಾಚಾರ್ಯ ಕಿಡಿ

Published : Oct 10, 2023, 05:10 AM IST
ಯಡಿಯೂರಪ್ಪ ಹೊರಗಿಟ್ಟು ಜೆಡಿಎಸ್‌ ಜತೆ ಮೈತ್ರಿ: ರೇಣುಕಾಚಾರ್ಯ ಕಿಡಿ

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲಬೇಕಿದೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಆದರೆ, ರಾಜ್ಯದಲ್ಲಿ ಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ಇನ್ನಷ್ಟು ನೆಲೆಕಚ್ಚುತ್ತೆ. ಕರ್ನಾಟಕದಲ್ಲಿ ಯಡಿಯೂರಪ್ಪಗೆ ಮಾತ್ರ ಮತ ಗಳಿಸುವ ಶಕ್ತಿ ಇದೆ. ಅವರನ್ನು ಬಿಟ್ಟು ಬಿಜೆಪಿ ನಿಯಂತ್ರಣ ಮಾಡಿದರೆ ಪಕ್ಷ ಹೇಗೆ ಗೆಲ್ಲುತ್ತದೆ ಎಂದು ಖಾರವಾಗಿ ಹೇಳಿದ ಎಂ.ಪಿ.ರೇಣುಕಾಚಾರ್ಯ 

ಶಿವಮೊಗ್ಗ(ಅ.10):  ಬಿ.ಎಸ್‌.ಯಡಿಯೂರಪ್ಪ ಅವರು ಸೈಕಲ್, ಬೈಕ್, ಕಾರು ಮೂಲಕ ರಾಜ್ಯದಾದ್ಯಂತ ಪಕ್ಷ ಸಂಘಟನೆ ಮಾಡಿದ್ದಾರೆ. ದಕ್ಷಿಣ ಭಾರದತದ ಬಿಜೆಪಿಗೆ ಯಡಿಯೂರಪ್ಪ ಅವರಂತಹ ನಾಯಕ ಇನ್ನು ಸಿಗಲ್ಲ. ಅಂತವರನ್ನೇ ಮೂಲೆಗುಂಪು ಮಾಡಿದರು. ಅವರ ಕಣ್ಣೀರಿನಿಂದ ಇವತ್ತು ಬಿಜೆಪಿ ನೆಲಕಚ್ಚಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲಬೇಕಿದೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಆದರೆ, ರಾಜ್ಯದಲ್ಲಿ ಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ಇನ್ನಷ್ಟು ನೆಲೆಕಚ್ಚುತ್ತೆ. ಕರ್ನಾಟಕದಲ್ಲಿ ಯಡಿಯೂರಪ್ಪಗೆ ಮಾತ್ರ ಮತ ಗಳಿಸುವ ಶಕ್ತಿ ಇದೆ. ಅವರನ್ನು ಬಿಟ್ಟು ಬಿಜೆಪಿ ನಿಯಂತ್ರಣ ಮಾಡಿದರೆ ಪಕ್ಷ ಹೇಗೆ ಗೆಲ್ಲುತ್ತದೆ ಎಂದು ಖಾರವಾಗಿ ಹೇಳಿದರು.

ಶಿವಮೊಗ್ಗ: ಚೆನ್ನಿ ಅಲ್ಲ, ಈಶ್ವರಪ್ಪರೇ ಶಾಸಕ ಹಾಗೆನ್ನುತ್ತಿವೆ ವಾರ್ಡ್‌ ಬೋರ್ಡ್..!

ರಾಜ್ಯದಲ್ಲಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿ, ಮೋದಿ ಭಾವಚಿತ್ರ ಹಿಡಿದು ಹೋದರೆ ಮತ ಸಿಗಲ್ಲ. ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಮಾದರಿ ಮಾಡಲು ಹೋಗಿ 70 ಜನ ಹೊಸಬರಿಗೆ ಟಿಕೆಟ್ ನೀಡಿದರು. ಜಗದೀಶ್ ಶೆಟ್ಟರ್ ಅಂಥವರನ್ನು ಕಡೆಗೆಣಿಸಿದರು. ಯಡಿಯೂರಪ್ಪ ಎಲ್ಲ ಸಮುದಾಯದವರಿಗೆ ಮೀಸಲಾತಿ ಕೊಡಲು ಹೋಗಿದ್ರು, ಅದಕ್ಕೆ ಬ್ರೇಕ್ ಹಾಕಿದ್ರು ಎಂದು ಸ್ವಪಕ್ಷದ ವರಿಷ್ಠರ ವಿರುದ್ಧವೇ ಹರಿಹಾಯ್ದರು.

ಕೋರ್ ಕಮಿಟಿ ನಿಯಂತ್ರಣದಲ್ಲಿ ಪಕ್ಷ ಇರಬೇಕಾ? ಅವರೇ ಯಡಿಯೂರಪ್ಪ ಅವರನ್ನು ಮುಗಿಸಿದರಲ್ವ ಎಂದು ಪ್ರಶ್ನಾರ್ಥಕವಾಗಿ ನುಡಿದ ಅವರು ಹೋರಾಟ ಹಿನ್ನೆಲೆಯಿಂದ ಯಡಿಯೂರಪ್ಪ ಬಂದವರು. ನಾನು ಕೂಡ ಪಾದಯಾತ್ರೆ ಮಾಡಿ ಬಂದವನು. ಯಡಿಯೂರಪ್ಪ ವಿಚಾರದಲ್ಲಿ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ. ಈ ರೀತಿಯ ಸರ್ವಾಧಿಕಾರಿ ಧೋರಣೆ ಮಾಡಬೇಡಿ ಎಂದು ಕಿಡಿಕಾರಿದರು.

ನನಗೂ ರಾಜ್ಯಾಧ್ಯಕ್ಷನಾಗುವ ಸಾಮಾರ್ಥ್ಯ ಇದೆ

ರಾಜ್ಯಾಧ್ಯಕ್ಷರ ಮೇಲೆ ಗೌರವವಿದೆ. ಆದರೆ. ನಮಗೆ ರಬ್ಬರ್ ಸ್ಟ್ಯಾಂಪ್ ರಾಜ್ಯ ಅಧ್ಯಕ್ಷರ ಅಗತ್ಯವಿಲ್ಲ. ನನಗೂ ರಾಜ್ಯಾಧ್ಯಕ್ಷರಾಗುವ ಸಾಮರ್ಥ್ಯವಿದೆ. ಯಾರಿಗೆ ಸಾಮರ್ಥ್ಯವಿದೆಯೋ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ. ತಕ್ಷಣವೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕನ ಸ್ಥಾನವನ್ನು ಭರ್ತಿ ಮಾಡಿ ಎಂದು ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.
ಯಡಿಯೂರಪ್ಪ ಒಬ್ಬ ಶಿಲ್ಪಿಯಿದ್ದಂತೆ. ನಾನೊಬ್ಬ ಕಾಡುಗಲ್ಲು ಆಗಿದ್ದೆ, ನನ್ನನ್ನು ಪರಿವರ್ತನೆ ಮಾಡಿದವರು ಯಡಿಯೂರಪ್ಪ. ಅವರು ಇಲ್ಲದಿದ್ದರೆ ನಾನು ಬೀಡಿ ಸೇದುತ್ತ, ಎಣ್ಣೆ ಹೊಡ್ಕೊಂಡು ಇರ್ತಿದ್ದೆ. ನಾನು ಈಗಲೂ ಬಿಜೆಪಿ ಕಟ್ಟಾಳು, ಕೇಸರಿ- ಹಿಂದುತ್ವ ಎಂದಿಗೂ ಇರುತ್ತೆ ಎಂದರು.

ಶಿವಮೊಗ್ಗ ಗಲಭೆ ಹಿಂದೆ ಭಯೋತ್ಪಾದನಾ ಸಂಘಟನೆ ಪಾತ್ರ: ನಳಿನ್ ಕುಮಾರ್ ಕಟೀಲ್‌

ರಾಗಿಗುಡ್ಡ ಪ್ರಕರಣ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿ

ರಾಗಿಗುಡ್ಡದಲ್ಲಿ ನಡೆದ ಕಲ್ಲುತೂರಾಟ ಪ್ರಕರಣ ಆರೋಪಿಗಳನ್ನು ಬಂಧಿಸಿದರೆ ಸಾಲದು ತಪ್ಪಿತಸ್ಥರನ್ನು ಮುಲಾಜಿಲ್ಲದೆ ಎನ್ಕೌಂಟರ್ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.

ರಾಗಿಗುಡ್ಡದ ಗಲಭೆ ವಿಚಾರದಲ್ಲಿ ಯಾರು ಕೂಡ ಒಟ್ ಬ್ಯಾಂಕ್ ರಾಜಕಾರಣ ಮಾಡಬಾರದು. ಖಡ್ಗ, ಔರಂಗಜೇಬನ ಚಿತ್ರ ಪ್ರದರ್ಶನ ಸಂಘರ್ಷ ತರುತ್ತೆ. ಜಿಲ್ಲಾಡಳಿತ ಇಂತಹ ಪೆಕ್ಲ್‌ ಹಾಕುವುದಕ್ಕೆ ಬಿಡಬಾರದಿತ್ತು. ಆದರೆ, ಅಧಿಕಾರಿಗಳು ತಡೆದಿಲ್ಲ. ಈ ಪ್ರಕರಣದಲ್ಲಿ ಮತಗಳನ್ನು ಡಿವೈಡ್ ಮಾಡುವ ಕಾರ್ಯ ನಡೆದಿದೆ. ತನಿಖಾಧಿಕಾರಿ ಅಮಾನತು ಆಗಬಾರದಿತ್ತು. ಇಲ್ಲಿನ ಎಸ್ಪಿ ಹೇಳಿಕೆ ನೋಡಿದೆ ಹಾಗಾದರೆ ಗಲಾಟೆ ಮಾಡಿದವರು ಯಾರು? ಭಯೋತ್ಪಾದನೆ ಮಟ್ಟಹಾಕದಿದ್ದರೆ ಮುಂದೆ ನಾವೇ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!