108 ಕೆರೆಗಳು ತುಂಬುವ ಯೋಜನೆ ಜಾರಿಗೆ ತಂದು ನಮ್ಮ ಬಬಲೇಶ್ವರ ಮತಕ್ಷೇತ್ರದಲ್ಲಿ ನೀರಾವರಿ ಮಾಡಿದರೆ ನಿಮ್ಮನ್ನು ಬಂಗಾರದಲ್ಲಿ ತೂಗುತ್ತೇನೆ ಎಂದು ಎಂ.ಬಿ.ಪಾಟೀಲ ಹೇಳಿದ್ದರು. ಈಗ ಅವರ ಮತಕ್ಷೇತ್ರದ ಎಲ್ಲ ಕೆರೆಗಳು ತುಂಬಿ ಹರಿಯತ್ತಿದೆ. ಹಾಗಂತ ಅವರು ನಮ್ಮನ್ನು ಬಂಗಾರದಲ್ಲಿ ತೂಗುವುದು ಬೇಡ.
ತಿಕೋಟಾ (ಅ.16): 108 ಕೆರೆಗಳು ತುಂಬುವ ಯೋಜನೆ ಜಾರಿಗೆ ತಂದು ನಮ್ಮ ಬಬಲೇಶ್ವರ ಮತಕ್ಷೇತ್ರದಲ್ಲಿ ನೀರಾವರಿ ಮಾಡಿದರೆ ನಿಮ್ಮನ್ನು ಬಂಗಾರದಲ್ಲಿ ತೂಗುತ್ತೇನೆ ಎಂದು ಎಂ.ಬಿ.ಪಾಟೀಲ ಹೇಳಿದ್ದರು. ಈಗ ಅವರ ಮತಕ್ಷೇತ್ರದ ಎಲ್ಲ ಕೆರೆಗಳು ತುಂಬಿ ಹರಿಯತ್ತಿದೆ. ಹಾಗಂತ ಅವರು ನಮ್ಮನ್ನು ಬಂಗಾರದಲ್ಲಿ ತೂಗುವುದು ಬೇಡ. ನೀರಾವರಿ ಯೋಜನೆ ಜಾರಿಗೆ ತಂದಿರುವ ನಮ್ಮ ಬಿಜೆಪಿ ಸರ್ಕಾರದ ಸ್ಮರಣೆ ಮಾಡಿದರೆ ಸಾಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದರು.
ಪಟ್ಟಣದ ಕನಕದಾಸ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಬಿಜೆಪಿ ವಿಜಯಪುರ ಜಿಲ್ಲೆ ಹಿಂದುಳಿದ ವರ್ಗಗಳ ಮೋರ್ಚಾ ಜನ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಒಟ್ಟು . 12,000 ಜಮಾ ಮಾಡುತ್ತದೆ. ದೇಶದಲ್ಲಿ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಜಾರಿಗೆ ತಂದಿದ್ದು, ಈಗ ನಾವೆಲ್ಲರೂ ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಬಲಪಡಿಸಬೇಕು. ಅ.30 ಕಲಬುಗಿಯಲ್ಲಿ ನಡೆಯುವ ಜನ ಜಾಗೃತಿ ಸಮಾವೇಶದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಕೋರಿದರು.
ಆರ್‌ಎಸ್ಎಸ್ ಬ್ರಿಟಿಷ್ ಜೊತೆಗೆ ಶಾಮೀಲು ಆಗಿದ್ರು: ರಾಮಲಿಂಗಾರೆಡ್ಡಿ ವಾಗ್ದಾಳಿ
ಬಿಜೆಪಿ ಧುರೀಣ ವಿಜುಗೌಡ ಪಾಟೀಲ ಮಾತನಾಡಿ, ಬಂಗಾರಮ್ಮ ಸಜ್ಜನವರು ಉಚಿತವಾಗಿ ಭೂಮಿ ನೀಡಿದರು. ಬಂಥನಾಳ ಶಿವಯೋಗಿಗಳು ಜೋಳಿಗೆ ಹಾಕಿ ಜನ ಸಂಗ್ರಹಣೆ ಮಾಡಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿನಮ್ಮ ಮಕ್ಕಳಿಗೆ ಶಿಕ್ಷಣವಂತರಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಂಥಾ ಮಹಾನುಭಾವರನ್ನು ಸ್ಮರಿಸಬೇಕು. ಅದನ್ನು ಬಿಟ್ಟು ತಮ್ಮ ಭುಜ ತಾವೇ ತಟ್ಟಿಕೊಳ್ಳುವ ಎಂ.ಬಿ.ಪಾಟೀಲ ಅವರಂಥವರನ್ನು ನಂಬಬಾರದು. ಎಂದರು.
ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಎ, ವಿವೇಕ ಡಬ್ಬಿ, ಸಾಬು ಮಾಶ್ಯಾಳ ಮಾತನಾಡಿದರು. ಗುರುಲಿಂಗಪ್ಪ ಅಂಗಡಿ, ಉಮೇಶ ಕೋಳಕುರ, ಸಂಜುಗೌಡ ಪಾಟೀಲ, ಸುಭಾಸಗೌತ ಬಿರಾದಾರ, ತಿರಗೋಂಡ ಗದ್ಯಾಳ, ಶಿವಪ್ಪ ಪೂಜಾರಿ, ರಾಜು ಕುಲಕರ್ಣಿ, ಶಿದರಾಮ ಪೂಜಾರಿ, ಮಾನಿಂಗ ಮಂಟೂರ, ರಾಜು ಕಡಿಬಾಗಿಲ, ಸುರೇಶ ಕೋಣ್ಣೂರ, ರಾನು ಹುಲ್ಲೂರ ಹಾಗೂ ಎಲ್ಲ ಬಿಜೆಪಿ ಕಾರ್ಯಕರ್ತರು ಇದ್ದರು.
ದಿನಕ್ಕೊಂದು ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ: ಜನರ ವಿಶ್ವಾಸದೊಂದಿಗೆ ಗೆಲ್ಲುತ್ತೇನೆ ಎನ್ನುವ ಧೈರ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲ. ಆದ್ದರಿಂದಲೇ ದಿನಕ್ಕೊಂದು ಕ್ಷೇತ್ರಗಳನ್ನು ಹುಡುಕುತ್ತಾ ಹೊರಟಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ಸಾಬರು ಜಾಸ್ತಿ ಇದ್ದಾರೆ ಎಂದು ಹುಡುಕುತ್ತಾ ಹೊರಟಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಇಂತಹ ದಯನೀಯ ಸ್ಥಿತಿ ಬರಬಾರದು ಎಂದು ಮೂದಲಿಸಿದರು. ಚಾಮುಂಡಿ ಕ್ಷೇತ್ರದಲ್ಲಿ ಸೋಲಿನ ನಂತರವೂ ಪಾಠ ಕಲಿಯದ ಸಿದ್ದರಾಮಯ್ಯ, ಕ್ಷೇತ್ರ ಬದಲಾಯಿಸುವುದರಿಂದ ಏನನ್ನು ಸಾಧಿಸಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.
ಒಗ್ಗಟ್ಟಾಗಿದ್ದರೆ ಮಾತ್ರ ಬಿಜೆಪಿಗೆ ಅಧಿಕಾರ ಖಚಿತ: ಸುರಾನಾ
ಶಾಸಕರಾದವರಿಗೆ ಜನರ ಮನಸನ್ನು ಗೆಲ್ಲಲು ಸಾಧ್ಯವಾಗದಿದ್ದರೆ ಹೀಗೆ ಕ್ಷೇತ್ರ ಬದಲಿಸುವ ಅನಿವಾರ್ಯತೆ ಬರಲಿದೆ. ಅದು ಈಗ ಸಿದ್ದರಾಮಯ್ಯ ಅವರಿಗೆ ಬಂದಿದೆ ಎಂದು ಹೇಳಿದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದಕ್ಕೆ ಅಯೋಗ್ಯವಾದ ವ್ಯಕ್ತಿ. ಸಿದ್ದರಾಮಯ್ಯ ಹಗುರವಾಗಿ ಬಾಯಿ ಬಿಡುವಂತಹ ವ್ಯಕ್ತಿ. ಅಂತಹ ವ್ಯಕ್ತಿ ಹೇಗೆ ಮುಖ್ಯಮಂತ್ರಿಯಾಗಲು ಸಾಧ್ಯ? ನಾನು ಮಾತ್ರ ಸತ್ಯ ಹರಿಶ್ಚಂದ್ರನ ಮೊಮ್ಮಗ, ನನ್ನ ಬಿಟ್ಟರೆ ಮತ್ಯಾವ ರಾಜಕಾರಣಿಗಳೇ ಇಲ್ಲ ಅನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.