ಸಿದ್ದರಾಮಯ್ಯ ‘ನಾ​ನು’ ಎಂಬ ಅಹಂಕಾರ ಬಿಡ​ಲಿ: ಈಶ್ವ​ರ​ಪ್ಪ

By Govindaraj S  |  First Published Nov 29, 2022, 3:20 AM IST

ಸಿದ್ದರಾಮಯ್ಯ ಎಂತಹ ಗಿರಾಕಿ ಎಂದರೆ ಕುರುಬ ಸಮಾಜ ಹುಟ್ಟಿದ್ದೇ ನನ್ನಿಂದ ಎಂದು ಹೇಳಿಲ್ಲ ಅಷ್ಟೇ. ಸಂತ ಕನಕದಾಸರಿಗೆ ಬರೆದು ಕೊಟ್ಟಿದ್ದು ನಾನೇ, ಸಂಗೊಳ್ಳಿ ರಾಯಣ್ಣಗೆ ಹೋರಾಟ ಮಾಡಲು ಹೇಳಿಕೊಟ್ಟಿದ್ದೇ ನಾನೇ ಎಂದು ಹೇಳಲಿಲ್ಲ ಅಷ್ಟೇ. 


ಬೆಂಗಳೂರು (ನ.29): ‘ಸಿದ್ದರಾಮಯ್ಯ ಎಂತಹ ಗಿರಾಕಿ ಎಂದರೆ ಕುರುಬ ಸಮಾಜ ಹುಟ್ಟಿದ್ದೇ ನನ್ನಿಂದ ಎಂದು ಹೇಳಿಲ್ಲ ಅಷ್ಟೇ. ಸಂತ ಕನಕದಾಸರಿಗೆ ಬರೆದು ಕೊಟ್ಟಿದ್ದು ನಾನೇ, ಸಂಗೊಳ್ಳಿ ರಾಯಣ್ಣಗೆ ಹೋರಾಟ ಮಾಡಲು ಹೇಳಿಕೊಟ್ಟಿದ್ದೇ ನಾನೇ ಎಂದು ಹೇಳಲಿಲ್ಲ ಅಷ್ಟೇ. ಇಡೀ ಕುರುಬ ಸಮಾಜ ಅಭಿವೃದ್ಧಿಗೆ ನಾನೇ ಕಾರಣ ಎನ್ನುತ್ತಾರೆ’ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿದ್ದರಾಮಯ್ಯಗೆ ಒಂದು ರೀತಿ ಹುಚ್ಚು ಹಿಡಿದಿದೆ. ನಾನೊಬ್ಬನೇ ಹಿಂದುಳಿದ ನಾಯಕ, ನಾನೊಬ್ಬನೇ ದಲಿತ ನಾಯಕ ಎನ್ನುವುದು. ಸಿದ್ದರಾಮಯ್ಯ ನಾನು ನಾನು ಎನ್ನುವುದನ್ನು ಬಿಟ್ಟರೆ ಇನ್ನೂ ಒಳ್ಳೆಯ ನಾಯಕರಾಗುತ್ತಾರೆ. ಕನಕದಾಸರು ಸಹ ಅದನ್ನೇ ಹೇಳಿದ್ದು, ನಾನು ಎನ್ನುವ ಪದವನ್ನು ಬಿಟ್ಟರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಸಿದ್ದರಾಮಯ್ಯಗೆ ನಾನು ಎನ್ನುವುದನ್ನು ಇಟ್ಟುಕೊಂಡು ಇನ್ನು, ನರಕದಲ್ಲಿಯೇ ಇದ್ದಾರೆ’ ಎಂದು ಟೀಕಿಸಿದರು.

Tap to resize

Latest Videos

ಸಿದ್ದರಾಮಯ್ಯ ಅಲೆಮಾರಿ ರಾಜಕಾರಣಿ, ಎಲ್ಲೇ ನಿಂತ್ರೂ ಸೋಲ್ತಾರೆ: ಈಶ್ವರಪ್ಪ

‘ಎಸ್‌ಟಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿ ಎಂದು ಸ್ವಾಮೀಜಿಗಳು ಸಿದ್ದರಾಮಯ್ಯ ಮನೆಗೆ ಹೋದರೆ, ಇದು ಆಗುವುದಿಲ್ಲ ಎಂದು ಹೇಳುವ ಮೂಲಕ ಇಡೀ ಕುರುಬ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಮಾವೇಶಕ್ಕೆ 7-8 ಲಕ್ಷ ಮಂದಿ ಆಗಮಿಸಿದ್ದರು. ಅವರನ್ನು ನಾನೇ ಕಳಿಸಿದ್ದು ಎಂದು ಹೇಳಲಿಲ್ಲ. ನಾನು ಎನ್ನುವ ಅಹಂಕಾರ ಸಿದ್ದರಾಮಯ್ಯಗೆ ಹೋದರೆ ರಾಜ್ಯ ಜನ ಇನ್ನೂ ಹೆಚ್ಚು ಗುರುತಿಸುತ್ತಾರೆ. ಮುಖ್ಯಮಂತ್ರಿ ನಾನೇ ಎಂದು ಹೇಳುತ್ತಿರುವ ಅವರಿಗೆ ಎಲ್ಲಿಂದ ಸ್ಪರ್ಧೆ ಮಾಡಬೇಕು ಎನ್ನುವುದೇ ಗೊತ್ತಿಲ್ಲ’ ಎಂದು ಟೀಕಿ​ಸಿ​ದ​ರು.

ಡಿಕೆ​ಶಿ​ಗೆ ಚಾಟಿ: ‘ಇನ್ನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಷ್ಟು ಸ್ವಾರ್ಥಿ ಎಂದರೆ ‘ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಲು ಅವಕಾಶ ನೀಡಲ್ಲ, ಜಾತಿಗೆ ಅವಕಾಶ ನೀಡುವುದಿಲ್ಲ’ ಎನ್ನುತ್ತಾರೆ. ಆದರೆ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬಿಟ್ಟರೆ ನಾನೇ ಮುಂದಿನ ಒಕ್ಕ​ಲಿ​ಒ​ಗ ಮುಖ್ಯಮಂತ್ರಿ ಎನ್ನುವ ಸ್ವಾರ್ಥದ ಮಾತುಗಳನ್ನಾಡುತ್ತಾರೆ. ಇವರಿಬ್ಬರ ಬಡಿದಾಟದಿಂದಾಗಿ ಕಾಂಗ್ರೆಸ್‌ ಕಾರ್ಯಕರ್ತರು ಅನಾಥರಾಗಿದ್ದಾರೆ’ ಎಂದು ಟೀಕಿಸಿದರು.

ಸಿದ್ದರಾಮಯ್ಯರನ್ನು ಪಕ್ಷದಿಂದ ಹೊರಹಾಕಿ: ಪಕ್ಷದ ನೀತಿ ನಿಲುವುಗಳನ್ನು ಉಲ್ಲಂಘಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೆ ಟಿಕೆಟ್‌ ಘೋಷಿಸುವ ಮೂಲಕ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮಯ್ಯನವರನ್ನು ಪಕ್ಷದಿಂದ ಹೊರ ಹಾಕಬೇಕು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಒತ್ತಾಯಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ನೀತಿ ನಿಯಮ ಎನ್ನುವುದು ಇರುತ್ತದೆ. ಆದರೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಸ್ಥಾನ ದುರುಪಯೋಗಪಡಿಸಿಕೊಂಡು ಪಕ್ಷದ ಗಮನಕ್ಕೆ ತಾರದೆ ತಮ್ಮ ಬೆಂಬಲಿಗರಿಗೆ ಟಿಕೆಟ್‌ ಘೋಷಿಸಿದ್ದಾರೆ. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೇ ಇದರ ವಿರುದ್ಧ ಮಾತನಾಡಿದ್ದಾರೆ. 

ಸಿದ್ದರಾಮಯ್ಯಗೆ ಬಿಜೆಪಿ ಬಿಟ್ಟು ಬೇರೆ ಮಾತಾಡಲು ಏನಿದೆ?: ಕೆ.ಎಸ್‌.ಈಶ್ವರಪ್ಪ

ಇದು ಸರಿಯಲ್ಲ ಎಂದಿದ್ದಾರೆ. ಪಕ್ಷದಲ್ಲಿ ಎಲ್ಲರಿಗೂ ಒಂದು ನ್ಯಾಯ, ಸಿದ್ದರಾಮಯ್ಯ ಅವರಿಗೆ ಇನ್ನೊಂದು ನ್ಯಾಯ ಎಂಬುದು ಇದೆಯೇ ಎಂದು ಪ್ರಶ್ನಿಸಿದರು. ನೀತಿ, ನಿಯಮ, ಕಟ್ಟುಪಾಡು ಮೀರಿದ ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್‌ ರಾಜಿನಾಮೆ ನೀಡಬೇಕು. ಇನ್ನು ಮುಂದಾದರೂ ಡಿ. ಕೆ. ಶಿವಕುಮಾರ್‌ ಅವರು ಸಿದ್ದರಾಮಯ್ಯನವರ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದರು. ಸಿದ್ದರಾಮಯ್ಯ ಮಾಡಿರುವುದು ರಾಜಕೀಯ ವ್ಯಭಿಚಾರವಲ್ಲದೇ ಮತ್ತೇನೂ ಅಲ್ಲ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಟಿಕೆಟ್‌ ಘೋಷಣೆ ಮಾಡಲಿ ಎಂದ ಈಶ್ವರಪ್ಪ ವ್ಯಂಗ್ಯವಾಡಿದರು.

click me!