ಅಗ್ನಿಪಥ ಹಿಂಸಾಚಾರಕ್ಕೆ ಕಾಂಗ್ರೆಸ್‌ ಕುಮ್ಮಕ್ಕು: ಜಗದೀಶ್‌ ಶೆಟ್ಟರ್‌

By Kannadaprabha NewsFirst Published Jun 21, 2022, 3:05 PM IST
Highlights

*  ಅಗ್ನಿಪಥ ಯೋಜನೆಯನ್ನು ಹತ್ತಾರು ವರ್ಷಗಳ ಹಿಂದೆಯೇ ಅನುಷ್ಠಾನ ಮಾಡಬೇಕಿತ್ತು
*  ಬಿಟ್ಟು ಅಗ್ನಿಪಥ ಯೋಜನೆ ಘೋಷಣೆ ಮಾಡಿ 24 ಗಂಟೆಯಲ್ಲಿ ದೇಶಾದ್ಯಂತ ಹಿಂಸಾಚಾರ 
*  ಷಡ್ಯಂತ್ರ ಮಾಡುವವರಿಗೆ ಯಾವ ಯುವಕರೂ ಮರುಳಾಗಬಾರದು

ಹುಬ್ಬಳ್ಳಿ(ಜೂ.21):  ಅಗ್ನಿಪಥ ವಿರೋಧಿಸಿ ನಡೆಯುತ್ತಿರುವ ಹಿಂಸಾಚಾರ ಪ್ರತಿಭಟನೆಯಲ್ಲಿ ದೊಡ್ಡ ಕುತಂತ್ರ, ಷಡ್ಯಂತ್ರ ಇದೆ. ಹಿಂಸಾಚಾರದ ಪ್ರತಿಭಟನೆ ಕಾಂಗ್ರೆಸ್‌ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಬದಲಾವಣೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ರಾಷ್ಟ್ರದ ನಾಗರಿಕರಲ್ಲಿ ಸುರಕ್ಷತೆಯ ಭಾವನೆ ತರುವ ಕೆಲಸ ಮಾಡುತ್ತಿದ್ದಾರೆ. ಅಗ್ನಿಪಥ ಯೋಜನೆಯನ್ನು ಹತ್ತಾರು ವರ್ಷಗಳ ಹಿಂದೆಯೇ ಅನುಷ್ಠಾನ ಮಾಡಬೇಕಿತ್ತು.ಆದರೆ ಆ ಧೈರ್ಯವನ್ನು ಯಾರು ಮಾಡಿರಲಿಲ್ಲ ಎಂದು ಹರಿಹಾಯ್ದಿದ್ದಾರೆ.

ದುಡ್ಡು ಕೊಡ್ತೀನಿ ಅಂದ್ರೂ ಸಿಗ್ತಿಲ್ಲ ಬೂಸ್ಟರ್‌ ಡೋಸ್‌..!

ಸೇನಾ ಮುಖ್ಯಸ್ಥರು ಈಗಾಗಲೇ ಮಾಧ್ಯಮದ ಮೂಲಕ ಅಗ್ನಿಪಥದ ಪ್ರಯೋಜನೆಗಳೇನು ಎಂಬುದನ್ನು ಜನರಿಗೆ ತಿಳಿಸಿದ್ದಾರೆ. ನಾಲ್ಕು ವರ್ಷಗಳ ಸೇವಾವಧಿ ಮುಗಿದ ಮೇಲೆ ಯಾವೆಲ್ಲ ಸೌಲಭ್ಯಗಳು ಮತ್ತು ಮೀಸಲಾತಿಗಳು ಸಿಗುತ್ತವೆ ಎಂಬುದರ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದಾರೆ. ಅಗ್ನಿಪಥ ಯೋಜನೆ ಕುರಿತು ಯಾವುದೇ ವಿರೋಧಗಳಿದ್ದರೆ ಅದನ್ನು ಶಾಂತವಾಗಿ ಹೇಳುವ ಕೆಲಸ ಮಾಡಬೇಕಿತ್ತು. ಸರ್ಕಾರದ ಸಚಿವರು ಅಥವಾ ಸ್ವತಃ ಪ್ರಧಾನಮಂತ್ರಿಗೆ ಸಮಯ ಕೇಳಿದರೆ ಅವರು ಸಮಯ ಕೊಡಬಹುದಿತ್ತು. ಅವರೊಂದಿಗೆ ಸಮಾಲೋಚನೆ ನಡೆಸಿಕೊಂಡು ಅದರಲ್ಲಿನ ನೂನ್ಯತೆಗಳ ಬಗ್ಗೆ ಹೇಳಬಹುದಿತ್ತು.ಅದನ್ನು ಬಿಟ್ಟು ಅಗ್ನಿಪಥ ಯೋಜನೆ ಘೋಷಣೆ ಮಾಡಿ 24 ಗಂಟೆಯಲ್ಲಿ ದೇಶಾದ್ಯಂತ ಹಿಂಸಾಚಾರ ಮಾಡಿ ಕಾನೂನು ಕೈಗೆತ್ತಿಕೊಳ್ಳತ್ತಾರೆಂದರೇ ಇದರ ಹಿಂದೆ ದೊಡ್ಡ ಕುತಂತ್ರ ಷಡ್ಯಂತ್ರ ಇದೆ ಎಂದು ಶೆಟ್ಟರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಷಡ್ಯಂತ್ರ ಮಾಡುವವರಿಗೆ ಯಾವ ಯುವಕರೂ ಮರುಳಾಗಬಾರದು. ಅದರಿಂದ ಯಾರು ಹಿಂಸಾಚಾರದಲ್ಲಿ ಭಾಗಿಯಾಗುತ್ತಾರೆ. ಅವರು ಮುಂದೆ ಸೈನ್ಯಕ್ಕೆ ಸೇರಬೇಕೆಂದರೆ ಅದಕ್ಕೆ ರೆಡ್‌ ಮಾರ್ಕ್ ಬಿದ್ದ ಹಾಗೆ. ಇದಕ್ಕೆ ಯುವಕರು ಅವಕಾಶ ಮಾಡಿಕೊಡಬಾರದು. ಒಳ್ಳೆಯ ರೀತಿಯ ಸಭ್ಯ ನಾಗರಿಕರ ಹಾಗೆ ವರ್ತನೆ ಮಾಡಿ ಮುಂದಿನ ಭವಿಷ್ಯ ನೋಡಿಕೊಳ್ಳಬೇಕು ಎಂದು ಪ್ರತಿಭಟನಾ ನಿರತ ಯುವಕರಿಗೆ ಶೆಟ್ಟರ್‌ ಕಿವಿಮಾತು ಹೇಳಿದರು.
 

click me!