ಮುಸ್ಲಿಂರಿಗೆ ಎಲ್ಲ ಸವಲತ್ತು‌ ಕೊಟ್ಟಿದ್ದು ದೇವೇಗೌಡ್ರು, 60 ವರ್ಷದ ಕಾಂಗ್ರೆಸ್ ಕೊಡುಗೆ ಏನು?: ರೇವಣ್ಣ

Published : Oct 04, 2023, 09:03 PM IST
ಮುಸ್ಲಿಂರಿಗೆ ಎಲ್ಲ ಸವಲತ್ತು‌ ಕೊಟ್ಟಿದ್ದು ದೇವೇಗೌಡ್ರು, 60 ವರ್ಷದ ಕಾಂಗ್ರೆಸ್ ಕೊಡುಗೆ ಏನು?: ರೇವಣ್ಣ

ಸಾರಾಂಶ

ಈ ದೇಶದಲ್ಲಿ ಕಾಂಗ್ರೆಸ್ ಈ ದುಸ್ಥಿತಿಗೆ ಬರೋದಕ್ಕೆ ಹಲವಾರು ಕಾರಣಗಳಿವೆ. ಗಾಂಧೀಜಿ ಕಟ್ಟಿದಂತಹ ಕಾಂಗ್ರೆಸ್ ಆಗಿ ಈಗ ಉಳಿದಿಲ್ಲ: ಹೆಚ್.ಡಿ.ರೇವಣ್ಣ  

ಹಾಸನ(ಅ.04):  ಮುಸಲ್ಮಾನರಿಗೆ ಎಲ್ಲಾ ಸವಲತ್ತು‌ ಕೊಟ್ಟಿದ್ದು ದೇವೇಗೌಡ್ರು. ಅಲ್ಪಸಂಖ್ಯಾತರಿಗೆ ರಿಸರ್ವೇಶನ್ ಕೊಟ್ಟಿದ್ದು ದೇವೇಗೌಡ್ರು. 60 ವರ್ಷದ ಕಾಂಗ್ರೆಸ್ ಕೊಡುಗೆ ಏನು ಅಂತಾ ಹೇಳಬೇಕು. 2ಎ, 2 ಬಿ, ಕ್ಯಾಟೆಗರಿ - 1, ರಾಜ್ಯದಲ್ಲಿ ಮಹಿಳೆಯವರಿಗೆ ಮೀಸಲಾತಿ ಕೊಟ್ಟವರು ದೇವೇಗೌಡ್ರು. ನಾವು ಯಾವ ಪಾರ್ಟಿಗೆ ಹೋದ್ರೆ ಇವರಿಗೇನು ಹೊಟ್ಟೆಉರಿ ಅಂತ ಕಾಂಗ್ರೆಸ್ಸಿಗರ ವಿರುದ್ಧ ಮಾಜಿ‌ ಸಚಿವ ಹೆಚ್.ಡಿ.ರೇವಣ್ಣ ಹರಿಹಾಯ್ದಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ ಅವರು, ಈ ದೇಶದಲ್ಲಿ ಕಾಂಗ್ರೆಸ್ ಈ ದುಸ್ಥಿತಿಗೆ ಬರೋದಕ್ಕೆ ಹಲವಾರು ಕಾರಣಗಳಿವೆ. ಗಾಂಧೀಜಿ ಕಟ್ಟಿದಂತಹ ಕಾಂಗ್ರೆಸ್ ಆಗಿ ಈಗ ಉಳಿದಿಲ್ಲ. ಈ ರಾಷ್ಟ್ರದಲ್ಲಿ ಪ್ರಧಾನಿ‌ ಹುದ್ದೆಯನ್ನೇ ತೊರೆದು ಬಂದವರು ಯಾರಾದ್ರೂ ಇದ್ರೆ ಅದು ದೇವೇಗೌಡ್ರು. ಅವರಿಗೆ ಭಯ ಶುರುವಾಗಿದೆ, ಜನಕ್ಕೆ ಎಷ್ಟು ದಿನ ಸುಳ್ಳನ್ನ ಹೇಳೋದಕ್ಕೆ ಆಗುತ್ತೆ. ಮುಸಲ್ಮಾನರ ಬಗ್ಗೆ ಮತಾಡೋಕ್ಕೆ ಯಾವ ನೈತಿಕತೆ ಇದೆ. ಒಂದಲ್ಲ ಒಂದು ದಿನ ಮುಸ್ಲಿಮರು ಕಾಂಗ್ರೆಸ್ ಅನ್ನ ತಿರಸ್ಕಾರ ಮಾಡೋ ದಿನ ಬಂದೇ ಬರುತ್ತೆ ಅಂತ ಹೇಳಿದ್ದಾರೆ. 

ಸ್ವಲ್ಪ ದಿನ ಗ್ಯಾರಂಟಿ ಯೋಜನೆ ನಿಲ್ಲಿಸಿ ರೈತರ ಉಳಿಸಿ: ರಾಜ್ಯ ಸರ್ಕಾರಕ್ಕೆ ರೇವಣ್ಣ ಒತ್ತಾಯ

ಬೆಳಗ್ಗೆ ಎದ್ರೆ ದೇವೇಗೌಡ್ರು, ಕುಮಾರಣ್ಣ ಅಂತಾರೆ. ನಿಮಗ್ಯಾಕ್ರಿ ನಾವ್ ಯಾರ್ ಜೊತೆಯಲ್ಲಾದ್ರೂ ಹೋಗ್ತೇವೆ, ಇವರಿಗ್ಯಾಕ್ರಿ. ನಿಮ್ಮದು ನೋಡ್ಕಳಿ, ಪಾರ್ಲಿಮೆಂಟ್ ನಲ್ಲಿ 45 ಕ್ಕೆ ಬಂದಿದೆ. ಹಾಗಾಗಿಯೇ ಈಗ ಎಲ್ಲರನ್ನೂ ಹೋಗಿ ತಬ್ಬಿಕೊಳ್ತಾರೆ. ಅದ್ಯಂತದೋ ಐಎನ್ ಡಿಐಎ ಅಂತಾ ಮಾಡ್ಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಮಾನ ಮರ್ಯಾದೆ ಇದ್ರೆ, ಗೌರವ ಇದ್ರೆ. ನಾವು ಯಾರ ಮನೆ ಬಾಗಿಲಿಗೆ ಹೋದ್ರೆ ಇವರಿಗೇನು ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

ನಾನು ಬದುಕಿರೋವರೆಗೂ ಹಾಸನ ಜಿಲ್ಲೆಯ ಅಲ್ಪಸಂಖ್ಯಾತರ ಜೊತೆ ಇರ್ತೇನೆ. ಈ ಜಿಲ್ಲೆಯೊಳಗೆ ಒಂದು ವೀರಶೈವ ಸಮಾಜಕ್ಕೆ ಒಂದು ಸೀಟ್ ಕೊಡಲಿಲ್ಲ. ಶಾಮನೂರು ಶಿವಶಂಕರಪ್ಪ ಸುಮ್ಮನೆ ಏನೂ ಇಲ್ಲದೇ ಹೇಳ್ತಾರಾ. ಪಾಪ ಅವರು ಎಷ್ಟು ನೋವನ್ನ ನುಂಗಿಕೊಂಡಿದ್ದಾರೆ. ಅವರು ಮನಸ್ಸು ಮಾಡಿದ್ರೆ ಇಷ್ಟೆ ಒಳಗೆ ಕೇಂದ್ರ ಸಚಿವರಾಗ್ತಾ ಇದ್ರು ಅಂತ ಶಾಮನೂರು ಶಿವಶಂಕರಪ್ಪ ಅವರ ಪರ ರೇವಣ್ಣ ಬ್ಯಾಟ್‌ ಬೀಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!
ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಅಸಮಾಧಾನ!