
ಶಿವಮೊಗ್ಗ(ಮಾ.07): ಮಲ್ಲಿಕಾರ್ಜುನ ಖರ್ಗೆಯಂತಹವರಿಗೆ ಪ್ರಿಯಾಂಕ್ ಖರ್ಗೆಯಂತಹ ಮಗ ಹುಟ್ಟಿರುವುದೇ ಅನ್ಯಾಯ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಅವರು ನಾಸೀರ್ ಬೆಂಬಲಿಗರು ಯಾವುದೇ ಕಾರಣಕ್ಕೂ ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗಿಲ್ಲ ಅಂದಿದ್ದರು. ಎ2 ಆರೋಪಿ ಕುಟುಂಬ ಸಮೇತ ಓಡಿ ಹೋಗಿದ್ದಾನೆ. ಅವನು ಓಡಿ ಹೋಗಲು ಯಾರು ಕಾರಣ? ಪೊಲೀಸರ ವೈಫಲ್ಯವಾ? ರಾಜ್ಯ ಸರ್ಕಾರ ಸಹಕಾರ ಕೊಟ್ಟಿದೆಯಾ? ಎಂದು ಪ್ರಶ್ನಿಸಿದ ಅವರು, ಘೋಷಣೆ ಕೂಗಿಯೇ ಇಲ್ಲ ಎಂದ ಡಿ.ಕೆ.ಶಿವಕುಮಾರ್ ಏನಾದರೂ ಸಹಕಾರ ಕೊಟ್ಟಿದ್ದಾರಾ? ಎಂದು ಹರಿಹಾಯ್ದರು.
‘ಪಾಕಿಸ್ತಾನ ಜಿಂದಾಬಾದ್’ ಪರವಾಗಿ ಕಾಂಗ್ರೆಸ್‌ನವರು ಇದ್ದರು. ಒಬ್ಬ ಕಾಂಗ್ರೆಸ್ ನಾಯಕರು ಕೂಡ ಖಂಡಿಸಲಿಲ್ಲ. ಇದು ಅವರ ಮನಸ್ಥಿತಿ. ಕೇವಲ ಮುಸ್ಲಿಂರ ಓಟು ಬೇಕು ಎಂಬ ಒಂದೇ ಕಾರಣಕ್ಕೆ ಪಾಕಿಸ್ತಾನ ಪರ ಇರುವ ವ್ಯಕ್ತಿಗಳಿಗೆ ಬೆಂಬಲ ಕೊಡುತ್ತೀವಿ ಎನ್ನುವುದು ನಮ್ಮ ದೌರ್ಭಾಗ್ಯ. ಎಫ್ಎಸ್ಎಲ್ ವರದಿ ಬರಲಿ ಅಂತಿದ್ದರು. ಆದರೆ, ಗೃಹಸಚಿವ ಜಿ. ಪರಮೇಶ್ವರ್ ತುಂಬಾ ಸ್ಪಷ್ಟವಾಗಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದಿದ್ದರು. ಜಿ.ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯನವರು ರಾಷ್ಟ್ರದ್ರೋಹಿಗಳ ರಕ್ಷಣೆ ಮಾಡಲ್ಲ ಅಂದಿದ್ದರು. ಹೀಗಾಗಿ ಅವರಿಬ್ಬರಿಗೂ ಅಭಿನಂದಿಸುತ್ತೇನೆ ಎಂದರು.
ರಾಮೇಶ್ವರಂ ಕೆಫೆ ಸ್ಫೋಟ ಸಿಲ್ಲಿ ಅಟೆಂಪ್ಟ್ ಎಂದ ಸಚಿವ ಶರಣ ಪ್ರಕಾಶ ಪಾಟಿಲ್‌ಗೆ ಈಶ್ವರಪ್ಪ ತಿರುಗೇಟು
ಕರ್ನಾಟಕ ರಾಜ್ಯ ರಾಷ್ಟ್ರದ್ರೋಹಿಗಳ ತಾಣವಾಗುತ್ತಿದೆ. ಪಾಕಿಸ್ತಾನ ಪರ ಘೋಷಣೆ, ಬಾಂಬ್ ಬ್ಲಾಸ್ಟ್ ರಾಜ್ಯದಲ್ಲಿ ಮಾಮೂಲಿಯಾಗಿರುವುದು ರಾಜ್ಯದ ಜನತೆಗೆ ಅಪಮಾನ. ಇಂತವರಿಗೆ ಬೆಂಬಲ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.