ಓರ್ವ ಮನುಷ್ಯನಿಗೆ ಸಿಗಬೇಕಾದ ಊಟ, ತಿಂಡಿ, ದವಸ ಧಾನ್ಯಗಳು, ಔಷಧಿಗಳು ಸೇರಿ ಎಲ್ಲದಕ್ಕೂ ಟ್ಯಾಕ್ಸ್ ಕೊಡಬೇಕಾಗಿದೆ. ಆಸ್ಪತ್ರೆಗಳಲ್ಲಿ ಶೇ.18ರಷ್ಟು ಟ್ಯಾಕ್ಸ್ ಕೊಡಬೇಕಾಗಿದೆ ಎಂದು ಕಿಡಿಕಾರಿದ ಕುಡಚಿ
ಬೆಳಗಾವಿ(ಸೆ.03): ಜಿಎಸ್‌ಟಿ ಹೆಸರಲ್ಲಿ ಜನಸಾಮಾನ್ಯರಿಂದ ದೊಡ್ಡ ಪ್ರಮಾಣದಲ್ಲಿ ಹಣ ವಸೂಲಿ ಮಾಡುವ ಮೂಲಕ ಸದ್ಯ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಚಂಬಲ್ ಕಣಿವೆಯ ಡಕಾಯಿತರಿಗಿಂತ ದೊಡ್ಡ ಡಕಾಯಿತವಾಗಿದೆ ಎಂದು ಮಾಜಿ ಶಾಸಕ ರಮೇಶ ಕುಡಚಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಎಸ್‌ಟಿ ಬಗ್ಗೆ ದೇಶದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿಯೂ ಜಿಎಸ್‌ಟಿ ಇತ್ತು. ಇವತ್ತು ಇದೆ. ಆದರೆ ಕಾಂಗ್ರೆಸ್ ಎಷ್ಟು ಜಿಎಸ್‌ಟಿ ಹಾಕಬೇಕು ಎಂದು ಹೇಳಿತ್ತು. ಇದೇ ಜಿಎಸ್‌ಟಿಗೆ ಬಿಜೆಪಿ ವಿರೋಧ ಮಾಡುತ್ತಿತ್ತು. ಇವರು ಅಧಿಕಾರಕ್ಕೆ ಬಂದ ನಂತರ ಓರ್ವ ಸಾಮಾನ್ಯ ನಾಗರಿಕನಿಗೆ ಯಾವ ದೆಸೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಓರ್ವ ಮನುಷ್ಯನಿಗೆ ಸಿಗಬೇಕಾದ ಊಟ, ತಿಂಡಿ, ದವಸ ಧಾನ್ಯಗಳು, ಔಷಧಿಗಳು ಸೇರಿ ಎಲ್ಲದಕ್ಕೂ ಟ್ಯಾಕ್ಸ್ ಕೊಡಬೇಕಾಗಿದೆ. ಆಸ್ಪತ್ರೆಗಳಲ್ಲಿ ಶೇ.18ರಷ್ಟು ಟ್ಯಾಕ್ಸ್ ಕೊಡಬೇಕಾಗಿದೆ ಎಂದು ಕಿಡಿಕಾರಿದರು.
KARNATAKA POLITICS: ಮಂಗಳೂರು ಸಮಾವೇಶದ ಮೊದಲ ಸಾಲಲ್ಲೇ ಬಿಎಸ್‌ವೈಗೆ ಮೋದಿ ಸ್ಥಾನ..!
ಎರಡು ತಿಂಗಳ ಹಿಂದೆ ಒಂದು ಆ್ಯಕ್ಟ್ ಪಾಸ್ ಆಗಿದೆ. ಬ್ಯಾಂಕಿನಿಂದ ನೀವು ಒಂದು ಲಕ್ಷ ಹಣ ವಿತ್‌ಡ್ರಾ ಮಾಡಿಕೊಂಡರೆ ಅದನ್ನು ನೀವು ತೋರಿಸದೇ ಹೋದರೆ .1 ಲಕ್ಷ ಸರ್ಕಾರಕ್ಕೆ ಹೋಗುತ್ತದೆ. ಅಲ್ಲದೇ ನೀವು ಯಾರಿಗೆ ಹಣ ಕೊಡುತ್ತಿರಿ ಅವರು ಒಂದು ಲಕ್ಷ ರುಪಾಯಿ ಕೊಡಬೇಕಾಗುತ್ತದೆ. ಈ ಮೂಲಕ ಚಂಬಲ… ಕಣಿವೆಯ ಡಕಾಯಿತರದ್ದು ಬೇಕು, ಇದು ಬೇಡವಾಯ್ತು. ನಮ್ಮ ಹಣ ನಾವು ತೆಗೆದುಕೊಂಡರೆ ಶೇ.100ರಷ್ಟುದಂಡ ಕಟ್ಟಿಸಿಕೊಳ್ಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
10ನೇ ತಾರೀಖಿನ ಒಳಗೆ ವ್ಯಾಪಾರಿಗಳು ಜಿಎಸ್‌ಟಿ ತುಂಬದಿದ್ದರೆ ಮೊದಲು .200 ದಂಡ ಇತ್ತು. ಆದರೆ ಈಗ .50 ಮಾಡಿದ್ದಾರೆ. ದೊಡ್ಡ ದೊಡ್ಡ ಉದ್ಯಮಿಗಳ .10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಿರಿ. ನಮ್ಮ ದುಡ್ಡನ್ನು ತೆಗೆದುಕೊಂಡು ಹೋಗಿ ಅವರಿಗೆ ಮನ್ನಾ ಮಾಡುತ್ತಿದ್ದಿರಿ. ಇದರಿಂದ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಜಿಎಸ್‌ಟಿಯಿಂದ ಸಾಮಾನ್ಯ ನಾಗರಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಇದನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.