Congress Politics: ಸಿದ್ದರಾಮಯ್ಯ- ಡಿಕೆಶಿ ಮಧ್ಯೆ ಕಲಹ ಇರೋದು ನಿಜ: ವೀರಪ್ಪ ಮೂಯ್ಲಿ

By Girish Goudar  |  First Published May 10, 2022, 12:43 PM IST

*  ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮೊಸರಿನಲ್ಲಿ ಕಲ್ಲು ಹುಡುಕು ಕೆಲಸ ಮಾಡುತ್ತಿದೆ
*  ಸರ್ಕಾರಕ್ಕೆ‌ ಸರಿಸಮಾನವಾದ ನ್ಯಾಯ ಕೊಡಿಸಲು ಆಗುತ್ತಿಲ್ಲ
*  ಜನರ ಹತ್ರ ಹೋದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ
 


ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ(ಮೇ.10):  ಮಾಜಿ ಸಿಎಂ ವೀರಪ್ಪ ಮೂಯ್ಲಿ(Veerappa Moily )ಅವರು ಇಂದು(ಮಂಗಳವಾರ) ಸಾಹಿತಿ ದಿ. ಚನ್ನವೀರ ಕಣವಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಜೊತೆ ಒಂದು ಗಂಟೆಗಳ‌ ಕಾಲ ಮನೆಯವರ ಜೊತೆ ಚರ್ಚೆ ಮಾಡಿದರು. ಕಲ‌್ಯಾಣ ನಗದರಲ್ಲಿರುವ ಕಣವಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. 

Latest Videos

undefined

ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ(Karnataka) ಬಿಜೆಪಿ ಸರ್ಕಾರ(BJP Government) ಮೊಸರಿನಲ್ಲಿ ಕಲ್ಲು ಹುಡುಕು ಕೆಲಸ ಮಾಡುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಜಾತಿ ಜಾತಿಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಸರ್ಕಾರಕ್ಕೆ‌ ಸರಿಸಮಾನವಾದ ನ್ಯಾಯ ಕೊಡಿಸಲು ಆಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು. 

ನೀರು ಶಾಂತಾವಾಗಿದ್ರೆ ಅದನ್ನ ಕಲಕುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ.  ಸಮನ್ವಯದ ರಾಜಕೀಯ ಮಾಡುತ್ತಿಲ್ಲ ಬಿಜೆಪಿ ಸರ್ಕಾರ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಆಲೋಚನೆ ಮಾಡಬೇಕು. ಅವರು ಕಲಹಾಪ್ರಿಯ ಸಿಎಂ ಎಂಬ ಬಿರುದು ಪಡೆಯಬಾರದು ಎಂದರೆ ರಾಜ್ಯದಲ್ಲಿ ಶಾಂತತೆಯನ್ನ ಕಾಪಾಡುವಲ್ಲಿ ಶ್ರಮಿಸಬೇಕಿದೆ ಎಂದರು. ಮಂತ್ರಿಗಳು ಸಿಎಂ ಹತೋಟಿಯಲ್ಲಿ ಇಲ್ಲ ಆರ್‌ಎಸ್‌ಎಸ್‌ ಭಜರಂಗದಳ ಯಾವುದು ರಾಜ್ಯದಲ್ಲಿ ಬಿಜೆಪಿ ಕಂಟ್ರೋಲ್‌ನಲ್ಲಿ ಇಲ್ಲ ಸಿಎಂ ಅವರಿಗೆ ಜವಾಬ್ದಾರಿಯಾಗಿ ಕೆಲಸ ಮಾಡಬೇಕಿದೆ ಜಾತಿ ಗದ್ದಲ ಮಾಡುವುದರಿಂದ ಮತ ಬರುತ್ತೆ ಅಂತ ತಿಳಿದುಕೊಂಡಿದ್ದಾರೆ. 

ಬಿಜೆಪಿ ನೀಡಿದ್ದ ಭರವಸೆ ಹುಸಿ, ಮತ್ತೆ ಕಾಂಗ್ರೆಸ್ ಬಾಗಿಲು ಬಡಿದ ಮಾಜಿ ಸಚಿವ..!

ಭಾರತ ಶಾಂತಿ ಪ್ರಿಯ ರಾಷ್ಟ್ರ

ಪಿಎಸ್‌ಐ ನೇಮಕಾತಿ(PSI Recruitment) ವಿಚಾರದಲ್ಲಿ ಗೃಹ ಸಚಿವರ ಜವಾಬ್ದಾರಿಯಾಗಿದೆ. ಪಿಎಸ್‌ಐ ನೇಮಕಾತಿಯನ್ನು ಗೃಹ ಸಚಿವರೇ ಮಾಡೋದು ಅವರ ಹತೋಟಿಯಲ್ಲಿಲ್ಲ, ನಾನು ಸಿಎಂ ಆಗಿದ್ದಾಗ ನೂರಾರು ಸಮ್ಮಿಶ್ರ ಸರ್ಕಾರ ನೇಮಕ ಮಾಡಿದ್ದೇನೆ. ಒಂದೇ ಒಂದು ಹಗರಣ ಹೊರ ಬಂದಿಲ್ಲ. ಸಿಎಂ ಅವರು ಜವಾಬ್ದಾರಿಯನ್ನ ಹೊರಬೇಕಿದೆ, ಆಯಾ ಇಲಾಖೆಯ ಸಚಿವರುಗಳು ಹೊರಬೇಕಾಗಿದೆ ಪಿಎಸ್‌ಐ ನೇಮಕಾತಿಯಲ್ಲಿ ಉನ್ನತ ಅಧಿಕಾರಿಗಳು ಸಸ್ಪೆಂಡ್ ಆಗಲಿಲ್ಲ ಸಚಿವರುಗಳು ಪದವಿ ಬಿಟ್ಟು ಕೊಡಲಿಲ್ಲ ನೈತಿಕ, ಬೌತಿಕ ಜವಾಬ್ದಾರಿ ಎರಡು ಸರ್ಕಾರಕ್ಕೆ ಇರಲಿಲ್ಲ ಎಂದರು. 

2023 ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್(Congress) ಅಧಿಕಾರಕ್ಕೆ ಬರುತ್ತೆ ಎಂದ‌ ವೀರಪ್ಪ ಮೂಯ್ಲಿ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಅಹಂ ಬಾವ ಇರಬಾರದು. ಪಾರದರ್ಶಕವಾದ ಆಡಳಿತ ಕೊಡಬೇಕು ಜನರಲ್ಲಿ ವಿಶ್ವಾಸ ತುಂಬಬೇಕು ಒಳ್ಳೆಯ ಆಡಳಿತ ಕೊಡಬೇಕು ಅಂದಾಗ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಸಿದ್ದರಾಮಯ್ಯ(Siddaramaiah), ಡಿಕೆಶಿ(DK Shivakumar) ನಡುವೆ ಕಲಹ ಇರೋದು ನಿಜ. ಆದರೆ ಕಾಂಗ್ರೆಸ್‌ನಲ್ಲಿ ಹತೋಟಿ ಇದೆ, ಕೇಂದ್ರದ ನಾಯಕರ ಹತೋಟಿ ಇದೆ. ಬಿಜೆಪಿಯಲ್ಲಿ ಯಾವುದೇ ಹತೋಟಿ ಇಲ್ಲ ಬಿಜೆಪಿ ಮಾಡಿದ್ದೇ ಕಾನೂನಾಗಿದೆ. ಬಿಜೆಪಿಯಲ್ಲಿ ಹತೋಟಿ ತಪ್ಪಿದರೆ ಅಧಿಕಾರಕ್ಕೆ ಇರಲು ಆಗಲ್ಲ ಜನಗಳಲ್ಲಿ ಅಭಿಪ್ರಾಯ ಇದೆ. ಒಬ್ಬರು ಸಿಎಲ್‌ಪಿ ಲೀಡರ್, ಇಬ್ಬೊಬ್ಬರು ಅಧ್ಯಕ್ಷರು, ಅವರವರ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗಬೇಕು. ಸರಿಯಾಗಿ ಜನರ ಹತ್ರ ಹೋದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. 
 

click me!