ಕೇಂದ್ರ ಸರ್ಕಾರಕ್ಕೆ ಬಡವರ ಹಸಿವಿನ ಬೆಲೆ ಗೊತ್ತಿಲ್ಲ: ವೀರಪ್ಪ ಮೊಯ್ಲಿ

Published : Jul 02, 2023, 01:42 PM IST
ಕೇಂದ್ರ ಸರ್ಕಾರಕ್ಕೆ ಬಡವರ ಹಸಿವಿನ ಬೆಲೆ ಗೊತ್ತಿಲ್ಲ: ವೀರಪ್ಪ ಮೊಯ್ಲಿ

ಸಾರಾಂಶ

ಬಿಜೆಪಿ ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಹುದ್ದೆ ಸೃಷ್ಟಿ, ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ಹಾಕುವ ಭರವಸೆಗಳನ್ನು ಉಳಿಸಿಕೊಂಡಿದೆಯೇ, 60 ತಿಂಗಳ ಆಡಳಿತ ನೀಡಿದರೂ ತನ್ನ ಭರವಸೆಗಳನ್ನು ಈಡೇರಿಸಿಲ್ಲ. ಇದರ ಬಗ್ಗೆ ಪ್ರಚಾರ ಮಾಡಲಿ ಅದರ ಹೊರತು ಕಾಂಗ್ರೆಸ್‌ ಬಗ್ಗೆ ಸುಳ್ಳು ಪ್ರಚಾರ ಮಾಡುವುದನ್ನು ಬಿಡಲಿ: ಡಾ.ಎಂ.ವೀರಪ್ಪ ಮೊಯ್ಲಿ 

ಹೊಸಕೋಟೆ(ಜು.02):  ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ವಿತರಣೆಗೆ ವಿರೋಧ ಮಾಡುತ್ತಿದ್ದು, ಕೇಂದ್ರಕ್ಕೆ ಬಡವರ ಹಸಿವಿನ ಬೆಲೆ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

ನಗರದ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳ ಉಚಿತ ನೋಂದಾವಣಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಭಾಗ್ಯ ನೀಡುವ ಎಲ್ಲಾ ಅರ್ಹತೆ, ಶಕ್ತಿ ಇದೆ. ಅದನ್ನು ಕುಂದಿಸಲು ಕೇಂದ್ರದ ಪ್ರಯತ್ನ ಸಫಲವಾಗುವುದಿಲ್ಲ, ಎಫ್‌ಸಿಐ ಅಕ್ಕಿ ನೀಡುವುದಾಗಿ ಹೇಳಿದ ಮರುದಿನವೇ ಅಕ್ಕಿ ಕೊಡುವುದಿಲ್ಲ ಎಂದು ಪತ್ರ ಬರೆದಿದೆ. ಪಡಿತರರರಿಗೆ 5 ಕೇಜಿ ಅಕ್ಕಿ ಕೇಂದ್ರ ನೀಡುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ 2011ರಲ್ಲಿ ಕೇಂದ್ರ ಸರ್ಕಾರ ಮನಮೋಹನ್‌ ಸಿಂಗ್‌ ಆಡಳಿತದಲ್ಲಿ ನಾನು ಕಾನೂನು ಮಂತ್ರಿಯಾಗಿದ್ದಾಗ ದೇಶದ ಬಡವರಿಗೆ ಆಹಾರ ಭದ್ರತೆ ಯೋಜನೆ ಜಾರಿಯಾಯಿತು. ದೇಶದಲ್ಲಿ ಶೇಕಡ 27ರಷ್ಟು ಬಡತನ ರೇಖೆಯಿಂದ ಹೊರಬಂದರೂ ಮತ್ತೆ ಮೋದಿ ಆಡಳಿತದಲ್ಲಿ ಶೇ. 17ರಷ್ಟು ಜನ ಬಡತನ ರೇಖೆಗೆ ನೂತನವಾಗಿ ಸೇರ್ಪಡೆಯಾಗಿದ್ದಾರೆ ಎಂದು ಆರೋಪಿಸಿದರು.

ಎಷ್ಟೇ ಹಿರಿಯರಾದರೂ ಹೈಕಮಾಂಡ್‌ ನಿರ್ಧಾರ ಫೈನಲ್‌: ವೀರಪ್ಪ ಮೊಯ್ಲಿ

ಬಿಜೆಪಿ ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಹುದ್ದೆ ಸೃಷ್ಟಿ, ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ಹಾಕುವ ಭರವಸೆಗಳನ್ನು ಉಳಿಸಿಕೊಂಡಿದೆಯೇ, 60 ತಿಂಗಳ ಆಡಳಿತ ನೀಡಿದರೂ ತನ್ನ ಭರವಸೆಗಳನ್ನು ಈಡೇರಿಸಿಲ್ಲ. ಇದರ ಬಗ್ಗೆ ಪ್ರಚಾರ ಮಾಡಲಿ ಅದರ ಹೊರತು ಕಾಂಗ್ರೆಸ್‌ ಬಗ್ಗೆ ಸುಳ್ಳು ಪ್ರಚಾರ ಮಾಡುವುದನ್ನು ಬಿಡಲಿ. ಕಾಂಗ್ರೆಸ್‌ ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿ ಮಾಡುತ್ತದೆ. ಮುಂಬರುವ ಲೋಕಸಭೆಯಲ್ಲಿ ಜನ ಎಲ್ಲಿ ಮತ್ತೊಮ್ಮೆ ನಮ್ಮನ್ನು ಸೋಲಿಸುತ್ತಾರೊ ಎಂಬ ಭಯದಿಂದ ಬಿಜೆಪಿ ನಾಯಕರು ಸುಳ್ಳು ಸುದ್ದಿಗಳನ್ನು ಹರಡುತಿದ್ದಾರೆ. ಬಡವರ ಹೊಟ್ಟೆಮೇಲೆ ಹೊಡೆದು ಶೋಕಿ ಮಾಡುವ ಕೇಂದ್ರ ಬಿಜೆಪಿ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಕೊತ್ತೊಗೆಯಲು ಜನ ಕಾಯುತಿದ್ದಾರೆ ಎಂದರು.

ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹರಿಗೆಲ್ಲಾ ತಲುಪಿಸಲು ತಾಲೂಕಾದ್ಯಂತ ಉಚಿತ ನೋಂಣಿ ಕೇಂದ್ರಗಳನ್ನು ತೆರೆಯಲಾಗುವುದು, ಯಾರೂ ಹಣ ಕೊಟ್ಟು ಯಾಮಾರಬಾರದು. ಈ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ ಮಾಡಿಸಿಕೊಂಡು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ಕೇಂದ್ರ ಬಿಜೆಪಿ ಸರ್ಕಾರ ಬಡವರ ಅಕ್ಕಿಯಲ್ಲೂ ರಾಜಕೀಯ ಮಾಡುತ್ತಿದೆ. ಅಭಿವೃದ್ಧಿ ಕೆಲಸದಲ್ಲಿಯೂ ರಾಜಕೀಯ ಮಾಡುತಿದ್ದು ತಾಲೂಕಿನ ಕಂಬಳಿಪುರದಲ್ಲಿ ಪೆಟ್ರೋಲಿಯಂ ಪರಿಶ್ಕರಣಾ ಲ್ಯಾಬ್‌ ನಿರ್ಮಾಣಕ್ಕೆ 1100 ಕೋಟಿ ಹಣವನ್ನು ಅಂದಿನ ಮನಮೋಹನ್‌ ಸರ್ಕಾರ ಬಿಡುಗಡೆ ಮಾಡಿದ್ದರೂ ಬಿಜೆಪಿ ಸರ್ಕಾರ ಇಂದಿಗೂ ಯೋಜನೆ ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿದರು.

ಕಾರ‍್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮುನಿಶಾಮಣ್ಣ, ಎಐಸಿಸಿ ಸದಸ್ಯೆ ಕಮಲಾಕ್ಷಿ, ಮುಖಂಡರಾದ ಎಚ್‌ ಎಂ ಸುಬ್ಬರಾಜ್‌, ಬಚ್ಚೇಗೌಡ, ವಕ್ಕಲಿಗ ಸಂಘದ ಅಧ್ಯಕ್ಷ ಮುನಿರಾಜ್‌ ಹೆಗಡೆ, ನಾರಾಯಣಗೌಡ, ವಾಸುದೇವಯ್ಯ, ಅರುಣ್‌ ಕುಮಾರ್‌ ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ