Karnataka election 2023: ಮಾನ್ವಿಗಿಂದು ಮಾಜಿ ಸಿಎಂ ಸಿದ್ದರಾಮಯ್ಯ: ಬೋಸ​ರಾ​ಜು

Published : Apr 27, 2023, 05:51 AM IST
Karnataka election 2023:  ಮಾನ್ವಿಗಿಂದು ಮಾಜಿ ಸಿಎಂ ಸಿದ್ದರಾಮಯ್ಯ: ಬೋಸ​ರಾ​ಜು

ಸಾರಾಂಶ

ಇಲ್ಲಿನ ವಿಧಾನಸಭಾ ಎಸ್‌ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಂಪಯ್ಯನಾಯಕ ಪರ ಪ್ರಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾರ ಆಗಮಿಸಲಿ​ದ್ದಾ​ರೆ. ಪಟ್ಟಣದ ಟಿಎಪಿಸಿಎಮ್‌ಎಸ್‌ ಅವರಣದಲ್ಲಿ ಮಧ್ಯಾಹ್ನ 1 ಗಂಟೆಗೆ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌ ಬೋಸರಾಜು ಹೇಳಿದರು.

ಮಾನ್ವಿ:(ಏ.27) : ಇಲ್ಲಿನ ವಿಧಾನಸಭಾ ಎಸ್‌ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಂಪಯ್ಯನಾಯಕ ಪರ ಪ್ರಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾರ ಆಗಮಿಸಲಿ​ದ್ದಾ​ರೆ. ಪಟ್ಟಣದ ಟಿಎಪಿಸಿಎಮ್‌ಎಸ್‌ ಅವರಣದಲ್ಲಿ ಮಧ್ಯಾಹ್ನ 1 ಗಂಟೆಗೆ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌ ಬೋಸರಾಜು(NS Boseraju) ಹೇಳಿದರು.

ಪಟ್ಟಣದ ತಾಲೂಕು ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಂಪಯ್ಯನಾಯಕ ಶಾಸಕರಿದ್ದ ವೇಳೆ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿಸಿದ್ದೇನೆ ಎಂದು ಶಾಸಕ ರಾಜಾವೆಂಕಟಪ್ಪ ನಾಯಕ(Raja venkatappa nayak) ಕ್ಷೇತ್ರದ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ನಾನು ಮತ್ತು ಹಂಪಯ್ಯನಾಯಕರ(Hampayya nayaka) ಶಾಸಕರಾಗಿದ್ದಾಗ ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಅನೇಕ ರೀತಿಯ ಅಭಿವೃದ್ದಿ ಕೆಲಸಗಳನ್ನು ಕೈಗೊಂಡಿದ್ದು ಈ ಬಾರಿ ಚುನಾವಣೆಯಲ್ಲಿ ಜನರಲ್ಲಿ ಧೈರ್ಯದಿಂದ ಮತ ಕೇಳುತ್ತೇವೆ. ಆದರೆ ಈ ಶಾಸಕನಿಗೆ ಮತ ಕೇಳುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.

Karnataka election 2023: ನಾಯ​ಕರ ನಾಡು ಮಾನ್ವಿ ಕ್ಷೇತ್ರದಲ್ಲಿ ಅರಳದ ಕಮಲ !

ಕೆಕೆಆರ್‌ಡಿಬಿ ಇತರೆ ಯೋಜನೆಗಳ ಹಣ ಬಂದಿದ್ದು ಬಿಟ್ಟರೆ ಇತರೆ ವಿಶೇಷ ಅನುದಾನ ತಂದಿಲ್ಲ, ಶಾಸ್ವತ ಕುಡಿಯುವ ನೀರಿನ ಕೆರೆ, ಟೌನ್‌ಹಾಲ್‌,ಬಸ್‌ ಡಿಪೋ ಇತರೆ ಅಭಿವೃದ್ಧಿ ಕಾರ್ಯಗಳು ಆಗಿವೆ. ಪಟ್ಟಣದ ಐಬಿಯಿಂದ ಚೀಕಲಪರ್ವಿ ರಸ್ತೆ ಕಾಮಗಾರಿ ಹಂಪಯ್ಯನಾಯಕ ಅವಧಿಯಲ್ಲಿ ಆಗಿದ್ದು ನಾನೇ ಮಾಡಿಸಿದ್ದೇನೆ ಎನ್ನುವುದು ಹಾಸ್ಯಸ್ಪದ ಎಂದು ಹೇಳಿದರು.

ಈ ವೇಳೆ ಪಕ್ಷದ ಮುಖಂಡ​ರು,​ ಕಾ​ರ್ಯ​ಕ​ರ್ತರು ಇದ್ದರು.

ನಾಳೆ ದೇವದುರ್ಗಕ್ಕೆ,ಮಾಜಿ ಸಿಎಂ ಸಿದ್ದರಾಮಯ್ಯ

ವಿಧಾನಸಭೆ ಚುನಾವಣಾ ಪ್ರಚಾರ(Assembly election campaing) ನಿಮಿತ್ತ ಮಾಜಿ ಸಿ.ಎಂ.ಸಿದ್ದರಾಮಯ್ಯ(Siddaramaiah) ಏ.28ರಂದು ದೇವದುರ್ಗಕ್ಕೆ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಶ್ರೀದೇವಿ ಆರ್‌.ನಾಯಕ(Sridevi r naayak) ತಿಳಿಸಿದ್ದಾರೆ.

ಪಟ್ಟಣದ ಟಿಎಪಿಸಿಎಂಎಸ್‌ ಮೈದಾನದಲ್ಲಿ ಮಧ್ಯಾಹ್ನ ಬಹಿರಂಗ ಸಭೆ ಜರುಗಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಸಚಿವ ಜಮೀರ್‌ ಅಹ್ಮದ್‌ ಸೇರಿದಂತೆ ರಾಜ್ಯ ಮತ್ತು ಜಿಲ್ಲಾಮಟ್ಟದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿ​ಸಿ​ದ್ದಾ​ರೆ.

ಸಿಂಧನೂರಿಗೆ ಸಿದ್ದರಾಮಯ್ಯ: ಹಂಪ​ನ​ಗೌಡ ಬಾದ​ರ್ಲಿ

ಸಿಂಧನೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.28ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಂಧನೂರು ನಗರಕ್ಕೆ ಆಗಮಿಸಲಿದ್ದು, ಸಂಜೆ 5 ಗಂಟೆಗೆ ನಗರದ ಜೂನಿಯರ್‌ ಕಾಲೇಜು ಆವರಣದಲ್ಲಿ ನಡೆಯುವ ಬೃಹತ್‌ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ(Hampanagowda badarli) ಹೇಳಿದರು.

ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ: ಹೈಕಮಾಂಡ್‌ ಲೆಕ್ಕಾಚಾರವೇನು?

ನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಧಾನಸಭೆ ಚುನಾವಣೆ ಪ್ರಚಾರ ನಿಮಿತ್ತ ಸಿದ್ದರಾಮಯ್ಯ ಬರಲಿದ್ದು, ಅವರೊಂದಿಗೆ ಮಾಜಿ ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ್‌ ಆಗಮಿಸಲಿದ್ದಾರೆ. ಈಗಾಗಲೇ ಜೂನಿಯರ್‌ ಕಾಲೇಜು ಮೈದಾನದಲ್ಲಿ ಬೃಹತ್‌ ಬಹಿರಂಗ ಸಭೆಯ ವೇದಿಕೆ ಕಾರ್ಯಕ್ರಮದ ಸಿದ್ಧತೆ ಕಾರ್ಯ ನಡೆದಿದೆ ಎಂದ​ರು.

ಮುಖಂಡರಾದ ಎಂ.ಕಾಳಿಂಗಪ್ಪ ವಕೀಲ, ಸೈಯ್ಯದ್‌ ಜಾಫರ್‌ಅಲಿ ಜಾಗೀರದಾರ್‌, ಖಾಜಿಮಲಿಕ್‌ ವಕೀಲ, ಮುನೀರ್‌ಪಾಷಾ, ಬಾಬರ್‌ ಪಟೇಲ್‌, ಅನಿಲಕುಮಾರ ವೈ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ