ರಾಮಕೃಷ್ಣ ದಾಸರಿ
ರಾಯಚೂರು (ಏ.27) : ಜಿಲ್ಲೆಯ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ, ಜಗನ್ನಾಥ ದಾಸರ ನಾಡು ಎಂದೇ ಪ್ರಖ್ಯಾತಿ ಪಡೆದಿರುವ, ಪರಿಶಿಷ್ಟಪಂಗಡಕ್ಕೆ ಮೀಸಲಿರುವ ಮಾನ್ವಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. 1957ರಿಂದ ಇಲ್ಲಿತನಕ ನಡೆದ 14ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ದಾಖಲಿಸಿದ್ದು, ಉಳಿದಂತೆ ತಲಾ ಒಂದು ಬಾರಿ ಜನತಾ ಪಕ್ಷ, ಪಕ್ಷೇತರ, ಜನತಾದಳ ಹಾಗೂ ಜೆಡಿಎಸ್‌ನ ಅಭ್ಯರ್ಥಿಗಳು ಗೆದ್ದು ಬಂದಿದ್ದಾರೆ. ನಾಡಿಗೆ ನಾಯಕರನ್ನು ನೀಡಿದ ನಾಡಿನಲ್ಲಿ ಇದುವರೆಗೂ ಕಮಲ (ಬಿಜೆಪಿ) ಪಕ್ಷ ಖಾತೆ ತೆರೆಯದೆ ಇರುವುದು ಕ್ಷೇತ್ರದ ವಿಶೇಷತೆಗಳಲ್ಲೊಂದು.
ಭಾಷಾವಾರು ಪ್ರಾಂತ ರಚನೆ ಪೂರ್ವ 1952ರಲ್ಲಿ ಮಾನ್ವಿ ಕ್ಷೇತ್ರಕ್ಕೆ(Manvi assembly constituency) ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಅತ್ತನೂರು ಪಂಪನಗೌಡ ಗೆದ್ದು ಆಂಧ್ರ ವಿಧಾನಸಭೆ ಉಪಾಧ್ಯಕ್ಷರಾಗಿದ್ದರು. ಭಾಷಾವಾರು ಪ್ರಾಂತ ರಚನೆಯಲ್ಲಿ ಕರ್ನಾಟಕಕ್ಕೆ ಸೇರಿದ ಬಳಿಕ ಸಾಮಾನ್ಯ ಕ್ಷೇತ್ರವಾಗಿದ್ದ ಮಾನ್ವಿ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಪರಿಶಿಷ್ಟಪಂಗಡಕ್ಕೆ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿತು.
ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ: ಹೈಕಮಾಂಡ್ ಲೆಕ್ಕಾಚಾರವೇನು?
ಆರಂಭದ 3 ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಬಸವರಾಜೇಶ್ವರಿ ಗೆಲವು ದಾಖಲಿಸಿರುವುದು ವಿಶೇಷವಾಗಿದೆ. ಮೊದಲ ಚುನಾವಣೆ 1957ರಲ್ಲಿ ನಡೆಯಿತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಸವರಾಜೇಶ್ವರಿ 9,023 ಮತಗಳನ್ನು ಪಡೆದರು, ಪಕ್ಷೇತರಾಗಿ ಸ್ಪರ್ಧಿಸಿದ್ದ ಅಬ್ದುಲ್ ವಾಜೀದ್ 4,964 ಮತಗಳನ್ನು ಪಡೆದು ಸೋತಿದ್ದರು. ಚುನಾವಣೆಯಲ್ಲಿ ಬಸವರಾಜೇಶ್ವರಿ 4,059 ಮತಗಳ ಅಂತರದಿಂದ ಗೆದ್ದು
ಶಾಸನ ಸಭೆಗೆ ಆಯ್ಕೆಯಾಗಿದ್ದರು.
1962ರ ಚುನಾವಣೆಯಲ್ಲಿ 3,856 ಮತ ಪಡೆದಿದ್ದ ಪಕ್ಷೇತರ ಅಭ್ಯರ್ಥಿ ರಾಮಚಂದ್ರರಾವ್ ವಿರುದ್ಧ 15,139 ಮತ ಪಡೆದ ಕಾಂಗ್ರೆಸ್‌ನ ಬಸವರಾಜೇಶ್ವರಿ 11,283 ಮತಗಳ ಅಂತರದಲ್ಲಿ ಸೋಲಿಸಿ ಎರಡನೇ ಬಾರಿ ಶಾಸಕರಾದರು. ಅದೇ ರೀತಿ 1967ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಸವರಾಜೇಶ್ವರಿ 15,032 ಮತಗಳನ್ನು ಪಡೆದು ಪ್ರತಿಸ್ಪರ್ಧಿ 9,760 ಮತ ಪಡೆದ ಸಿ.ಬಿ ಬೆಟ್ಟದೂರು ವಿರುದ್ಧ 5,272 ಮತಗಳ ಅಂತರದಿಂದ ಜಯ ಸಾಧಿಸಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದರು.
1972ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಭೀಮಪ್ಪ 22,434 ಮತ ಪಡೆದು 9760 ಮತ ಪಡೆದಿದ್ದ ಭಾರಾಒ ಪಕ್ಷದ ಪ್ರತಿಸ್ಪರ್ಧಿ ಎ.ಬಿ. ಪಾಟೀಲ್‌ರ ವಿರುದ್ಧ 12,674 ಮತಗಳಿಂದ ಗೆದ್ದರು. 1978 ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಾಜಾ ಅಂಬಣ್ಣ ನಾಯಕ 17,325 ಮತ ಪಡೆದಿದ್ದರು. ಎದುರಾಳಿ ಜನತಾದಳ ಪಕ್ಷದ ರಾಜಶೇಖರ್ 15,817 ಮತ ಪಡೆದ ಪರಿಣಾಮ ರಾಜಾ ಅಂಬಣ್ಣ ನಾಯಕ 1,508 ಮತಗಳಿಂದ ಗೆದ್ದು ಶಾಸಕರಾಗಿದ್ದರು. 1983ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಾಜಾ ಅಮರಪ್ಪ ನಾಯಕ 22,235 ಮತ ಪಡೆದು 8,600 ಮತಗಳ ಅಂತರದಿಂದ ಗೆಲವು ಸಾಧಿಸಿದರು. ಅವರ ವಿರುದ್ಧ ಸ್ಪರ್ಧಿಸಿದ್ದ ಜನತಾದಳ ಪಕ್ಷದ ಶಿವಶಂಕರಗೌಡ 13635 ಮತ ಪಡೆದು ಸೋತರು.
1985ರಲ್ಲಿ ನಡೆದ ಚುನಾವಣೆಯಲ್ಲಿ 31,929 ಮತಗಳನ್ನು ಪಡೆದಿದ್ದ ಜನತಾದಳ ಪಕ್ಷದ ಬಸವರಾಜ್ ಪಾಟೀಲ್ ಅನ್ವರಿ 31929 ಮತ ಪಡೆದರೆ 24,823 ಮತ ಗಳಿಸಿದ್ದ ಕಾಂಗ್ರೆಸ್‌ನ ಎನ್.ಎಸ್.ಬೋಸರಾಜು ವಿರುದ್ಧ 7,106 ಮತಗಳಿಂದ ಗೆದ್ದಿದ್ದರು. 1989ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸನಗೌಡ ಬ್ಯಾಗವಾಟ್ 23,500 ಮತ ಪಡೆದು 17,998 ಮತ ಪಡೆದಿದ್ದ ಎದುರಾಳಿ ಕಾಂಗ್ರೆಸ್‌ನ ಎಸ್.ಬಿ. ಅಮರಖೇಡ ವಿರುದ್ಧ 5,502 ಮತಗಳ ಅಂತರದಲ್ಲಿ ವಿಜಯ ಸಾಧಿಸಿದ್ದರು.
ಇನ್ನು 1994ರಲ್ಲಿ ನಡೆದ ಚುನಾವಣೆಯಲ್ಲಿ 22,130 ಮತ ಪಡೆದ ಜೆಡಿಎಸ್‌ನ ಗಂಗಾಧರ ನಾಯಕ ವಿಧಾನಸಭೆಗೆ ಆಯ್ಕೆಯಾದರು. ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಸನಗೌಡ ಬ್ಯಾಗವಾಟ್ 20,420 ಮತ ಪಡೆದು 1,710 ಮತಗಳಿಂದ ಸೋತಿದ್ದರು. 1999ರ ಚುನಾವಣೆಯಲ್ಲಿ 43,400 ಮತಗಳನ್ನು ಪಡೆದಿದ್ದ ಕಾಂಗ್ರೆಸ್‌ನ ಎನ್.ಎಸ್.ಬೋಸರಾಜು 24,890 ಮತ ಪಡೆದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಬಸನಗೌಡ ಬ್ಯಾಗವಾಟ್ ವಿರುದ್ಧ 18,510 ಮತ ಅಂತರದಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
2004ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್.ಎಸ್ ಬೋಸರಾಜು(NS Bosraju) 38,620 ಮತ ಗಳಿಸಿ, 28,513 ಮತ ಪಡೆದಿದ್ದ ಪಕ್ಷೇತರ ಅಭ್ಯರ್ಥಿ ಬಸನಗೌಡ ಬ್ಯಾಗವಾಟ್(Basavanagowda byagwat) ವಿರುದ್ಧ 10,107 ಮತಗಳ ಅಂತರದಿಂದ ಗೆದ್ದು ಎರಡನೇ ಸಲ ಶಾಸಕರಾದರು.
ಕ್ಷೇತ್ರ ಪುನರ್ ವಿಂಗಡಣೆ ಪರಿಣಾಮ ಸಾಮಾನ್ಯ ಕ್ಷೇತ್ರವಾಗಿದ್ದ ಮಾನ್ವಿ ಪರಿಶಿಷ್ಟಪಂಗಡ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. ಇದರ ಪರಿಣಾಮವಾಗಿ 2008ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ. ಹಂಪಯ್ಯ ನಾಯಕ ಬಲ್ಲಟಿಗಿ 38,290 ಮತ ಪಡೆದು 35,771 ಮತ ಪಡೆದಿದ್ದ ಬಿಜೆಪಿಯ ಗಂಗಾಧರ ನಾಯಕ ಅವರನ್ನು 2,519 ಮತಗಳಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ. ಹಂಪಯ್ಯ ನಾಯಕ 50,619 ಮತಗಳನ್ನು ಪಡೆದು 43,632 ಮತ ಪಡೆದಿದ್ದ ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ ವಿರುದ್ಧ 6,987 ಮತಗಳ ಅಂತರದಲ್ಲಿ ಗೆದ್ದು ಎರಡನೇ ಸಲ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 2018ರ ಚುನಾವಣೆಯಲ್ಲಿ ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ 53,434 ಮತಗಳನ್ನು ಪಡೆದು 37,641 ಮತಗಳನ್ನು ಗಳಿಸಿದ್ದ ಪಕ್ಷೇತರ ಅಭ್ಯರ್ಥಿ ಡಾ.ಪ್ರೀತಿ ಮೇತ್ರೆ ಅವರ ವಿರುದ್ಧ 15,793 ಮತಗಳ ಅಂತರದಲ್ಲಿ ಗೆದ್ದು ಕ್ಷೇತ್ರದಲ್ಲಿ ಜೆಡಿಎಸ್ ಖಾತೆ ತೆರೆದಿದ್ದರು.
ಪ್ರಸ್ತುತ ಜರುಗುತ್ತಿರುವ ಚುನಾವಣೆಯಲ್ಲಿ ಜೆಡಿಎಸ್ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ(Raja Venkatappa nayaka MLA) ಎರಡನೇ ಬಾರಿ ಶಾಸಕರಾಗಲು ಕಣಕ್ಕಿಳಿದಿದ್ದಾರೆ. ಕಳೆದ ಸಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಚ್ಚರಿಯ ಮತಗಳನ್ನು ಪಡೆದಿದ್ದ ಡಾ.ಪ್ರೀತಿ ಮೇತ್ರೆ ಕಣದಿಂದ ಹಿಂದೆ ಸರಿದಿದ್ದು, ಕಾಂಗ್ರೆಸ್ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ(G Hampayya nayaka) ಈ ಸಲ ಗೆದ್ದು ಸೋಲಿನಿಂದ ಹೊರ ಬರಲು ಪ್ರಯತ್ನ ನಡೆಸಿದ್ದಾರೆ. ಇನ್ನು ಕ್ಷೇತ್ರದಲ್ಲಿ ಇಲ್ಲಿ ತನಕ ಖಾತೆ ತೆರೆಯದ ಬಿಜೆಪಿ ವರಿಷ್ಠರು ಈ ಬಾರಿ ಬಲಿಷ್ಠ ನಾಯಕರನ್ನೇ ಕಣಕ್ಕಿಳಿಸಿದ್ದಾರೆ. ಮಾಜಿ ಎಂಪಿ, ಡಿಸಿಸಿ ಅಧ್ಯಕ್ಷರಾಗಿದ್ದ ಬಿ.ವಿ.ನಾಯಕ(BV Nayak) ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ಗೆ ರಾಜಿನಾಮೆ ಕೊಟ್ಟು ಬಿಜೆಪಿ ಸೇರಿ ಅಗ್ನಿ ಪರೀಕ್ಷೆಗೆ ನಿಂತಿದ್ದಾರೆ.
ಬಿಜೆಪಿ 4ನೇ ಪಟ್ಟಿ ಬಿಡುಗಡೆ: ಬಿ.ವಿ. ನಾಯಕ್‌ಗೆ ಮಾನ್ವಿ ಟಿಕೆಟ್
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಮಾನ್ವಿ ಕ್ಷೇತ್ರದ ಮತದಾರರು ಎಷ್ಟು?
ಜಾತಿವಾರು ಲೆಕ್ಕಾಚಾರ
ಈವರೆಗೆ ಆಯ್ಕೆಯಾದವರು...
ಅವಧಿ ಅಭ್ಯರ್ಥಿ ಪಕ್ಷ
2018ರ ಫಲಿತಾಂಶ