‘ವೀರಶೈವ-ಲಿಂಗಾಯತರಲ್ಲಿ ಎಲ್ಲರೂ ಪ್ರಾಮಾಣಿಕರಾಗಿದ್ದರು. ಆದರೆ, ಬಸವರಾಜ ಬೊಮ್ಮಾಯಿಯವರು ‘ಭ್ರಷ್ಟ ಸಿಎಂ’ ಎಂದು ಹೇಳಿದ್ದೀನಿ. ಅದರಲ್ಲಿ ತಪ್ಪೇನಿದೆ?. ಅದು ಜಾತಿ ವಿರುದ್ಧ ನೀಡಿದ ಹೇಳಿಕೆಯಾ?’ ಎಂದು ಅವರು ಪ್ರಶ್ನಿಸಿದ ಸಿದ್ದರಾಮಯ್ಯ.
ಬೆಳಗಾವಿ(ಏ.25): ‘ಬಿಜೆಪಿಯವರು ನನ್ನ ವಿರುದ್ಧ ವೀರಶೈವ-ಲಿಂಗಾಯತರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಹೇಳಿದ್ದು ವೀರಶೈವ-ಲಿಂಗಾಯತರಲ್ಲಿ ಎಲ್ಲರೂ ಪ್ರಾಮಾಣಿಕರಾಗಿದ್ದರು. ಆದರೆ, ಬಸವರಾಜ ಬೊಮ್ಮಾಯಿಯವರು ‘ಭ್ರಷ್ಟ ಸಿಎಂ’ ಎಂದು ಹೇಳಿದ್ದೀನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಗೋಕಾಕ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಿಮ್ಮ ಮಾತುಗಳನ್ನು ತಿರುಚಲಾಗುತ್ತಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ವೀರಶೈವ-ಲಿಂಗಾಯತರಲ್ಲಿ ಎಲ್ಲರೂ ಪ್ರಾಮಾಣಿಕರಾಗಿದ್ದರು. ಆದರೆ, ಬಸವರಾಜ ಬೊಮ್ಮಾಯಿಯವರು ‘ಭ್ರಷ್ಟ ಸಿಎಂ’ ಎಂದು ಹೇಳಿದ್ದೀನಿ. ಅದರಲ್ಲಿ ತಪ್ಪೇನಿದೆ?. ಅದು ಜಾತಿ ವಿರುದ್ಧ ನೀಡಿದ ಹೇಳಿಕೆಯಾ?’ ಎಂದು ಅವರು ಪ್ರಶ್ನಿಸಿದರು.
ಸಿದ್ದು ಅವನ್ಯಾರು, ಇವನ್ಯಾರು ಅನ್ನೋದನ್ನ ನಿಲ್ಲಿಸಲಿ: ಸೋಮಣ್ಣ
ಶೆಟ್ಟರ್‌ಗೆ ಟಿಕೆಟ್ ಕೈ ತಪ್ಪಲು ಬಿ.ಎಲ್.ಸಂತೋಷ್ ಕಾರಣರಲ್ಲ. ಇದು ಪ್ರಧಾನಿ ಮೋದಿ, ಅಮಿತ್ ಶಾ ಅವರು ತೆಗೆದುಕೊಂಡ ನಿರ್ಣಯ ಎಂಬ ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಶೆಟ್ಟರ್ ಹೇಳೋದನ್ನು ನಂಬಬೇಕೊ?, ಜೋಶಿ ಹೇಳೋದನ್ನು ನಂಬಬೇಕೊ?’ ಎಂದು ಪ್ರಶ್ನೆ ಮಾಡಿದರು. ‘ನಾನು ನಂಬುವುದು ಶೆಟ್ಟರ್ ಹೇಳುವುದನ್ನು. ಜೋಶಿಯವರು ಸುಳ್ಳು ಹೇಳುತ್ತಾರೆ’ ಎಂದರು.