ನನ್ನ ಸ್ಪರ್ಧೆಯಿಂದ ಕುರುಬ ಸಮುದಾಯ ಇಬ್ಬಾಗ ಮಾತು ಸುಳ್ಳು: ಸಿದ್ದರಾಮಯ್ಯ

By Govindaraj SFirst Published Jan 10, 2023, 3:20 AM IST
Highlights

ಕುರುಬ ಸಮುದಾಯ ಇಬ್ಬಾಗ ಮಾಡುವ ಮಾತು ಸುಳ್ಳು. ಆ ಒಂದು ಸಮುದಾಯವೊಂದರಿಂದಲೇ ನಾನು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಎಲ್ಲಾ ಜಾತಿ, ಧರ್ಮಗಳವರ ಬೆಂಬಲವೂ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕೋಲಾರ (ಜ.10): ಕುರುಬ ಸಮುದಾಯ ಇಬ್ಬಾಗ ಮಾಡುವ ಮಾತು ಸುಳ್ಳು. ಆ ಒಂದು ಸಮುದಾಯವೊಂದರಿಂದಲೇ ನಾನು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಎಲ್ಲಾ ಜಾತಿ, ಧರ್ಮಗಳವರ ಬೆಂಬಲವೂ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಒಂದೊಮ್ಮೆ ಕೋಲಾರದಲ್ಲಿ ಬಿಜೆಪಿಯಿಂದ ಕುರುಬ ಸಮಾಜದ ವರ್ತೂರು ಪ್ರಕಾಶ್‌ ಸ್ಪರ್ಧಿಸಿದರೆ, ಕುರುಬ ಸಮುದಾಯ ಇಬ್ಬಾಗವಾಗುವುದಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಮುದಾಯ ಇಬ್ಬಾಗ ಮಾಡುವ ಮಾತು ಸುಳ್ಳು. 

ಆ ಒಂದು ಸಮುದಾಯವೊಂದರಿಂದಲೇ ನಾನು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಜಿಲ್ಲೆಯ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು, ಜನರು ಕೋಲಾರದಲ್ಲಿ ಸ್ಪರ್ಧಿಸಲು ಒತ್ತಡ ಹಾಕಿದ್ದಾರೆ. ಅವರಿಗೆ ಬೇಸರ ತರಿಸಲು ಇಷ್ಟವಿಲ್ಲ. ಹೀಗಾಗಿ, ಇಲ್ಲಿಂದ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲವೇ ಇಲ್ಲ. ಅದು ಕೇವಲ ಮಾಧ್ಯಮಗಳ ಸೃಷ್ಟಿ. ಒಂದು ಪಕ್ಷ, ಕುಟುಂಬ ಎಂದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಸಹಜ. ಇದನ್ನೇ ಗುಂಪುಗಾರಿಕೆ ಎಂದು ಹೇಳುವುದು ಸರಿಯಲ್ಲ ಎಂದರು.

ಬಾದಾಮಿ, ವರುಣಾ, ಕೋಲಾರದಿಂದ ಸ್ಪರ್ಧೆಗೆ ಅರ್ಜಿ ಹಾಕಿದ್ದೇನೆ: ಸಿದ್ದರಾಮಯ್ಯ

ವರುಣದಲ್ಲಿ ಪುತ್ರ ವ್ಯಾಮೋಹದಿಂದ ಕಣಕ್ಕಿಳಿಯುತ್ತಿಲ್ಲವೇ ಎಂದು ಪ್ರಶ್ನಿಸಿದಾಗ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ವರಣದಲ್ಲಿ ಹಾಲಿ ಶಾಸಕ ಡಾ.ಯತೀಂದ್ರ ಇದ್ದಾರೆ. ಅಲ್ಲಿ ಕ್ಷೇತ್ರ ಖಾಲಿ ಇಲ್ಲ. ಕೋಲಾರದಲ್ಲಿ ಹಾಲಿ ಶಾಸಕರೇ ನನಗೆ ಕ್ಷೇತ್ರ ಬಿಟ್ಟು ಕೊಡಲು ಮುಂದೆ ಬಂದಿದ್ದಾರೆ ಎಂದರು. ನಾನು ಆಯ್ಕೆಯಾದ ಮೇಲೆ ಕ್ಷೇತ್ರಕ್ಕೆ ಬರುವುದಿಲ್ಲ. ರಾಜ್ಯದ ರಾಜಕಾರಣ ಮಾಡಿಕೊಂಡು ಇರುತ್ತೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಗೆದ್ದರೆ ನಾನು ಪ್ರತಿವಾರ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಎತ್ತಿನಹೊಳೆ ಯೋಜನೆಯನ್ನು 2 ವರ್ಷದಲ್ಲಿ ಮುಗಿಸುತ್ತೇವೆ. ನಿಕ್ಕರ್‌ ಹಾಕಿಕೊಂಡಿರುವ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನನ್ನನ್ನು ನೇರವಾಗಿ ಭೇಟಿ ಮಾಡಬಹುದು. ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ನಾನು ಬದ್ದನಾಗಿರುತ್ತೇನೆ ಎಂದರು.

ಕಟ್ಟಕಡೆಯ ವ್ಯಕ್ತಿಗೂ ನಾನು ಲಭ್ಯ: ನಾನು ಆಯ್ಕೆಯಾದ ಮೇಲೆ ಕ್ಷೇತ್ರಕ್ಕೆ ಬರುವುದಿಲ್ಲ, ರಾಜ್ಯದ ರಾಜಕಾರಣ ಮಾಡಿಕೊಂಡು ಇರುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ನಾನು ಪ್ರತಿ ವಾರ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ, ನಿಕ್ಕರ್‌ ಹಾಕಿ ಕೊಂಡಿರುವಂತ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನನ್ನನ್ನು ನೇರವಾಗಿ ಭೇಟಿ ಮಾಡಬಹುದು. ನಿಮ್ಮಗಳ ಸಮಸ್ಯೆಗಳನ್ನು ಬಗೆಹರಿಸಲು ಬದ್ದನಾಗಿರುತ್ತೇನೆ ಎಂದರು.

ರಾಜ್ಯದಲ್ಲಿ ನೀರಾವರಿ ಯೋಜನೆಗೆ ಆದ್ಯತೆ: ಕೆ.ಸಿ.ವ್ಯಾಲಿ, ಹೆಚ್‌.ಎನ್‌. ವ್ಯಾಲಿ ಯೋಜನೆಗೆ ಹಾಗೂ ಎತ್ತಿನ ಹೊಳೆ ಯೋಜನೆWಗಾಗಿ ಈ ಹಿಂದೆ ತಾವು ಅಧಿಕಾರಕ್ಕೆ ಬಂದ 2 ವರ್ಷದಲ್ಲಿ 24 ಸಾವಿರ ಕೋಟಿ ರು.ಗಳನ್ನು ಮಂಜೂರು ಮಾಡಿದ್ದೆ. ಮುಂದೆ ಅಧಿಕಾರಕ್ಕೆ ಬಂದಲ್ಲಿ ಭದ್ರ ಮೇಲ್ದಂಡೆ ಯೋಜನೆ, ಮೇಕೆದಾಟು ಯೋಜನೆ, ಕೃಷ್ಣ ಯೋಜನೆ, ಮಹಾದಾಯಿ ಯೋಜನೆ ಸೇರಿದಂತೆ ಎಲ್ಲಾ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಲ್ಲದೆ, ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ದೀಕರಣಕ್ಕೆ ಒತ್ತು ನೀಡುತ್ತೇನೆ, ಕೋಲಾರದಲ್ಲಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಮಂಜೂರಾತಿ ಸೇರಿದಂತೆ ನಿಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ನನಗೆ ಲಂಚ ಕೊಡಲು ವಿಧಾನಸೌಧಕ್ಕೆ ಬರಬೇಕಿತ್ತೇ: ಸಿದ್ದು ಆರೋಪಕ್ಕೆ ತಿರುಗೇಟು ನೀಡಿದ ಸಿ.ಸಿ.ಪಾಟೀಲ್

ಬಿಜೆಪಿ ಸುಳ್ಳಿನ ಕಾರ್ಖಾನೆ: ಅನ್ನ ಭಾಗ್ಯ ಯೋಜನೆಯಲ್ಲಿ ಪಡಿತರ ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಮುಖ್ಯ ಮಂತ್ರಿ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ್ದೆ ಆಗಿದ್ದರೆ, ಉತ್ತರ ಪ್ರದೇಶ, ಮಧ್ಯೆ ಪ್ರದೇಶ, ಹರಿಯಾಣ, ಆಸ್ಸಾಂ ಸೇರಿದಂತೆ ಬಿಜೆಪಿ ಆಡಳಿತ ಇರುವ ಸರ್ಕಾರಗಳಲ್ಲಿ ಏಕೆ ಉಚಿತ ಪಡಿತರ ನೀಡುತ್ತಿಲ್ಲ. ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದು ಟೀಕಿಸಿದ ಅವರು, ಮುಂದೆ ಕಾಂಗ್ರೆಸ್‌ ಆಡಳಿತಕ್ಕೆ ಬಂದಲ್ಲಿ ಪ್ರತಿಯೊಬ್ಬರಿಗೂ 10 ಕೆ.ಜಿ. ಮಂಜೂರು ಮಾಡುವುದಾಗಿ ತಿಳಿಸಿದರು.

click me!