45 ವರ್ಷ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಇಂದು ಅತಂತ್ರ ಸ್ಥಿತಿಗೆ ತಲುಪಿದ್ದಾರೆ: ಸಂಸದ ಮುನಿಸ್ವಾಮಿ

Published : Mar 27, 2023, 11:00 PM ISTUpdated : Mar 27, 2023, 11:01 PM IST
45 ವರ್ಷ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಇಂದು ಅತಂತ್ರ ಸ್ಥಿತಿಗೆ ತಲುಪಿದ್ದಾರೆ: ಸಂಸದ ಮುನಿಸ್ವಾಮಿ

ಸಾರಾಂಶ

ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರವನ್ನು ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದು, ಅವರನ್ನು ಅತ್ತ ವರುಣಾ ಕ್ಷೇತ್ರದ ಜನರೂ ನಂಬುವುದಿಲ್ಲ. ಕೋಲಾರದ ಜನರೂ ನಂಬುವುದಿಲ್ಲ. ಸದ್ಯ ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಸಂಸದ ಎಸ್‌.ಮುನಿಸ್ವಾಮಿ ವ್ಯಂಗ್ಯವಾಡಿದರು.

ಕೋಲಾರ (ಮಾ.27) : ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರವನ್ನು ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದು, ಅವರನ್ನು ಅತ್ತ ವರುಣಾ ಕ್ಷೇತ್ರದ ಜನರೂ ನಂಬುವುದಿಲ್ಲ. ಕೋಲಾರದ ಜನರೂ ನಂಬುವುದಿಲ್ಲ. ಸದ್ಯ ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಸಂಸದ ಎಸ್‌.ಮುನಿಸ್ವಾಮಿ(MP Muniswamy) ವ್ಯಂಗ್ಯವಾಡಿದರು.

ನಗರದ ರಂಗಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದಲ್ಲಿ ಕಳೆದ 15 ವರ್ಷದಿಂದ ಕಾಂಗ್ರೆಸ್‌ ಇಲ್ಲ. ವರ್ತೂರು ಪ್ರಕಾಶ್‌(Vartur prakash)2 ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಹಣಾಹಣಿ ನಡೆಯಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಆಗೋದಕ್ಕೆ ಖರ್ಗೆ, ಡಿಕೆಶಿ, ಸಿದ್ದರಾಮಯ್ಯ ಮೂವರೂ ಚಡ್ಡಿ ಹೊಲಿಸಿಕೊಂಡು ಕೂತಾರ:  ಸಚಿವ ಕಾರಜೋಳ ವ್ಯಂಗ್ಯ

ಸ್ಥಳೀಯ ಶಾಸಕರುಗಳು ತಮ್ಮ ಅಸ್ಥಿತ್ವ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯರನ್ನು ಕರೆತಂದು ಬಲಿಕೊಡುವ ಕೆಲಸ ಮುಂದಾಗಿದ್ದು, ಕಾಂಗ್ರೆಸ್‌ನ 4 ತಂಡಗಳು ಸಿದ್ದು ನಿವಾಸಕ್ಕೆ ತೆರಳಿ ಬಟ್ಟೆಬಿಚ್ಚಿ, ಚಾಟಿಯಲ್ಲಿ ಹೊಡೆದುಕೊಂಡಿದ್ದಾರೆ. ಕೋಲಾರ ಅಭಿವೃದ್ಧಿಗಾಗಿ ಚಾಟಿಯಲ್ಲಿ ಹೊಡೆದುಕೊಂಡಿದ್ದರೆ ಆ ಮುಖಂಡರನ್ನು ಒಪ್ಪಿಕೊಳ್ಳಬಹುದಾಗಿತ್ತು. ಆದರೆ, ತಮ್ಮ ಅಸ್ಥಿತ್ವಗಳ ಉಳಿವಿಗಾಗಿ ಜನರ ಮಾನ ಮರ್ಯಾದೆ ಬೆಂಗಳೂರಿನಲ್ಲಿ ಕಳೆಯುತ್ತಿರುವುದು ಖಂಡನೀಯ ಎಂದರು.

ವಿಧಾನಸಭೆ ಚುನಾವಣೆ(Karnataka assembly election 2023)ಯಲ್ಲಿ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ(H Muniyappa)ರಿಗೆ ದೇವನಹಳ್ಳಿ ಕ್ಷೇತ್ರದಿಂದ ಟಿಕೆಟ್‌ ಘೋಷಣೆ ಮಾಡಿದ್ದು, ಮೊದಲು ಅಲ್ಲಿ ಗೆದ್ದು ಬರಲಿ. ಅದಾದ ಬಳಿಕ ಸಿಎಂ ಆಗ್ತಾರೋ, ಪಿಎಂ ಆಗ್ತಾರೋ ಅಥವಾ ಮೊಮ್ಮಕ್ಕಳ ಜತೆಯಲ್ಲಿ ಆಟ ಆಡ್ತಾರೋ ನೋಡೋಣ ಎಂದು ಹೇಳಿದರು.

ಮುಳುಗಡೆ ನಗರ ಬಾಗಲಕೋಟೆಗೆ ಶಾಪ ವಿಮೋಚನೆ: ಚಂಡಿಗಡ ಮಾದರಿ ಅಭಿವೃದ್ಧಿಗೆ ಪಣ- ಗೋವಿಂದ ಕಾರಜೋಳ

ಕಾಂಗ್ರೆಸ್‌ ಮುಸ್ಲಿಂ ಎಂದು ಹೇಳಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದೆ. ಇದೀಗ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಎಂದು ವಾಲ್‌ ಪೋಸ್ಟರ್‌ ಹಾಕಿಕೊಂಡು ಓಡಾಡುತ್ತಿದ್ದಾರೆ. ಅವರ ಪಕ್ಷಕ್ಕೆ ಎಲ್ಲೂ ಸಹ ಗ್ಯಾರೆಂಟಿ ಇಲ್ಲ. ಅವರ ನಾಯಕ ರಾಹುಲ್‌ ಗಾಂಧಿ ಲೋಕಸಭಾ ಸದಸ್ಯತ್ವ ಸ್ಥಾನ ಕಳೆದುಕೊಳ್ಳಲು ಮುಳಬಾಗಿಲಿನ ರಘುನಾಥ್‌ ಕಾರಣರಾಗಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌