ಕರ್ನಾಟಕದ ಅಭಿವೃದ್ಧಿಗಾಗಿ ದೇವೇಗೌಡರ ಕುಟುಂಬ ಹೋರಾಟ ಮಾಡುತ್ತಿದೆ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
ಚಿಕ್ಕಮಗಳೂರು(ಫೆ.27): ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರನೇ ಅವರ ವಿರುದ್ಧ ನಿಂತಿದ್ದಾನೆ. ಅವರ ಅನ್ಯಾಯದ ವಿರುದ್ಧ ದಾಖಲೆ ನೀಡುತ್ತೇನೆ ಎಂದು ನನಗೆ ಕರೆ ಮಾಡುತ್ತಾನೆ. ಮೊದಲು ಅವರ ಕುಟುಂಬದ ಸಮಸ್ಯೆ ಬಗೆಹರಿಸಿಕೊಳ್ಳಲಿ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.
ನಿನ್ನೆ(ಭಾನುವಾರ) ಜಿಲ್ಲೆಯ ಎನ್.ಆರ್ ಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ, ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಲು ನಡೆಸುತ್ತಿರುವ ಹೋರಾಟವಾಗಿದೆ. ಇದು ಕುಟುಂಬ ಕಲಹ ಅಲ್ಲ. ಜನರ ಸೇವೆ ಮಾಡಲು ಮುಂದೆ ಬರುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ಯಾರು ಲೂಟಿ ಹೊಡೆಯಲು ಮುಂದೆ ಬರುತ್ತಿಲ್ಲ. ಜನರ ಸೇವೆ ಮಾಡಲು ಮುಂದೆ ಬರುತ್ತಿದ್ದಾರೆ ಅಂತ ತಿಳಿಸಿದ್ದಾರೆ. ರಾಮಾಯಣ, ಮಹಾಭಾರತದಲ್ಲೂ ಅಧಿಕಾರಕ್ಕಾಗಿ ಹೋರಾಟ ನಡೆದಿದೆ. ಇದು ನಮ್ಮ ಸಂಸ್ಕೃತಿ. ಇದನ್ನ ಯಾರು ಬದಲಾಯಿಸಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
ಎಚ್‌ಡಿಕೆ ಅಧಿಕಾರ ಇದ್ದಾಗ ಏಕೆ ಪಂಚರತ್ನ ಜಾರಿ ಮಾಡಲಿಲ್ಲ?: ಸಚಿವ ಸುಧಾಕರ್ ಪ್ರಶ್ನೆ
ನಾವು ಏಕೆ ಅತಂತ್ರ ಮಾಡುತ್ತೇವೆ, ಅತಂತ್ರದಲ್ಲಿರುವುದು ಬಿಜೆಪಿ ಹಾಗೂ ಯಡಿಯೂರಪ್ಪ. ಅವರ ಸ್ಥಿತಿ ಅವರಿಗೇ ಗೊತ್ತಿಲ್ಲ ನಮ್ಮ ಬಗ್ಗೆ ಮಾತಾಡುವುದು ಏಕೆ ಅಂತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪಕ್ಷ ಯಾವ ಸ್ಥಿತಿಯಲ್ಲಿದೆ ನೋಡಿಕೊಳ್ಳಲಿ. ನಾನು 18 ಗಂಟೆ ಕೆಲಸ ಮಾಡುತ್ತಿರುವುದು 123 ಮಿಷನ್‌ಗಾಗಿ. ಬಿಜೆಪಿಯವರ ರೀತಿ ಲೂಟಿ ಹೊಡೆಯಲು ಅಲ್ಲ. ಈ ರಾಜ್ಯದ ಅಭಿವೃದ್ಧಿಗಾಗಿ ಜನರ ಸೇವೆಗಾಗಿ ದೇವೇಗೌಡರ ಕುಟುಂಬ ಹೋರಾಟ ಮಾಡುತ್ತಿದೆ ಅಂತ ಹೇಳಿದ್ದಾರೆ.