ಬಿಜೆಪಿ ಗೆಲ್ಲಿಸೋ ಸುಪಾರಿ ಪಡೆದ ಸಿದ್ದ​ರಾ​ಮಯ್ಯ: ಎಚ್‌.ಡಿ.ಕುಮಾರಸ್ವಾಮಿ

By Kannadaprabha News  |  First Published Feb 14, 2023, 6:20 AM IST

ಪ್ರತಿ​ಪಕ್ಷ ನಾಯಕ ಸಿದ್ದರಾಮಯ್ಯ ಕೆಣಕಿ, ಕೆಣಕಿ ಮನೆಗೆ ಹೋಗುವ ಕಾಲ ಬಂದಿದೆ. ಬಿಜೆಪಿ ಗೆಲ್ಲಿ​ಸುವ ಸುಪಾ​ರಿ​ಯನ್ನು ಅವರು ಪಡೆ​ದು​ಕೊಂಡಿ​ದ್ದಾ​ರೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆ​ಸಿ​ದ​ರು.


ಬೆಳಗಾವಿ (ಫೆ.14): ಪ್ರತಿ​ಪಕ್ಷ ನಾಯಕ ಸಿದ್ದರಾಮಯ್ಯ ಕೆಣಕಿ, ಕೆಣಕಿ ಮನೆಗೆ ಹೋಗುವ ಕಾಲ ಬಂದಿದೆ. ಬಿಜೆಪಿ ಗೆಲ್ಲಿ​ಸುವ ಸುಪಾ​ರಿ​ಯನ್ನು ಅವರು ಪಡೆ​ದು​ಕೊಂಡಿ​ದ್ದಾ​ರೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆ​ಸಿ​ದ​ರು. ಬೈಲಹೊಂಗಲ ತಾಲೂಕಿನ ತಡಸಲೂರು ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಜೆಡಿಎಸ್‌ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಈ ಚುನಾವಣೆ ನೋಡೋಣ. ಕೋಲಾರದಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದರು.

ಸಿದ್ದರಾಮಯ್ಯ, ಯಡಿಯೂರಪ್ಪ ಅವರಿಬ್ಬರು ಆಂತರಿಕವಾಗಿ ಒಬ್ಬರಿಗೊಬ್ಬರು ವಿಶ್ವಾಸದಲ್ಲಿದ್ದಾರೆ. 2008ರ ಉಪಚುನಾವಣೆಯಲ್ಲಿ ಆಪರೇಷನ್‌ ಕಮಲ ಚುನಾವಣೆಯಲ್ಲಿ ಸಿದ್ದರಾಮಯ್ಯ ಸುಪಾರಿ ತೆಗೆದುಕೊಂಡರು. ಸುಪಾರಿಗೆ ಎಷ್ಟುತೆಗೆದುಕೊಂಡಿದ್ದಾರೆ ಎಂದು ನಾನು ಸಾವಿರ ಸಲ ಕೇಳಿದ್ದೇನೆ. ಈವರೆಗೂ ಉತ್ತರ ಸಿಕ್ಕಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಕಾರಣ ಎಂದು ಅವರು ಆರೋ​ಪಿ​ಸು​ತ್ತಾ​ರೆ. ಆದ​ರೆ, ರಾಜ್ಯದಲ್ಲಿ ಬಿಜೆಪಿ ಸದೃಢವಾಗಿ ಬೆಳೆಯಲು ಸಿದ್ದರಾಮಯ್ಯ ನಡವಳಿಕೆ ಕಾರಣ. ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. 

Tap to resize

Latest Videos

ಬಿಜೆಪಿ, ಕಾಂಗ್ರೆಸ್‌ ಆಡಳಿತದಲ್ಲಿ ಜನರ ಬದುಕಿನ ಜೊತೆ ಚೆಲ್ಲಾಟ: ಎಚ್‌ಡಿಕೆ

ಈಗಲೂ ಬಿಜೆಪಿ ಗೆಲ್ಲಿಸುವ ಸುಪಾರಿಯನ್ನು ಸಿದ್ದರಾಮಯ್ಯ ಪಡೆದಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಅವರು ಮುಖ್ಯ​ಮಂತ್ರಿ​ಯಾ​ದರೆ ಮಾತ್ರ ಕಾಂಗ್ರೆಸ್‌. ಇಲ್ಲವೇ ಪಕ್ಷ ಸಂಪೂರ್ಣವಾಗಿ ನಿರ್ನಾಮ ಆಗಬೇಕು ಎನ್ನುವ ಉದ್ದೇಶ ಅಷ್ಟೆಅವರದು. ಸೂರ್ಯ, ಚಂದ್ರ ಇರುವುದು ಎಷ್ಟುನಿಜವೋ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಜ ಎನ್ನುತ್ತಾರೆ. ನೀವು ಅಲ್ಲೇ ಅರ್ಥ ಮಾಡಿಕೊಳ್ಳಬಹುದು ಕಾಂಗ್ರೆಸ್‌ ಈ ಬಾರಿ ನೆಲ ಕಚ್ಚಲಿದೆ ಎಂದು ಭವಿಷ್ಯ ನುಡಿದರು.

ಸುಳ್ಳಿನ ರಾಮ​ಯ್ಯ: ಕುಮಾರಸ್ವಾಮಿ ಸುಳ್ಳು ಹೇಳುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರೇ ಸುಳ್ಳಿನ ರಾಮಯ್ಯ. ನಾನು ಕೇಳಿದ ಪ್ರಶ್ನೆಗೆ ಒಂದಕ್ಕೂ ಉತ್ತರ ಕೊಟ್ಟಿಲ್ಲ. ಅವರು ಏನು ಮಾಡಿದರೂ ಉತ್ತರ ಕೊಡುತ್ತಿಲ್ಲ ಎಂದ​ರು. ನಿಮ್ಮ ವಿರುದ್ಧ ನಟಿ ರಮ್ಯಾರನ್ನು ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿಸಲು ಚಿಂತನೆ ನಡೆ​ಯು​ತ್ತಿ​ರುವ ಕುರಿತ ಪ್ರಶ್ನೆಗೆ, ಯಾರನ್ನು ಬೇಕಾದರೂ ನಿಲ್ಲಿಸಲಿ, ಯಾರನ್ನು ಬೇಕಾದರೂ ಅಭ್ಯರ್ಥಿ ಮಾಡಲಿ ಎಂದು ತಿಳಿಸಿದರು

ಪಾಪ, ಎಚ್‌ಡಿಕೆಗೆ ವಯಸ್ಸಾಗಿದೆ ನಿವೃತ್ತಿ ಆದರೆ ಆಗಲಿ ಬಿಡಿ: ಸಿದ್ದರಾಮಯ್ಯ

ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ: ನಾನು ಏನೂ ಮಾತ​ನಾ​ಡಲ್ಲ, ನೀವೂ ಏನೂ ಮಾತ​ನಾ​ಡ​ಬೇಡಿ. ನೀವೇ​ನಾ​ದರೂ ಬಿಚ್ಚಿದ್ರೆ, ನಾವೂ ಬಿಚ್ಚ​ಬೇ​ಕಾ​ಗು​ತ್ತೆ ಎಂಬ ಶಾಸಕ ಶಿವ​ಲಿಂಗೇ​ಗೌಡ ಅವರ ಎಚ್ಚ​ರಿ​ಕೆಗೆ ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ ತೀವ್ರ ಕಿಡಿ​ಕಾ​ರಿ​ದ್ದಾ​ರೆ. ಏನ್‌ ಬಿಚ್ಚಬೇಕು ಬಿಚ್ಚೋಕೆ ಹೇಳಿ, ಏನ್‌ ಬಿಚ್ಚುತ್ತಾನಂತೆ? ಎಂದು ಏಕ​ವ​ಚ​ನ​ದಲ್ಲೇ ವಾಗ್ದಾಳಿ ನಡೆ​ಸಿ​ದ್ದಾ​ರೆ. ನಮ್ಮ ಬಗ್ಗೆ ಬಿಚ್ಚೋಕೆ ಏನು ಇಟ್ಟುಕೊಂಡಿದ್ದಾನೆ? ಅವನ ಮಾತುಗಳನ್ನು ನಾವು ಲೆಕ್ಕಕ್ಕೂ ಇಡಲ್ಲ. ದುರಹಂಕಾರ ಸುಳ್ಳು ಹೇಳುವುದನ್ನು ಬಿಟ್ಟು ರಾಜಕಾರಣ ಮಾಡಲು ಶಿವಲಿಂಗೇಗೌಡಗೆ ಹೇಳಿ ಎಂದು ಆಕ್ರೋಶ ಹೊರ​ಹಾ​ಕಿ​ದ್ದಾ​ರೆ.

click me!