ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ಮಾಡಿ ಪ್ರಯೋಜನ ಏನು ಇಲ್ಲ| ಪುಲಿಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರೇ ಗಲಭೆ ಯಾಕೆ ಆಯ್ತು ಅಂತ ಹೇಳಿದ್ದಾರೆ| ಇದರ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದ ಹೆಚ್‌ಡಿಕೆ|
ಬೆಂಗಳೂರು(ಸೆ.17): ಡ್ರಗ್ಸ್ ಮಾಫಿಯಾ ಬಗ್ಗೆ ಸದನಲ್ಲಿ ಚರ್ಚೆ ಮಾಡುವುದಿಲ್ಲ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಜನರ ಪರವಾದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಇಂದು(ಗುರುವಾರ) ಮಾಧ್ಯಮವರೊಂದಿಗೆ ಮಾತನಾಡಿದ ಅವರು, ವಸತಿ ಸಚಿವ ಸೋಮಣ್ಣ ಮನೆ ಕೇಳಿದ ವ್ಯಕ್ತಿಗೆ ಫೋನ್‌ನಲ್ಲಿ ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಹಿಂದಿನ ಸರ್ಕಾರ ಇದ್ದಾಗ ಯಾರು ಮನೆ ಕೇಳಿಲ್ಲ ಅಂತ ಸೋಮಣ್ಣ ಅವರು ಹೇಳಿದ್ದಾರೆ. ನನ್ನಿಂದ ಯಾವುದೇ ಸಮಸ್ಯೆ ಆಗಿಲ್ಲ. ವಸತಿ ಇಲಾಖೆಯಲ್ಲಿ ನನ್ನ ಅವಧಿಯಲ್ಲಿ ಅನೇಕ ಕೆಲಸಗಳನ್ನ ಮಾಡಿದ್ದೇನೆ. ಇದೆಲ್ಲವನ್ನೂ ನಾನು ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ಮಾಡಿ ಪ್ರಯೋಜನ ಏನು ಇಲ್ಲ. ಪುಲಿಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರೇ ಗಲಭೆ ಯಾಕೆ ಆಯ್ತು ಅಂತ ಹೇಳಿದ್ದಾರೆ. ಇದರ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಹುಟ್ಟುಹುಬ್ಬ ನಿರುದ್ಯೋಗಿಗಳ ದಿನ: ಸಿದ್ದರಾಮಯ್ಯ
ಕಾಂಗ್ರೆಸ್‌ನವರೇ ಇದರಲ್ಲಿದದ್ದಾರೆ ಅಂತ ಜಗತ್ ಜಾಹೀರಾಗಿದೆ. ಕಾಂಗ್ರೆಸ್ ಅವರು ಈ ಬಗ್ಗೆ ಏನ್ ಹೇಳುತ್ತಾರೆ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ಯಾವುದೇ ಪ್ರಯೋಜನವಿಲ್ಲ. ನಮ್ಮವರೇ ನಮಗೆ ತೊಂದರೆ ಮಾಡಿದ್ರು ಅಂತಾ ಶಾಸಕ ಶ್ರೀನಿವಾಸ್ ಮೂರ್ತಿ ಅವರೇ ಹೇಳಿದ್ದಾರೆ. ಮೂಲ ಅವರಲ್ಲೇ ಇದೆ, ಅದಕ್ಕೆ ಪ್ರೇರೇಪಣೆ ಕೊಟ್ಟವರು ಯಾರು ಮ್ಯಾಜಿಸ್ಟ್ರೇಟ್ ತನಿಖೆ ಏನಾಯ್ತು..? ಎಂದು ಪ್ರಶ್ನಿಸಿದ್ದಾರೆ.
ಗಾಂಜಾ ಹೊಡೆದವರನ್ನ ಅರೆಸ್ಟ್ ಮಾಡಿದ್ರೋ? ಅಥವಾ ಅಮಾಯಕರನ್ನ ಅರೆಸ್ಟ್ ಮಾಡಿದ್ರೋ ಗೊತ್ತಿಲ್ಲ, ಸಾವಿರಾರು ಮಕ್ಕಳನ್ನ ತಗೊಂಡು ಅಲ್ಲೆಲ್ಲೋ ಬಳ್ಳಾರಿ ಜೈಲಲ್ಲಿ ಹಾಕಿದ್ದಾರೆ. ಆದ್ರೆ ಮುಖ್ಯ ಆರೋಪಿಯನ್ನ ಇಲ್ಲಿವರೆಗೂ ಬಂಧಿಸಿದ್ದಾರಾ? ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯ ಸರ್ಕಾರ ಹೋಗುತ್ತಿರುವ ಮಾರ್ಗ ನೋಡಿದರೆ ದೇವರೇ ಸರ್ಕಾರವನ್ನ ಕಾಪಾಬೇಕು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದಂತೆ ದೇವರೇ ಕಾಪಾಡಬೇಕು ಅಷ್ಟೆ ಎಂದಿದ್ದಾರೆ.