ಮಂಡ್ಯದಲ್ಲಿ ಮಾಜಿ ಸಿಎಂ ಮತ್ತು ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರ ಪರ ಪ್ರಚಾರಕ್ಕೆ ಪಕ್ಷ ನನ್ನನ್ನು ಆಹ್ವಾನಿಸಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಮೈಸೂರು (ಏ.21): ಮಂಡ್ಯದಲ್ಲಿ ಮಾಜಿ ಸಿಎಂ ಮತ್ತು ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರ ಪರ ಪ್ರಚಾರಕ್ಕೆ ಪಕ್ಷ ನನ್ನನ್ನು ಆಹ್ವಾನಿಸಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ನನ್ನನ್ನು ಆಹ್ವಾನಿಸಿದ ಕಡೆ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ಈಗ ಮೈಸೂರು, ಉಡುಪಿ ಮುಂತಾದ ಕಡೆಗೆ ಪ್ರಚಾರಕ್ಕೆ ಕರೆದಿದ್ದಾರೆ, ಹೋಗುತ್ತಿದ್ದೇನೆ. ಇದರಲ್ಲಿ ಯಾವುದೇ ಉದ್ದೇಶವಿಲ್ಲ ಎಂದರು.
ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವಿದ್ದ ನಾನು ಕ್ಷೇತ್ರವನ್ನು ಬಿಟ್ಟು, ಟಿಕೆಟ್ ಕೊಡದಿದ್ದರೂ ಬಿಜೆಪಿಗೆ ಸೇರಿದ್ದೇನೆ. ಅಲ್ಲದೆ, ಪಕ್ಷೇತರವಾಗಿ ಸ್ಪರ್ಧಿಸಿ ತೊಂದರೆಯನ್ನುಂಟು ಮಾಡುತ್ತಿಲ್ಲ. ಅಂದರೆ ಇದರ ಅರ್ಥ ನಾನು ಅವರಿಗೆ ಬೆಂಬಲವಾಗಿದ್ದೇನೆ ಎಂದೇ ಅಲ್ಲವೇ? ಎಂದು ಅವರು ಪ್ರಶ್ನಿಸಿದರು. ಮಾಜಿ ಸಿಎಂ ಕುಮಾರಸ್ವಾಮಿ ಅವರು ಮನೆಗೆ ಬಂದಿದ್ದರು. ಹಳೆಯದನ್ನು ಮರೆಯೋಣ, ನಮ್ಮೊಡನೆ ಸಹಕಾರ ನೀಡಿ ಎಂದು ಕೋರಿದರು. ನಾನು ಸಂಪೂರ್ಣ ಮನಸ್ಸಿನಿಂದ ಬಿಟ್ಟುಕೊಟ್ಟಿದ್ದೇನೆ ಎಂದರು.
undefined
ಕೇದಾರದಲ್ಲಿದ್ದ ಬೆಳಗಾವಿ ಮೂಲದ ಪಂಡಿತ ಮೃತ್ಯುಂಜಯ ಲಿಂಗೈಕ್ಯ
ನನಗೆ ನರೇಂದ್ರ ಮೋದಿಯೇ ಸ್ಫೂರ್ತಿ: ಕಳೆದ ಐದು ವರ್ಷಗಳ ಲೋಕಸಭಾ ಪ್ರಯಾಣದಲ್ಲಿ ಸಾಕಷ್ಟು ಕಲಿತಿದ್ದೇನೆ. ಸಾಕಷ್ಟು ಅನುಭವವಾಗಿದೆ. ಅಂಬರೀಶ್ ಅವರು 25 ವರ್ಷ ಕಾಂಗ್ರೆಸ್‌ನಲ್ಲಿದ್ದರು. ಆ ದೃಷ್ಟಿಕೋನದಲ್ಲಿ ರಾಜಕೀಯವನ್ನು ನಾನು ದೂರದಿಂದ ನೋಡಿಕೊಂಡು ಬಂದಿದ್ದೆ. ನಾನು ಸಂಸತ್ ಪ್ರವೇಶಿಸಿದ ಬಳಿಕ ಸಾಕಷ್ಟು ಬಿಜೆಪಿಯ ಹಿರಿಯ ನಾಯಕರ ಮಾರ್ಗದರ್ಶನ ಸಿಕ್ಕಿದೆ. ಮುಖ್ಯವಾಗಿ ನನಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಫೂರ್ತಿ. ಮೋದಿ ಅವರ ನಾಯಕತ್ವ, ಪರಿಕಲ್ಪನೆ, ಕನಸುಗಳು ಒಂದೊಂದು ನಿಜಕ್ಕೂ ಸ್ಫೂರ್ತಿ ನೀಡಿವೆ. ಸಂಸತ್ತಿನಲ್ಲಿ ಅವರ ಭಾಷಣಗಳಿಂದ ಹೊಸ ತಿಳಿವಳಿಕೆ ಸಿಕ್ಕಿತು. ಐದು ವರ್ಷಗಳಲ್ಲಿ ಇವೆಲ್ಲವನ್ನೂ ನೋಡಿ ಗಮನಿಸಿ ಬಿಜೆಪಿ ಸೇರುವುದೇ ಉತ್ತಮ ಆಯ್ಕೆ ಅನಿಸಿತು. ಹೀಗಾಗಿ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.
ಬೇರೆಯವರು ಕ್ರೆಡಿಟ್ ಪಡೆಯಲು ಯತ್ನ: ಇನ್ನು ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಸಹಕಾರ ನೀಡಿದ್ದಾರೆ. ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆ ಪುನರ್ ಆರಂಭಕ್ಕೆ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಕೊಡುಗೆ ಅಪಾರವಿದೆ. ಬಿಜೆಪಿ ಸರ್ಕಾರ ಮಂಡ್ಯ ಜಿಲ್ಲೆಗೆ ನೀಡಿದ ಕೊಡುಗೆಯ ಶ್ರೇಯಸ್ಸು ಬಿಜೆಪಿಗೆ ಸೇರಬೇಕು. ಆದರೆ, ಬೇರೆಯವರು ಆ ಕೊಡುಗೆಯನ್ನು ತಮ್ಮದು ಎಂದು ಹೇಳಿಕೊಂಡು ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಜನರೇ ಉತ್ತರ ಕೊಡಬೇಕು ಎಂದರು.
ಬೆಂಗಳೂರು ಜನ ಬದಲಾವಣೆ ಬಯಸಿದ್ದಾರೆ: ಮುಖಾಮುಖಿ ಸಂದರ್ಶನದಲ್ಲಿ ಮನ್ಸೂರ್ ಅಲಿಖಾನ್!
ನುಡಿದಂತೆ ನಡೆಯುವ ನಾಯಕತ್ವವನ್ನು ನರೇಂದ್ರ ಮೋದಿ ಅವರಲ್ಲಿ ಕಂಡೆ. ಅವರ 2047ರ ಕನಸು ನನಸಾಗಲು ನಾವೆಲ್ಲಾ ಕೈ ಜೋಡಿಸಬೇಕು. ನನಗೆ ನನ್ನ ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ನನಗೆ ಮಂಡ್ಯ ಜಿಲ್ಲೆ, ರಾಜ್ಯ ಮತ್ತು ದೇಶ ಮುಖ್ಯ. ಇವತ್ತು ಅಧಿಕೃತವಾಗಿ ಬಿಜೆಪಿ ಸೇರಿದ್ದೇನೆ. ಇದರಿಂದ ಹೆಮ್ಮೆ ಮತ್ತು ಸಂತೋಷವಾಗುತ್ತಿದೆ ಎಂದು ಸುಮಲತಾ ಹೇಳಿದರು.