ಕೇಂದ್ರ, ಹಿಂದಿನ ಸರ್ಕಾರವನ್ನು ಟೀಕಿಸಿದ್ದೇ ಸಿದ್ದು ಬಜೆಟ್‌ ಸಾಧನೆ: ಮಾಜಿ ಸಿಎಂ ಬೊಮ್ಮಾಯಿ

Published : Jul 26, 2023, 11:52 AM IST
ಕೇಂದ್ರ, ಹಿಂದಿನ ಸರ್ಕಾರವನ್ನು ಟೀಕಿಸಿದ್ದೇ ಸಿದ್ದು ಬಜೆಟ್‌ ಸಾಧನೆ: ಮಾಜಿ ಸಿಎಂ ಬೊಮ್ಮಾಯಿ

ಸಾರಾಂಶ

ಮುಖ್ಯಮಂತ್ರಿಗಳು ಜನರ ಮೇಲೆ ಭಾರವನ್ನು ಹಾಕದೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರುವುದಾಗಿ ಹೇಳಿರುವುದು, ಆಡಿದ್ದೊಂದು ಮಾಡಿದ್ದೊಂದು ಎನ್ನುವುದು ಇದೇ ಬಜೆಟ್‌ನಲ್ಲಿ ವಿಧಿಸಿರುವ ತೆರಿಗೆಗಳಿಂದ ಸಾಬೀತಾಗಿದೆ: ಬಸವರಾಜ ಬೊಮ್ಮಾಯಿ 

ಬೆಂಗಳೂರು(ಜು.26):  ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್‌ನಲ್ಲಿ ಹಿಂದಿನ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ರಾಜಕೀಯ ಉದ್ದೇಶಕ್ಕೆ ಟೀಕೆ ಮಾಡಿದ್ದು, ಈ ಮೂಲಕ ವಾಸ್ತವಿಕ ಅಂಶಗಳನ್ನು ಮರೆ ಮಾಚುವ ಕೆಲಸ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಹಿಂದಿನ ನಮ್ಮ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ಟೀಕೆ ಮಾಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಪರದಾಡಬೇಕಾಗಿತ್ತು ಎಂಬ ತಮ್ಮ ಮಾತು ಎಷ್ಟು ಸರಿ? ಕೋವಿಡ್‌ ಸಂದರ್ಭದಲ್ಲಿ ಹಸಿವಿನಿಂದ ಬಳಲಿದ ಒಂದು ಉದಾಹರಣೆಯೂ ಇಲ್ಲ. ಪ್ರಧಾನ ಮಂತ್ರಿಗಳ ಗರೀಬ್‌ ಕಲ್ಯಾಣ ಯೋಜನೆ ಅಡಿಯಲ್ಲಿ ಹಾಗೂ ರಾಜ್ಯ ಸರ್ಕಾರದ ವತಿಯಿಂದ ವಿವಿಧ ವೃತ್ತಿಯ ಜನರಿಗೆ ಕೊಟ್ಟಿರುವ ವಿಶೇಷ ಅನುದಾನದಿಂದ ಕೋವಿಡ್‌ ನಿರ್ವಹಣೆಯಲ್ಲಿ ಜನರು ಪರದಾಡುವುದನ್ನು ತಪ್ಪಿಸಲಾಗಿದೆ.

ಹಳಿ ತಪ್ಪಿದ ಸಿದ್ದು ಲೆಕ್ಕ: ‘ಗ್ಯಾರಂಟಿ’ ಭರದಲ್ಲಿ ಶಾಶ್ವತ ಯೋಜನೆಗಳ ನಿರ್ಲಕ್ಷ್ಯ, ಬೊಮ್ಮಾಯಿ

ನಮ್ಮ ಸಾಧನೆ ಬಗ್ಗೆ ಜಾಣ ಮರೆವು

ಮುಖ್ಯಮಂತ್ರಿಗಳು ಜನರ ಮೇಲೆ ಭಾರವನ್ನು ಹಾಕದೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರುವುದಾಗಿ ಹೇಳಿರುವುದು, ಆಡಿದ್ದೊಂದು ಮಾಡಿದ್ದೊಂದು ಎನ್ನುವುದು ಇದೇ ಬಜೆಟ್‌ನಲ್ಲಿ ವಿಧಿಸಿರುವ ತೆರಿಗೆಗಳಿಂದ ಸಾಬೀತಾಗಿದೆ. ಅಬಕಾರಿ ತೆರಿಗೆ, ಮೋಟಾರ್‌ ವಾಹನ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳ ಮಾಡಿ ಸಾಮಾನ್ಯ ಜನರು ಜೀವನ ನಡೆಸದಂತೆ ಮಾಡಿದ್ದಾರೆ. ಅಲ್ಲದೇ, ತಮ್ಮ ಕಾಲದಲ್ಲಿ ಆರ್ಥಿಕವಾಗಿ ಔದ್ಯೋಗಿಕ ಮತ್ತು ಸೇವಾ ವಲಯದಲ್ಲಿ ಬೆಳವಣಿಗೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. 2019ರಿಂದ 23ರ ವರೆಗೂ ಕೋವಿಡ್‌ ಇದೆ ಎಂದು ಅವರೇ ಹೇಳಿದ್ದು, ಕೋವಿಡ್‌ ಸಂದರ್ಭದಲ್ಲಿ ಸುಮಾರು ಒಂದೂವರೆ ವರ್ಷ ಇಡೀ ವಿಶ್ವದಲ್ಲಿ ಆರ್ಥಿಕ ಹಿಂಜರಿತ ಇರುವುದನ್ನು ಮರೆಮಾಚುವ ಕೆಲಸ ಮಾಡಿದ್ದಾರೆ. ಇದರ ನಡುವೆಯೂ ಎಫ್‌ಡಿಐ ಆಕರ್ಷಿಸುವಲ್ಲಿ ಕರ್ನಾಟಕ ನಂಬರ್‌ ಒನ್‌ ಆಗಿರುವುದನ್ನು ಹೇಳದೆ ಜಾಣ ಮರೆವು ತೋರಿಸಿದ್ದಾರೆ.

ತಾವು ತಪ್ಪು ಮಾಡಿ ನಮ್ಮ ಮೇಲೆ ಗೂಬೆ

2013-14ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು .50000 ಕೋಟಿಗಳ ಅವಶ್ಯಕತೆ ಇದ್ದು, ಇದನ್ನು ಮುಂದಿನ ಐದು ವರ್ಷಗಳಲ್ಲಿ ಒದಗಿಸಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದರು. ಆದರೆ 2018ರ ಮಾಚ್‌ರ್‍ ಅಂತ್ಯಕ್ಕೆ ಸುಮಾರು .48000 ಕೋಟಿಗಳನ್ನು ವೆಚ್ಚ ಮಾಡಿ, ಸುಮಾರು ಒಂದು ಲಕ್ಷ ಕೋಟಿಗಳ ಯೋಜನೆಯನ್ನು ಬಾಕಿ ಉಳಿಸಿ ಹೊಸ ಸರ್ಕಾರಕ್ಕೆ ಹೊರೆ ಬಿಟ್ಟು ಹೋಗಿರುತ್ತಾರೆ.

ಪ್ರತಿವರ್ಷ ಸರಾಸರಿಯಾಗಿ ಸುಮಾರು .20000 ಕೋಟಿಗಳ ಹೊಸ ಕಾಮಗಾರಿಗಳನ್ನು ಅನುಮೋದಿಸಿ, ತಮ್ಮ ಅಧಿಕಾರದ ಅವಧಿಯ ಅಂತ್ಯಕ್ಕೆ ಸುಮಾರು ಒಂದು ಲಕ್ಷ ಕೋಟಿಗಳ spಜ್ಝ್ಝಿಟvಛ್ಟಿಯೋಜನೆಗಳನ್ನು ಮುಂದಿನ ಸರ್ಕಾರಕ್ಕೆ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ. ಆ ಅವಧಿಯಲ್ಲಿ ಚ್ಠಿdಜಛಿಠಿ a್ಝ್ಝಟ್ಚaಠಿಜಿಟ್ಞ ಐದು ವರ್ಷ ಸೇರಿ ಸುಮಾರು .50000 ಕೋಟಿ ಮಾತ್ರ. ಆದರೆ ಅವರು ಕಾಮಗಾರಿಗಳನ್ನು ಅನುಮೋದಿಸಿದ್ದು ಸುಮಾರು ಒಂದು ಲಕ್ಷ ಕೋಟಿ. ಆದರೆ, ಈಗ ಹಿಂದಿನ ಸರ್ಕಾರ ಬಜೆಟ್‌ ಅಲೊಕೇಶನ್‌ಗಿಂತಲೂ ಹೆಚ್ಚಿನ ಕಾಮಗಾರಿಗಳನ್ನು ಅನುಮೋದಿಸಿದ್ದು, ಆರ್ಥಿಕ ಶಿಸ್ತು ಹಾಳಾಗಿದೆ ಅಂತ ಹೇಳುತ್ತಿರುವುದು ಹಾಸ್ಯಾಸ್ಪದ. ನಿಜವಾಗಲೂ ಅದನ್ನು ಹಾಳು ಮಾಡಿದ್ದೂ ಸಿದ್ದರಾಮಯ್ಯನವರೇ.
ಈಗ ಗ್ಯಾರಂಟಿಗಳ ಜಾರಿಯ ಭರಾಟೆಯಲ್ಲಿ ಮುಂದಿನ ಐದು ವರ್ಷ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸುವುದು ಕಷ್ಟಎನ್ನುವ ಮೂಲಕ ನೀರಾವರಿ ಯೋಜನೆಗಳಿಗೆ ತಿಲಾಂಜಲಿ ನೀಡುವ ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಅಗುವ ಮುಂಚೆ ಒಟ್ಟು ರಾಜ್ಯದ ಸಾಲ ಸುಮಾರು ಒಂದು ಲಕ್ಷ ಕೋಟಿ ಇತ್ತು. ಐದು ವರ್ಷ ಯಾವುದೇ ಕೋವಿಡ್‌ ಇಲ್ಲದೇ ಇದ್ದರೂ ಸಿದ್ದರಾಮಯ್ಯ ಅವರು ಒಟ್ಟು ಒಂದು ಲಕ್ಷದ ಮೂವತ್ತು ಸಾವಿರ ಕೋಟಿ ಸಾಲ ಮಾಡಿದ್ದರು. ಅಂದರೆ 65 ವರ್ಷದಲ್ಲಿ ರಾಜ್ಯ ಸರ್ಕಾರಗಳು ಮಾಡಿದ ಸಾಲವನ್ನು ಮೀರಿಸಿರುವ ಖ್ಯಾತಿ ಸಿದ್ದರಾಮಯ್ಯ ಅವರದ್ದು. ಅವರ ಕಾಲದಲ್ಲಿ ಸಾಲವು ಶೇ.118ರಷ್ಟುಹೆಚ್ಚಾಯಿತು. ಬಿಜೆಪಿ ಕಾಲದಲ್ಲಿ 2019ರಿಂದ ನಾಲ್ಕು ವರ್ಷ ಶೇ.87ರಷ್ಟು ಹೆಚ್ಚಳವಾಗಿದೆ.

ಸಿದ್ದರಾಮಯ್ಯ ಮಾಡಿದ ಸಾಲದ ಒಟ್ಟು ಸಾಲದ ಅಸಲನ್ನು ತೀರಿಸುವ ಹತ್ತು ವರ್ಷದ ಕಂತನ್ನು 2023-24ರಲ್ಲಿ ಕೊಡುವುದರಿಂದ ಸಾಲ ಮರುಪಾವತಿ ಹೆಚ್ಚಾಗಿದೆ.

15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂಬ ಆರೋಪ.

ಉತ್ತರ: ಹಣಕಾಸು ಆಯೋಗ ಸಂವಿಧಾನಾತ್ಮಕವಾಗಿ ಸ್ವಾಯತ್ತ ಸಂಸ್ಥೆ. ಪ್ರತಿ ಐದು ವರ್ಷಕ್ಕೊಮ್ಮೆ ತನ್ನ ವರದಿ ಮಂಡನೆ ಮಾಡುವ ಮುಂಚೆ ಸುಮಾರು ಮೂರರಿಂದ ನಾಲ್ಕು ವರ್ಷ ಎಲ್ಲ ರಾಜ್ಯ ಸರ್ಕಾರಗಳ ಜೊತೆ ಸಂವಾದ ಮಾಡಿ ವರದಿ ಸಿದ್ಧಪಡಿಸುತ್ತದೆ. 2019ರಲ್ಲಿ ಕೊಟ್ಟಿರುವ 15ನೇ ಹಣಕಾಸು ವರದಿ 2015ರಿಂದ ಕೆಲಸ ಪ್ರಾರಂಭ ಮಾಡಿತ್ತು. ಆ ಕಾಲದಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು. ಆಗ ರಾಜ್ಯದ ಪರ ಸರಿಯಾದ ವಾದ ಮಾಡದೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಲು ವಿಫಲವಾಗಿದೆ. 2022ರಲ್ಲಿ ಕರ್ನಾಟಕದಿಂದ 2.1 ಲಕ್ಷ ಕೋಟಿ ತೆರಿಗೆ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಆದರೆ, ಕೇಂದ್ರದಿಂದ .69110 ಕೋಟಿ ರಾಜ್ಯಕ್ಕೆ ಬಂದಿದೆ. ಅದು ಶೇ.33%. ಆದರೆ, 2014ರಲ್ಲಿ .82500 ಕೋಟಿ ತೆರಿಗೆ ಆದಾಯವನ್ನು ಕೇಂದ್ರಕ್ಕೆ ಕೊಟ್ಟು, ಕೇವಲ .22900 ಕೋಟಿ ರಾಜ್ಯಕ್ಕೆ ಬಂದಿರುತ್ತದೆ. ಅಂದರೆ ಶೇ.28. ಆ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ (ಕಾಂಗ್ರೆಸ್‌) ಇತ್ತು.

ರಾಜ್ಯಕ್ಕೆ ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರ 2022ಕ್ಕೆ ನಿಲ್ಲಿಸಿದೆ ಎಂಬ ಆರೋಪ

ಉತ್ತರ: ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರ ನೀಡುವುದನ್ನು ನಿಲ್ಲಿಸಿದೆ ಎಂದು ಸಿದ್ದರಾಮಯ್ಯ ಹೇಳಿರುವುದು ಸೋಜಿಗದ ಸಂಗತಿ. ಜಿಎಸ್‌ಟಿ ಪರಿಹಾರವನ್ನು ಐದು ವರ್ಷದವರೆಗೆ ಮಾತ್ರ ಕೊಡುವುದು ಎಂದು ಸಂಸತ್ತಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಕಾನೂನು ಮಾಡಲಾಗಿದೆ. ಈ ಸತ್ಯ ಗೊತ್ತಿದ್ದರೂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರವನ್ನು ಐದು ವರ್ಷಕ್ಕೆ ಮೊಟಕುಗೊಳಿಸಿದೆ ಎನ್ನುವುದು ರಾಜಕೀಯ ಪ್ರೇರಿತವಾಗಿದೆ. ಕೋವಿಡ್‌ ಸಂದರ್ಭದಲ್ಲಿಯೂ ಪರಿಹಾರ ಕಡಿಮೆಗೊಳಿಸದೇ ಕೇಂದ್ರ ತನ್ನ ಆದಾಯ ಇಲ್ಲದಿದ್ದರೂ ವಿಶೇಷ ಅನುದಾನ ಕೊಟ್ಟು ಆ ಸಾಲವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿರುವ ಸತ್ಯವನ್ನು ಮುಖ್ಯಮಂತ್ರಿಗಳು ಮರೆಮಾಚಿದ್ದಾರೆ ಹಾಗೂ .26954 ಕೋಟಿ ಕಡಿಮೆಯಾಗಿದೆ ಎನ್ನುವುದು ಒಂದು ಕಾಲ್ಪನಿಕ ಅಂದಾಜು ಎನ್ನುವುದು ಸ್ಪಷ್ಟವಾಗಿದೆ.

ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಕಡಿತದ ಆರೋಪ

ಉತ್ತರ: ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ಕಡಿಮೆಯಾಗಿದೆ ಎಂಬ ಆರೋಪ ಮಾಡಿದ್ದಾರೆ. ಆದರೆ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ (ಸಿಎಸ್‌ಎಸ್‌) ಅನುದಾನ ಎರಡು ಮಾದರಿಯಲ್ಲಿ ಬರುತ್ತದೆ. ಒಂದು ಎಸ್‌ಎನ್‌ಎ ಬ್ಯಾಂಕ್‌ ಅಕೌಂಟ್‌, ಮತ್ತೊಂದು ರಾಜ್ಯದ ಏಕೀಕೃತ ನಿಧಿ (ಕನ್ಸಾಲಿಡೇಟೆಡ್‌ ಫಂಡ್‌) ಮೂಲಕ ಬರುತ್ತದೆ. 2022-23ಕ್ಕೆ ಜನವರಿವರೆಗೂ ಎಸ್‌ಎನ್‌ಎ ಬ್ಯಾಂಕ್‌ ಅಕೌಂಟ್‌ ಮೂಲಕ .4966 ಕೋಟಿ ಬಂದಿದ್ದು, ಇದನ್ನು ರಾಜ್ಯದ ಸಂಚಿತ ನಿಧಿಯ ಖಾತೆಯಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದನ್ನು ಸೇರಿಸಿದರೆ ಕೇಂದ್ರದ ಸಿಎಸ್‌ಎಸ್‌ ಯೋಜನೆಗಳಿಗೆ ಗ್ರ್ಯಾಂಟ್‌ ಇನ್‌ ಏಡ್‌ ಕಡಿಮೆಯಾಗಿರುವುದಿಲ್ಲ. 2022-23ರಲ್ಲಿ ಸಂಚಿತ ನಿಧಿಗೆ .13005 ಕೋಟಿ ಒದಗಿಸಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ಕಳೆದ ವರ್ಷ .34596 ಕೋಟಿ ಇದ್ದಿದ್ದು, ಅದು .37252 ಕೋಟಿ ಬಂದಿದೆ. ಇದು ಕೇಂದ್ರದಿಂದ ಬರುವ ಅನುದಾನ ಹೆಚ್ಚಾಗಿರುವುದಕ್ಕೆ ಸ್ಪಷ್ಟನಿದರ್ಶನ.

ರಾಜ್ಯ ಸರ್ಕಾರ ಕಡ್ಡಾಯ ವೆಚ್ಚ ಹೆಚ್ಚು ಮಾಡಿದೆ ಎಂಬ ಆರೋಪ

ಉತ್ತರ: ರಾಜ್ಯ ಸರ್ಕಾರ ಸಂಬಳ, ಪಿಂಚಣಿ, ಸಾಲ ಹಾಗೂ ಸಾಲದ ಮೇಲಿನ ಬಡ್ಡಿಯನ್ನು ಕಡ್ಡಾಯವಾಗಿ ನೀಡಬೇಕಿರುವುದರಿಂದ ವೆಚ್ಚ ಹೆಚ್ಚಾಗುತ್ತಲೇ ಹೋಗುತ್ತದೆ. ಕಡ್ಡಾಯ ವೆಚ್ಚ ಸಂಬಳ, ಪಿಂಚಣಿ, ಬಡ್ಡಿ, ಹಾಗೂ ವಿವಿಧ ಯೋಜನೆಗಳ ಸಬ್ಸಿಡಿ, ಸಾಮಾಜಿಕ ಭದ್ರತೆ ಯೋಜನೆಗಳು, ಗ್ರ್ಯಾಂಟ್‌ ಇನ್‌ ಏಡ್‌, ಸ್ಥಳೀಯ ಆಡಳಿತಕ್ಕೆ ಹಣ ಹಂಚಿಕೆ, ಇವೆಲ್ಲವೂ ಹೆಚ್ಚಾಗುವುದರಿಂದ ಬದ್ಧ ವೆಚ್ಚಗಳು ಹೆಚ್ಚಾಗುತ್ತವೆ. ನಮ್ಮ ಕಾಲದಲ್ಲಿ ರಾಜಸ್ವ ವೆಚ್ಚ ಪ್ರತಿ ವರ್ಷ ಹೆಚ್ಚಾಗುತ್ತ ಬಂದಿದ್ದು, 2019ರಲ್ಲಿ 40 ಸಾವಿರ ಇದ್ದಿದ್ದು 2023-24ಕ್ಕೆ 61 ಸಾವಿರಕ್ಕೆ ಹೆಚ್ಚಾಗಿದೆ.

ಸರ್ಕಾರಕ್ಕೆ ರೈತರ ಜೀವಕ್ಕಿಂತ ರಾಜಕೀಯ ಮುಖ್ಯ: ಬೊಮ್ಮಾಯಿ

ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಹಿಂದಿನ ಸರ್ಕಾರದ ಸಾಧನೆಗಳು, ಜನಪರ ಯೋಜನೆಗಳ ಬಗ್ಗೆ ಮಾತನಾಡದೇ ಕೇಂದ್ರ ಸರ್ಕಾರದಿಂದ ಬಂದಿರುವ ಅನುದಾನದ ಬಗ್ಗೆಯೂ ಸತ್ಯಕ್ಕೆ ದೂರವಾದ ಮಾಹಿತಿ ನೀಡಿ ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ.

ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಹಿಂದಿನ ಸರ್ಕಾರದ ಸಾಧನೆಗಳು, ಜನಪರ ಯೋಜನೆಗಳ ಬಗ್ಗೆ ಮಾತನಾಡದೇ ಕೇಂದ್ರ ಸರ್ಕಾರದಿಂದ ಬಂದಿರುವ ಅನುದಾನದ ಬಗ್ಗೆಯೂ ಸತ್ಯಕ್ಕೆ ದೂರವಾದ ಮಾಹಿತಿ ನೀಡಿ ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ವಾಸ್ತವಗಳನ್ನು ಮರೆಮಾಚಿ ಕೇಂದ್ರ ಸರ್ಕಾರ ಮತ್ತು ಹಿಂದಿನ ಸರ್ಕಾರಗಳನ್ನು ಟೀಕಿಸುವುದಕ್ಕೇ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ