ಇಂದು ನಿರ್ಧಾರವಾಗಲಿದೆ ಬಿಜೆಪಿ ಭವಿಷ್ಯ: ವಿಧಾನಸಭೆ ಸೋಲಿನ ಬಳಿಕ ಮತ್ತೊಂದು ಮಹಾ ಸವಾಲು..!

By Girish Goudar  |  First Published Jul 26, 2023, 8:01 AM IST

ಪುತ್ತೂರು ಬಿಜೆಪಿ ಮಾಜಿ ಶಾಸಕರ ಆದಿಯಾಗಿ ಕೇಸರಿ ನಾಯಕರು ಭರ್ಜರಿ ಪ್ರಚಾರ ಮಾಡಿದ್ದರು. ಗ್ರಾ.ಪಂ ಉಪಚುನಾವಣೆಯಲ್ಲೂ ಬಿಜೆಪಿಗೆ ಪುತ್ತಿಲ ವಿರುದ್ಧ ಪ್ರತಿಷ್ಠೆಯಾಗಿದೆ. ಪುತ್ತಿಲ ಪರಿವಾರದ ವಿರುದ್ಧ ಗ್ರಾ.ಪಂ ಸೋತರೇ ಬಿಜೆಪಿಗೆ ಭಾರೀ ಮುಖಭಂಗ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಗೆದ್ದರೂ ಬಿಜೆಪಿಗೆ ಭಾರೀ ಹಿನ್ನಡೆಯಾಗುವ ಭೀತಿ ಇದೆ. 


ಪುತ್ತೂರು(ಜು.26):  ಇಂದು(ಬುಧವಾರ) ಪುತ್ತೂರಿನ ಎರಡು ಗ್ರಾ.ಪಂ ವಾರ್ಡ್‌ಗಳ ಉಪಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ಮೂಲಕ ಸಣ್ಣ ಚುನಾವಣೆಯಲ್ಲೂ ದೊಡ್ಡ ಪಕ್ಷಕ್ಕೆ(ಬಿಜೆಪಿ) ಮತ್ತೆ ಮಾಡು ಇಲ್ಲವೇ ಮಡಿ ಆಗಿದೆ. ಪುತ್ತೂರಿನಲ್ಲಿ ‌ಮತ್ತೆ ಹಿಂದುತ್ವ ವರ್ಸಸ್ ಬಿಜೆಪಿ ಮಧ್ಯೆ ಬಿಗ್ ಫೈಟ್ ಆರಂಭವಾಗಿದೆ. 

ವಿಧಾನಸಭೆ ಸೋಲಿನ ಬಳಿಕ ಬಿಜೆಪಿಗೆ ಮತ್ತೊಂದು ಮಹಾ ಸವಾಲು ಎದರಾಗಿದೆ. ಗ್ರಾ.ಪಂ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರ ಬಿಜೆಪಿಗೆ ಮತ್ತೆ ಸವಾಲಾಗಿತ್ತು. ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾ.ಪಂನ ಎರಡು ವಾರ್ಡ್‌ಗಳ ಫಲಿತಾಂಶ ಇಂದು ಪ್ರಕಟವಾಗಲಿದೆ. 

Tap to resize

Latest Videos

ಕಾಂಗ್ರೆಸ್‌ ಗ್ಯಾರಂಟಿ ಮೇಲೆ ಬಿಜೆಪಿ ಜೀವನ: ಸಚಿವ ಮಧು ಬಂಗಾರಪ್ಪ

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿರುದ್ಧವೇ ಪುತ್ತಿಲ ಪರಿವಾರ ಸ್ಪರ್ಧೆ ಮಾಡಿತ್ತು, ಎರಡೂ ವಾರ್ಡ್‌ಗಳಲ್ಲೂ ಅರುಣ್ ಪುತ್ತಿಲ ಅವರು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದರು. ಅತ್ತ ಕಾಂಗ್ರೆಸ್‌ನಿಂದಲೂ ಬೆಂಬಲಿತ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. 

ಪುತ್ತೂರು ಬಿಜೆಪಿ ಮಾಜಿ ಶಾಸಕರ ಆದಿಯಾಗಿ ಕೇಸರಿ ನಾಯಕರು ಭರ್ಜರಿ ಪ್ರಚಾರ ಮಾಡಿದ್ದರು. ಗ್ರಾ.ಪಂ ಉಪಚುನಾವಣೆಯಲ್ಲೂ ಬಿಜೆಪಿಗೆ ಪುತ್ತಿಲ ವಿರುದ್ಧ ಪ್ರತಿಷ್ಠೆಯಾಗಿದೆ. ಪುತ್ತಿಲ ಪರಿವಾರದ ವಿರುದ್ಧ ಗ್ರಾ.ಪಂ ಸೋತರೇ ಬಿಜೆಪಿಗೆ ಭಾರೀ ಮುಖಭಂಗ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಗೆದ್ದರೂ ಬಿಜೆಪಿಗೆ ಭಾರೀ ಹಿನ್ನಡೆಯಾಗುವ ಭೀತಿ ಇದೆ. 

ಭಜರಂಗದಳ ಕಾರ್ಯಕರ್ತರ ಗಡಿಪಾರು; ಶಾಂತಿ ಕದಡೋರಿಗೆ ಖಡಕ್ ವಾರ್ನ್ ಕೊಟ್ಟ ಮಂಗಳೂರು ಕಮಿಷನರ್

ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾ.ಪಂ ಎರಡೂ ವಾರ್ಡ್‌ಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿದ್ದರು. ಸದಸ್ಯರಿಬ್ಬರ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು. ಆ ಎರಡೂ ವಾರ್ಡ್‌ಗಳನ್ನು ಮತ್ತೆ ಗೆಲ್ಲುವುದು ಬಿಜೆಪಿಗೆ ಅನಿವಾರ್ಯವಾಗಿದೆ. 

ನಿಡ್ಪಳ್ಳಿ ವಾರ್ಡ್ 2ರಲ್ಲಿ ಬಿಜೆಪಿ ಬೆಂಬಲಿತರಾಗಿ ಚಂದ್ರಶೇಖರ ಪ್ರಭು ಹಾಗೂ ಆರ್ಯಾಪು ವಾರ್ಡ್ 2ರಲ್ಲಿ ಜಗದೀಶ್ ಭಂಡಾರಿ ಸ್ಪರ್ಧೆ ಮಾಡಿದ್ದರು. ಪುತ್ತಿಲ ಪರಿವಾರದಿಂದ ನಿಡ್ಪಳ್ಳಿ ವಾರ್ಡ್ 2ರಲ್ಲಿ ಜಗನ್ನಾಥ ರೈ ಹಾಗೂ ಆರ್ಯಾಪು ವಾರ್ಡ್ 2ರಲ್ಲಿ ಸುಬ್ರಹ್ಮಣ್ಯ ಬಲ್ಯಾಯ ಸ್ಪರ್ಧಿಸಿದ್ದರು. ಇಂದು ಹೊರಬೀಳುವ ಫಲಿತಾಂಶದಿಂದ ಪುತ್ತೂರಿನಲ್ಲಿ ಮತ್ತೊಮ್ಮೆ ಬಿಜೆಪಿ ಭವಿಷ್ಯ ನಿರ್ಧಾರವಾಗಿದೆ ಎಂದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ. 

click me!