
ಬೆಂಗಳೂರು (ಮೇ.20): ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲಿಯೇ ತನ್ನೆಲ್ಲಾ ಗ್ಯಾರಂಟಿಗಳನ್ನು ಎಲ್ಲರಿಗೂ ನೀಡೋದಾಗಿ ಹೇಳಿತ್ತು. ಆದರೆ, ಮೊದಲ ಕ್ಯಾಬಿನೆಟ್ ಸಭೆಯಲ್ಲಿ ತನ್ನ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿರುವ ಸರ್ಕಾರ, ಕೆಲವು ಗ್ಯಾರಂಟಿಗಳಿಗೆ ನಿಯಮಗಳನ್ನೂ ಹಾಕುತ್ತಿದೆ. ಆ ಮೂಲಕ ಜನರ ನಿರೀಕ್ಷೆಗಳು ಹುಸಿಯಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟೀಕಿಸಿದ್ದಾರೆ. ಕಾಂಗ್ರೆಸ್ ಘೋಷಣೆ ಗೆ ಜನ ಕಾದು ಕುಳಿತಿದ್ದರು. ಬಸ್ ಓಡಾಟ ಇರಬಹುದು, ಗೃಹಿಣಿಯರಿಗೆ 2 ಸಾವಿರ ರೂಪಾಯಿ ಹಣ ನೀಡುವುದು ಇರಬಹುದು, ಎಲ್ಲದಕ್ಕೂ ಕಾಯುತ್ತಿದ್ದರು. ಆದರೆ ಸ್ಪಷ್ಟತೆ ಇಲ್ಲದ ಘೋಷಣೆ ಇದು. ಜನರಿಗೆ ನೀಡಿದ್ದ ಭರವಸೆ ಹುಸಿ ಆಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಎಲ್ಲವನ್ನೂ ಹೇಳ್ತೇನೆ ಎಂದು ಸಿದ್ಧರಾಮಯ್ಯ ಹೇಳ್ತಿದ್ದಾರೆ. ಅದನ್ನೂ ನೋಡೋಣ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, 5 ಗ್ಯಾರಂಟಿಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಗ್ಯಾರಂಟಿ ನೀಡಿಲ್ಲ. ಯಾವಾಗಿನಿಂದ ಜಾರಿ ಎಂಬುವ ಕುರಿತು ವಿವರಣೆ ನೀಡಿಲ್ಲ ಎಂದು ಆರೋಪಿಸಿದರು.
ನಿಜ ವಿಚಾರವೆಂದರೆ, ಕಾಂಗ್ರೆಸ್‌ನವರಿಗೆ ಈ ಗ್ಯಾರಂಟಿ ಬಗ್ಗೆ ಸ್ಪಷ್ಟತೆ ಇಲ್ಲ ದಾರಿಯಲ್ಲಿ ಹೋಗೋರಿಗೆ ದುಡ್ಡು ಕೊಡೋಕೆ ಆಗುತ್ತಾ ಅಂತಾ ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ ಮಾಡುತ್ತಾರೆ. ಇದೇ ದಾರಿ ಮೇಲೆ ಹೋಗುವವರೇ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಮತದಾರರನ್ನು ಇವರು ಎಷ್ಟು ಗೌರವಿಸ್ತಾ ಇದ್ದಾರೆ ಅನ್ನೋದು ಇದನ್ನು ನೋಡಿದರೆ ಗೊತ್ತಾಗಿತ್ತದೆ. ಚುನಾವಣೆಗೂ ಮುನ್ನ ಯಾವ ರೀತಿ ಹೇಳಿಕೆ ನೀಡ್ತಾ ಇದ್ತು, ಚುನಾವಣೆ ಆದ ಬಳಿಕ ಕಾಂಗ್ರೆಸ್ ಯಾವ ರೀತಿಯಲ್ಲಿ ಹೇಳಿಕೆ ನೀಡ್ತಾ ಇದೆ ಅನ್ನೋದನ್ನ ಎಲ್ಲರೂ ನೋಡಿ. ಚುನಾವಣೆ ಆದ ಬಳಿಕ ಕಾಂಗ್ರೆಸ್ ತನ್ನ ಬಣ್ಣ ಬದಲಾಯಿಸುತ್ತಿದೆ ಎಂದು ಟೀಕಿಸಿದ್ದಾರೆ.
200 ಯುನಿಟ್ ಉಚಿತ ವಿದ್ಯುತ್ ಎಂದಿದ್ದರೆ, ಈಗ ಅದಕ್ಕೆ ನೆಪ ಹೇಳಲು ಆರಂಭಿಸಿದ್ದಾರೆ. ಬರೀ ಈ ವರ್ಷ ಪಾಸಾದ ಪದವೀಧರರಿಗೆ ಮಾತ್ರವೇ ಭ್ಯತೆ ಅನ್ನುತ್ತಿದ್ದಾರೆ. ನಿಜವಾದ ನಿರುದ್ಯೋಗಿಗಳಿಗೆ ಸಹಾಯ ಮಾಡುವ ಉದ್ದೇಶ ಇವರಿಗಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಎಲ್ಲಾ ಮಾಹಿತಿ ಇದೆ ನಾಳೆಯಿಂದ ಹಣ ಹಾಕಿ: ಗೃಹಿಣಿಯರಿಗೆ ಗೃಹಲಕ್ಷ್ಮೀ ಗ್ಯಾರಂಟಿ ಅನ್ವಯ 2 ಸಾವಿರ ರೂಪಾಯಿ ಪ್ರತಿ ತಿಂಗಳು ಹಾಕೋದಕ್ಕೆ ಅವರ ಅಕೌಂಟ್ ನಂಬರಗಳು ಮಾಹಿತಿಗಳು ಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಎಲ್ಲಾ ಮಾಹಿತಿಗಳು ಈಗಾಗಲೇ ಸರ್ಕಾರದ ಬಳಿ ಇದೆ. ಮನಸ್ಸು ಮಾಡಿದ್ರೆ ನಾಳೆಯಿಂದಲೇ ಹಣ ಹಾಕಬಹುದು. ಯಾಕೆಂದರೆ, ಎಲ್ಲರ ಬ್ಯಾಂಕ್ ಅಕೌಂಟ್ ಡೀಟೇಲ್‌ಗಳು ಇದೆ. ದುಡ್ಡ ಹಾಕಬೇಕು ಅನ್ನೋ ಮನಸ್ಸಿದ್ರೆ ಎಲ್ಲಾ ಮಾರ್ಗ ಸಿಗುತ್ತದೆ. ಇಲ್ಲದಿದ್ರೆ ಬರೀ ನೆಪಗಳು ಸಿಗುತ್ತದೆ ಎಂದು ಹೇಳಿದ್ದಾರೆ.
ಇಂಗ್ಲೀಷ್‌ನಲ್ಲಿ ಜಮೀರ್ ಪ್ರಮಾಣವಚನ: 18 ವರ್ಷವಾದ್ರೂ ಕನ್ನಡ ಕಲಿಯದ ಸಚಿವನಿಗೆ ಕರವೇ ತರಾಟೆ
ನಮ್ಮ ಅವಧಿಯಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಅಂತಾ ಸಿಎಂ ಹೇಳ್ತಿದ್ದಾರೆ. ಇದಕ್ಕೆ ಈಗಾಗಲೇ ಅಸೆಂಬ್ಲಿಯಲ್ಲಿ ಉತ್ತರ ಕೊಟ್ಟಿದ್ದೇನೆ. ಕೋವಿಡ್ ನಿಂದ ಎಲ್ಲಾ ರಾಜ್ಯದಲ್ಲೂ ಸಾಲ ಹೆಚ್ಚಾಗಿದೆ. ಈಗಲೂ ಕೂಡಾ ಅವರು ಪ್ರತಿಪಕ್ಷ ನಾಯಕನ ತರಹ ಮಾತಾಡುತ್ತಿದ್ದಾರೆ. ಈಗ ಅವರಿಗೆ ಜವಾಬ್ದಾರಿ ಇದೆ. ಇದು ಕೇವಲ ಘೋಷಣೆ ಇರುವ ಗ್ಯಾರಂಟಿ. ಮುಂದಿನ ಸಚಿವ ಸಂಪುಟದವರೆಗೆ ನಾವು ಕಾಯೋಣ ಅಂದುಕೊಂಡಿದ್ದೇವೆ. ಏನು ಹೇಳಿದ್ದಾರೆ, ಏನು ಮಾಡುತ್ತಾರೆ ಅಂತಾ ನೋಡೋಣ. ಇಡೀ ದೇಶದಲ್ಲಿ ಜಿಎಸ್ ಟಿ ಆದಾಯದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಸಬ್ ಅರ್ಬನ್, ಮೆಟ್ರೋ, ರೈಲ್ವೇಗೆ ಅನುದಾನ ಕೊಡುತ್ತಿದೆ. ಅರ್ಧ ಮಾಹಿತಿ ಹೇಳಿ ಅರ್ಧ ಮಾಹಿತಿ ಮುಚ್ಚಿಡುವ ಕೆಲಸ ಸಿದ್ಧರಾಮಯ್ಯ ಮಾಡ್ತಿದ್ದಾರೆ. ವಿಧಾನಸಭೆಯಲ್ಲಿ ನಾನು ಇದರ ಸಂಪೂರ್ಣ ವಿವರ ಕೊಡಲು ನಾನು ಸಿದ್ಧ ಇದ್ದೇನೆ. ನಾವು ಈಗಾಗಲೇ ಈ ಬಗ್ಗೆ ಧ್ವನಿ ಎತ್ತಲು ಅರಂಭಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಮೊದಲ ಸಂಪುಟ ಸಭೆಯಲ್ಲೇ ಕಾಂಗ್ರೆಸ್ 5 ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.