*ಪರಿಷತ್ ಚುನಾವಣೆ ಫಲಿತಾಂಶ ಬೆನ್ನಲ್ಲೇ ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕ
*ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಜೆಡಿಎಸ್ ನಾಯಕ
* ಬೆಳಗಾವಿಯಲ್ಲಿ ಜೆಡಿಎಸ್ ನಾಯಕನನ್ನು ಬರಮಾಡಿಕೊಂಡ ಡಿಕೆಶಿ ಸಿದ್ದು
ಬೆಳಗಾವಿ, (ಡಿ.14): ರಾಜ್ಯದ 25 ಸ್ಥಾನಗಳಿಗೆ ನಡೆದ ವಿಧಾನಪರಿಷತ್ ಚುನಾವಣೆ ಫಲಿತಾಂಶ (Karnataka MLC Lection Result) ಪ್ರಕಟವಾಗಿದೆ. ಇದರ ಬೆನ್ನಲ್ಲೇ ಜೆಡಿಎಸ್‌ನ (JDS) ಮಾಜಿ ಶಾಸಕ ಕಾಂಗ್ರೆಸ್ (Congress) ಸೇರ್ಪಡೆಯಾದರು.
ಎನ್.ಎಚ್.ಕೋನರೆಡ್ಡಿ( NH Konaraddi) ಅವರು ಜೆಡಿಎಸ್ ತೊರೆದು ಇಂದುಮಂಗಳವಾರ) ಬೆಳಗಾವಿಯಲ್ಲಿ(Belagavi) ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಇನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಅವರು ಕೋನರೆಡ್ಡಿ ಅವರನ್ನ ಬರಮಾಡಿಕೊಂಡರು.
Karnataka Politics: ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ, ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ, ಮುಹೂರ್ತ ಫಿಕ್ಸ್
ಕೋನರೆಡ್ಡಿ ಅವರನ್ನ ಪಕ್ಷಕ್ಕೆ ಸ್ವಾಗತಿಸಿಕೊಂಡು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೋನರೆಡ್ಡಿಯವರು ಈ ಶುಭ ಮುಹೂರ್ತದಲ್ಲಿ ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಸೇರುತ್ತಿದ್ದಾರೆ. ನಮಗೆ ಆಪರೇಷನ್ ಹಸ್ತದ ಅಗತ್ಯವಿಲ್ಲ. ನಮ್ಮ ಪಕ್ಷದ ಸಿದ್ಧಾಂತ ನಂಬಿ ಬಂದಿದ್ದಾರೆ. ಎಂದರು.
ಇದೇ ವೇಳೆ ಪರಿಷತ್ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಬೆಳಗಾವಿಯಲ್ಲಿ ನಮ್ಮ ಪಕ್ಷಕ್ಕೆ ಅತಿಹೆಚ್ಚು ಮತ ಸಿಕ್ಕಿದೆ. ನಮ್ಮ ಪರ್ಫಾರಮೆನ್ಸ್ ಚೆನ್ನಾಗಿದೆ. ಜನ ಬದಲವಾಣೆ ತರಲು ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಲಾ 11 ಸ್ಥಾನ ಗೆದ್ದಿವೆ. ವಿರೋಧ ಪಕ್ಷದಲ್ಲಿ ಇದ್ದು ಇಷ್ಟು ಸ್ಥಾನ ಗೆದ್ದಿರುವುದಕ್ಕೆ ಸಂತೋಷವಾಗಿದೆ. ಇವತ್ತಿನಿಂದ ನೀವು ನಮ್ಮವರು, ನಾವು ನಿಮ್ಮವರು. ನಮ್ಮ ಸ್ಥಳೀಯ ನಾಯಕರ ಕೈ ಹಿಡಿದು ಕೆಲಸ ಮಾಡಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು, ಕೋನರೆಡ್ಡಿ ಶಾಸಕರಾಗಿದ್ದು ಸ್ವಂತಶಕ್ತಿಯಿಂದಲೇ ಹೊರತು ಜೆಡಿಎಸ್ನಿಂದಲ್ಲ. ಅವರು ಕಾಂಗ್ರೆಸ್ ಸೇರಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ಹಿಮ್ಮೆಟ್ಟಿಸಬೇಕಾಗಿದೆ. ಜಾತಿ, ಧರ್ಮದ ವಿಚಾರಗಳನ್ನೇ ದೊಡ್ಡದು ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕೋನರೆಡ್ಡಿ ನನಗೆ ಬಹುಕಾಲದ ಸ್ನೇಹಿತರು. ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ ಕೋನರೆಡ್ಡಿ ಅವರನ್ನು ಯುವ ಜನತಾದಳದ ಅಧ್ಯಕ್ಷರನ್ನಾಗಿ ಮಾಡಿದ್ದೆ ಎಂದು ನೆನಪಿಸಿಕೊಂಡರು.
ನನ್ನನ್ನು ಜೆಡಿಎಸ್ನಿಂದ ಉಚ್ಚಾಟಿಸಿದಾಗಲೇ ಅವರು ನನ್ನ ಜೊತೆಗೆ ಬರಬೇಕಿತ್ತು. ಕೋನರೆಡ್ಡಿ ಹೋರಾಟದಿಂದ ಬೆಳೆದವರು. ಕೋನರೆಡ್ಡಿ ಅವರು ಕೊನೆಗೂ ಒಳ್ಳೇ ನಿರ್ಧಾರ ಮಾಡಿದ್ದಾರೆ. ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ಆರ್ಥಿಕವಾಗಿ ಬಹುದೊಡ್ಡ ಹಿನ್ನಡೆಯಾಗಿದೆ. ಬಿಜೆಪಿಯವರನ್ನು ಕಿತ್ತೊಗೆಯುವ ಕೆಲಸವನ್ನು ಕೋನರೆಡ್ಡಿ ಮಾಡಬೇಕು ಕಿವಿ ಮಾತು ಹೇಳಿದರು.
ಎನ್.ಎಚ್.ಕೋನರೆಡ್ಡಿ ಮಾತನಾಡಿ, ನನಗೆ ಜೆಡಿಎಸ್ ಪಕ್ಷ ಬಿಡಬೇಕೆಂಬ ಮನಸ್ಸು ಇರಲಿಲ್ಲ. ದೇವೇಗೌಡರು, ಕುಮಾರಸ್ವಾಮಿ ಪಕ್ಷ ಬಿಡಬೇಡ ಅಂದರು. ಆದರೂ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಕಾಂಗ್ರೆಸ್ ಸೇರಿದೆ. ಜೆಡಿಎಸ್ಗೆ ರಾಜೀನಾಮೆ ಕಳುಹಿಸಿದ್ದೇನೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗಲೂ ನಾನು ಸಿದ್ದರಾಮಣ್ಣ ಎಂದೇ ಮಾತನಾಡಿಸುತ್ತಿದ್ದೆ. ನೀನಲ್ಲದೆ ಇನ್ಯಾರು ಹಾಗೆ ಕರೆಯಬೇಕು ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಡಿ.ಕೆ.ಶಿವಕುಮಾರ್ ಅವರು ಒಂದು ರೀತಿ ಕುದುರೆ ಇದ್ದಂತೆ. ನಾನು ಎಲ್ಲಿಯೇ ಇದ್ದರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಎಂದು ಹೇಳಿದರು.
ನಾನು ನಾಲ್ಕು ಭಾರಿ ಸ್ಪರ್ದೆ ಮಾಡಿ ಗೆಲುವು ಕಂಡವನು. ಮೋದಿ ಅಲೆಯಿಂದಾಗಿ ಕಳೆದ ಬಾರಿ ಸೋಲು ಕಂಡೆ. ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದ್ದೇ ಸ್ಪೂರ್ತಿ ಆಯಿತು. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ರೈತಪರ ನಿಲುವು ಗೌರವಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆ. ಪಕ್ಷವು ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುವೆ ಎಂದು ತಿಳಿಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ
ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಎನ್. ಎಚ್. ಕೋನರಡ್ಡಿಗೆ ಅವರಿಗೆ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಆದ್ರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಹೀನಾಯವಾಗಿ ಸೋಲು ಕಂಡಿದ್ದರಿಂದ ನೈತಿಕ ಹೊಣೆ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಕಳೆದ 2013 ರಲ್ಲಿ ಕೋನರೆಡ್ಡಿ ಒಮ್ಮೆ ಮಾತ್ರ ನವಲಗುಂದ ಕ್ಷೇತ್ರದಿಂದ ಗೆದ್ದು ಬಂದಿದ್ದು, ಈಗ ಕಾಂಗ್ರೆಸ್ ಸೇರಿದ ಮೇಲೆ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಲಿದ್ದಾರೆ.