ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತ ಮತ್ತು ಅಭಿವದ್ಧಿ ಕಾರ್ಯ ಯೋಜನೆಗಳನ್ನು ಮೆಚ್ಚಿ ಇತರ ಪಕ್ಷಗಳಿಂದ ಬರುವವರನ್ನು ನಾವು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಿದ್ದೇವೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಕೆ.ಆರ್. ನಗರ ತಾಲೂಕು ಹೆಬ್ಬಾಳು ಹೋಬಳಿಯ ಅಡಗನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದ ಮುಖಂಡರನ್ನು ಸ್ವಾಗತಿಸಿ ಮಾತನಾಡಿದರು
ಕೆ.ಆರ್. ನಗರ (ಸೆ.5) : ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತ ಮತ್ತು ಅಭಿವದ್ಧಿ ಕಾರ್ಯ ಯೋಜನೆಗಳನ್ನು ಮೆಚ್ಚಿ ಇತರ ಪಕ್ಷಗಳಿಂದ ಬರುವವರನ್ನು ನಾವು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಿದ್ದೇವೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಕೆ.ಆರ್. ನಗರ ತಾಲೂಕು ಹೆಬ್ಬಾಳು ಹೋಬಳಿಯ ಅಡಗನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದ ಮುಖಂಡರನ್ನು ಸ್ವಾಗತಿಸಿ ಮಾತನಾಡಿದ ಅವರು, ಜನಪರ ಕೆಲಸ ಮಾಡುವವರನ್ನು ಮತದಾರರು ಸದಾ ಗುರುತಿಸಲಿದ್ದು ಅವರ ಆಶಯಕ್ಕೆ ಅನುಗುಣವಾಗಿ ನಾವು ಕೆಲಸ ಮಾಡಬೇಕು ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಉಚಿತ ನೀರು, ವಿದ್ಯುತ್: ಎಚ್‌ಡಿಕೆ ಘೋಷಣೆ
ಕಳೆದ 14 ವರ್ಷಗಳಿಂದ ಕ್ಷೇತ್ರದಲ್ಲಿ ಶಾಸಕನಾಗಿದ್ದು ಒಂದು ಬಾರಿ ಸಚಿವನಾಗಿ ಕೆಲಸ ಮಾಡಿರುವ ನಾನು ಮತ ಬಾಂಧವರ ನಂಬಿಕೆಗೆ ತಕ್ಕಂತೆ ಕೆಲಸ ಮಾಡಿರುವುದರಿಂದ ಅವರು ನನ್ನನ್ನು ಸತತ 3 ಬಾರಿ ಆಯ್ಕೆ ಮಾಡಿದ್ದು ಇದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದರು. ನನ್ನ ಮೇಲೆ ನಂಬಿಕೆಯಿಟ್ಟು ಆಯ್ಕೆ ಮಾಡಿರುವ ಕ್ಷೇತ್ರದ ಜನತೆಯ ಹಿತಕ್ಕೆ ಧಕ್ಕೆಯಾಗದಂತೆ ಪ್ರಾಮಾಣಿಕವಾಗಿ ಜವಾಬ್ದಾರಿ ನಿರ್ವಹಣೆ ಮಾಡಿರುವ ಸಂತೃಪ್ತಿ ನನಗಿದ್ದು ನನ್ನ ಕೊನೆಯ ಉಸಿರು ಇರುವವರೆಗೂ ನಿರಂತರವಾಗಿ ಜನರ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನನ್ನ ರಾಜಕೀಯ(Political) ಜೀವನದ ಅವಧಿಯಲ್ಲಿ ಎಂದಿಗೂ ಪಕ್ಷ ಮತ್ತು ಜಾತಿ ರಾಜಕಾರಣ ಮಾಡದೇ ಅಭಿವೃದ್ಧಿ ವಿಚಾರದಲ್ಲಿ ಸರ್ವರನ್ನು ಸಮಾನವಾಗಿ ಕಂಡಿದ್ದು ನಮ್ಮೊಂದಿಗೆ ಹೊಸದಾಗಿ ಪಕ್ಷದಲ್ಲಿ ಕೆಲಸ ಮಾಡುವವರು ಮತ್ತು ಜತೆಯಲ್ಲಿರುವವರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಲಿಸಿದರು. ಕೆ.ಆರ್. ನಗರ(K.R.Nagar) ಪಟ್ಟಣ ಜೆಡಿಎಸ್(JDS) ಪ್ರಧಾನ ಕಾರ್ಯದರ್ಶಿ ರುದ್ರೇಶ್ ಮಾತನಾಡಿ, ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅವರನ್ನು ಬೆಂಬಲಿಸಿ ನಿತ್ಯ ನೂರಾರು ಮಂದಿ ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು ಇದು ಮುಂಬರುವ ಚುನಾವಣೆಯಲ್ಲಿ ನಮ್ಮ ಗೆಲುವಿನ ಮುನ್ಸೂಚನೆ ಮತ್ತು ದಿಕ್ಸೂಚಿ ಎಂದು ಹೇಳಿದರು.
'2023ಕ್ಕೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ'
ಈ ವೇಳೆ ಶಾಸಕ ಸಾ.ರಾ. ಮಹೇಶ್ ಅವರ ಕಾರ್ಯವೈಖರಿ ಮತ್ತು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಅಡಗನಹಳ್ಳಿ ಗ್ರಾಮದ ಪುನೀತ್‌ಗೌಡ, ನಾಗರಾಜೇಗೌಡ, ಸತೀಶ್‌ಗೌಡ, ಮಹದೇವೇಗೌಡ, ಹರೀಶ, ಸಂದೀಪ, ಸೋಮಶೇಖರ್, ಪೂಜಾರಿ ಕರ್ಣ, ರವಿ, ಅಭಿ, ಮಧುಗೌಡ, ಶಿವಣ್ಣಗೌಡ, ದೇವರಾಜ, ಕಿರಣ, ಮಹೇಂದ್ರ, ಸಚಿನ್, ಚೇತನ್, ಕುಮಾರ್, ಶ್ರೀನಿವಾಸ್, ಶಶಿಕುಮಾರ್, ಅನಿಲ್ ಮತ್ತು ಇತರರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದರು. ಗ್ರಾಮದ ಮುಖಂಡರಾದ ಪುಟ್ಟನಾಯಕ, ಜಯಣ್ಣ, ಲೋಕನಾಥ್, ರಾಜಣ್ಣ ಮೊದಲಾದವರು ಇದ್ದರು.