ಕಾವೇರಿ ವಿಷಯದಲ್ಲಿ ನಾವು ತಮಿ​ಳು​ನಾಡಿಂದ ಪಾಠ ಕಲೀಬೇಕು: ಎಚ್‌.​ಡಿ.​ದೇ​ವೇ​ಗೌಡ

Published : Sep 03, 2023, 04:23 AM IST
ಕಾವೇರಿ ವಿಷಯದಲ್ಲಿ ನಾವು  ತಮಿ​ಳು​ನಾಡಿಂದ ಪಾಠ ಕಲೀಬೇಕು: ಎಚ್‌.​ಡಿ.​ದೇ​ವೇ​ಗೌಡ

ಸಾರಾಂಶ

ಕಾವೇರಿ ವಿಚಾ​ರ​ದಲ್ಲಿ ನಾವು ಒಗ್ಗ​ಟ್ಟಾಗಿ ಹೋರಾಡಿ ರಾಜ್ಯದ ಹಿತ ಕಾಯ​ಬೇ​ಕಿ​ದೆ. ಕಾಂಗ್ರೆಸ್‌, ಬಿಜೆಪಿ, ನಾವು ಒಂದಾಗಿ ರಾಜ್ಯದ ಹಿತ ಕಾಯ​ಬೇ​ಕಿ​ದೆ. ಕಾವೇರಿ ವಿಚಾ​ರ​ದಲ್ಲಿ ತಮಿಳುನಾಡಿ​ನಲ್ಲಿ ಪ್ರಾದೇ​ಶಿಕ ಪಕ್ಷ​ಗಳು ಒಂದಾಗಿ ಕೆಲಸ ಮಾಡು​ತ್ತವೆ. ಅವ​ರಿಂದ ನಾವು ಪಾಠ ಕಲಿ​ಯ​ಬೇ​ಕಿದೆ ಎಂದು ಮಾಜಿ ಪ್ರಧಾನಿ ಎಚ್‌.​ಡಿ.​ದೇ​ವೇ​ಗೌಡ ಹೇಳಿ​ದ್ದಾರೆ. 

ಹೊಳೆನರಸೀಪುರ (ಹಾ​ಸ​ನ​) (ಸೆ.03): ಕಾವೇರಿ ವಿಚಾ​ರ​ದಲ್ಲಿ ನಾವು ಒಗ್ಗ​ಟ್ಟಾಗಿ ಹೋರಾಡಿ ರಾಜ್ಯದ ಹಿತ ಕಾಯ​ಬೇ​ಕಿ​ದೆ. ಕಾಂಗ್ರೆಸ್‌, ಬಿಜೆಪಿ, ನಾವು ಒಂದಾಗಿ ರಾಜ್ಯದ ಹಿತ ಕಾಯ​ಬೇ​ಕಿ​ದೆ. ಕಾವೇರಿ ವಿಚಾ​ರ​ದಲ್ಲಿ ತಮಿಳುನಾಡಿ​ನಲ್ಲಿ ಪ್ರಾದೇ​ಶಿಕ ಪಕ್ಷ​ಗಳು ಒಂದಾಗಿ ಕೆಲಸ ಮಾಡು​ತ್ತವೆ. ಅವ​ರಿಂದ ನಾವು ಪಾಠ ಕಲಿ​ಯ​ಬೇ​ಕಿದೆ ಎಂದು ಮಾಜಿ ಪ್ರಧಾನಿ ಎಚ್‌.​ಡಿ.​ದೇ​ವೇ​ಗೌಡ ಹೇಳಿ​ದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿಗೆ ಸಂಬಂಧಿಸಿ ಮಂತ್ರಿಗಳು ಒಂದೊಂದು ಬಾರಿ ಒಂದೊಂದು ಹೇಳಿಕೆಗಳನ್ನು ಕೊಡುತ್ತಾ​ರೆ. ಮಂತ್ರಿಗಳೇ ಹೀಗೆ ಹೇಳಿದರೆ ಏನು ಹೇಳೋದು? ಇದು ಬಹಳ ಕಷ್ಟ. ನೀರಾವರಿ ಸಚಿ​ವರು ಯಾವ್ಯಾವ ಸಂದರ್ಭದಲ್ಲಿ ಏನೇನು ಮಾತನಾಡುತ್ತಾರೆ, ಅದರ ದುಷ್ಪರಿಣಾಮ, ಸತ್ಪರಿಣಾಮ ಏನು ಎಂಬು​ದನ್ನು ಯೋಚನೆ ಮಾಡಬೇಕು. ನನ್ನ ಬಳಿ ಇಬ್ಬರು ಅ​ಧಿಕಾರಿಗಳನ್ನು ಕಳುಹಿಸಿದ್ದರು. ಈ ರೀತಿ ಹೋಗೋಣ ಎಂದು ಹೇಳಿ ಕಳುಹಿ​ಸಿ​ದ್ದೇ​ನೆ. 

ರಾಜ್ಯದ 186 ತಾಲೂಕಲ್ಲಿ ಬರ, 113 ತಾಲೂಕಲ್ಲಿ ಸಮೀಕ್ಷೆ ಪೂರ್ಣ: ಸಿಎಂ ಸಿದ್ದರಾಮಯ್ಯ

ನನ್ನ ಆರೋಗ್ಯ ಸರಿಯಿಲ್ಲ, ಆದ​ರೂ ಸಹಕಾರ ಕೊಡುತ್ತೇನೆ. ನೀರಾವರಿ ಮಂತ್ರಿ ನಡವಳಿಕೆ ಬಗ್ಗೆ ​ನಾನು ಪ್ರತಿ​ಕ್ರಿಯೆ ನೀಡಲ್ಲ ಎಂದ​ರು. ಕಾವೇರಿ ನೀರಿಗಾಗಿ ದೇವೇಗೌಡರ ಹೋರಾಟ ಏನೆಂಬುದು ಇಡೀ ನಾಡಿನ ಜನತೆಗೆ ಗೊತ್ತಿಲ್ಲವೇ? ಕಾವೇರಿ ನದಿ ನೀರು ಪ್ರಾಧಿ​ಕಾರಕ್ಕೆ ಜವಾಬ್ದಾರಿ ಇದೆ. ಯಾವ ರಾಜ್ಯದಲ್ಲಿ ಎಷ್ಟುನೀರಿದೆ, ಬೆಳೆ ಏನಿದೆ, ಎಷ್ಟುನೀರು ಕುಡಿಯಲು ಬೇಕಿದೆ ಎಂಬುದನ್ನು ತಿಳಿಯಲು ತಂಡ ಕಳುಹಿಸಿ ಮಾಹಿತಿ ಸಂಗ್ರಹಿ​ಸ​ಬೇ​ಕು. ರಾಜ್ಯದ ಹಕ್ಕು ಉಳಿಸಿಕೊಳ್ಳಲು ಯಾವುದೇ ಸಂದರ್ಭದಲ್ಲಿ ಮೂರೂ ಪಕ್ಷ​ಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂಬುದು ನನ್ನ ಭಾವನೆ ಎಂದರು.

ಜೆಡಿಎಸ್‌ ಶಾಸಕರು ಪಕ್ಷ ಬಿಡೋದಿಲ್ಲ: ಇನ್ನೊಂದು ಪಕ್ಷವನ್ನು ನಂಬಿ ನಮ್ಮ ಪಕ್ಷದ ಶಾಸಕರು ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಅದೆಲ್ಲವೂ ಊಹಾಪೋಹ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಕುರಿತು ಚರ್ಚೆಯಾಗುತ್ತಿದೆ. ಅದೇನೇ ಇದ್ದರೂ ನಾವು ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಬಿಬಿಎಂಪಿ ಚುನಾವಣೆಗೂ ಸಿದ್ಧತೆ ನಡೆಯುತ್ತಿದೆ. ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಇದೆಲ್ಲಾ ಬರೀ ಊಹಾಪೋಹ ಅಷ್ಟೇ. ಇಂತಹವರು ಹೋಗುತ್ತಾರೆ ಎಂದು ಹೇಳಿದರೆ ನಾವು ಸರಿ ಮಾಡಿಕೊಳ್ಳುತ್ತೇವೆ. ಈ ರೀತಿಯ ಊಹಾಪೋಹದ ಸುದ್ದಿ ಮಾಡಬೇಡಿ. ಪ್ರಾದೇಶಿಕ ಪಕ್ಷ ಉಳಿಯಲು ಬಿಡಿ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಟಿಕೆಟ್‌ ಮಾರಿಕೊಳ್ಳುವ ಪರಿಪಾಠ ಶುರು: ಜಗದೀಶ್‌ ಶೆಟ್ಟರ್‌

ಇನ್ನು, ಮಂಡ್ಯ ಜಿಲ್ಲೆಯ ರಾಜಕಾರಣದ ಬಗ್ಗೆಯೂ ಬಹಳ ಚರ್ಚೆ ಮಾಡಿದ್ದೇನೆ. ಪ್ರತಿಯೊಂದು ವಿಚಾರವನ್ನೂ ತಿಳಿದುಕೊಂಡಿದ್ದೇನೆ. ಒಬ್ಬರೇ ಒಬ್ಬರು ಸಹ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು. ಇಬ್ರಾಹಿಂ ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳು ಏನೇ ಕಸರತ್ತು ನಡೆಸಿದರೂ ನಮ್ಮ ಪಕ್ಷದ ಶಾಸಕರು ನಿಷ್ಠೆಯುಳ್ಳವರು. ಯಾರೂ ಸಹ ಜೆಡಿಎಸ್‌ ಬಿಡುವುದಿಲ್ಲ. ಕಾಂಗ್ರೆಸ್‌, ಬಿಜೆಪಿ ನಡುವೆ ಜೆಡಿಎಸ್‌ ಪಕ್ಷವನ್ನು ಉಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ಹಿರಿಯ ನಾಯಕ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಕೋರ್‌ ಕಮಿಟಿ ಮಾಡಿದ್ದೇವೆ. ಎಲ್ಲಾ ಜಿಲ್ಲೆಗಳಿಗೆ ಕಮಿಟಿ ಭೇಟಿ ಕೊಟ್ಟು ವರದಿ ನೀಡುತ್ತದೆ. ಎಲ್ಲೆಲ್ಲಿ ಬದಲಾವಣೆಯಾಗಬೇಕಿದೆಯೋ ಅದನ್ನು ಕಾರ್ಯಗತಗೊಳಿಸುತ್ತೇವೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಫೈಲ್ ನನ್ನ ಬಳಿಯೇ ಬರಬೇಕು ತಾನೇ?.. ಸಂಪುಟ ಬದಲಾವಣೆ ಚರ್ಚೆಗೆ ಖರ್ಗೆ ತೆರೆ: ಯಾವಾಗ ಏನು ಬೇಕಾದ್ರೂ ಆಗಬಹುದು ಎಂದಿದ್ದೇಕೆ ಹೆಬ್ಬಾಳ್ಕರ್?
India News Live: Jan Dhan Yojana - ಜನ್ ಧನ್ ಖಾತೆಗಳಲ್ಲಿ ಜಬರ್ದಸ್ತ್ ಏರಿಕೆ! ₹3 ಲಕ್ಷ ಕೋಟಿ ದಾಟಿದೆ ಠೇವಣಿ!