ಪ್ರಧಾನಿ ಮೋದಿಯನ್ನು ಮಹಮದ್ ಜಿನ್ನಾಗೆ ಹೋಲಿಸಿದ ವೀರಪ್ಪ ಮೊಯ್ಲಿ: ಏಕೆ ಗೊತ್ತಾ?

By Kannadaprabha News  |  First Published Sep 8, 2023, 2:43 PM IST

1947ರಲ್ಲಿ ಭಾರತದಿಂದ ಪಾಕಿಸ್ತಾನ ವಿಭಜನೆಯಾದಾಗ ಭಾರತಕ್ಕೆ ಇಂಡಿಯಾ ಹೆಸರಿಡಲು ಹೋದಾಗ ಬ್ರೀಟೀಷರೊಂದಿಗೆ ವಿರೋಧ ವ್ಯಕ್ತಪಡಿಸಿದ್ದು ಮಹಮದ್ ಜಿನ್ನಾ, ಆದರೆ ಇಂದು ಇಂಡಿಯಾ ಹೆಸರನ್ನು ವಿರೋಧಿಸಿ, ಮಹಮದ್ ಜಿನ್ನಾ ಪಾತ್ರವನ್ನು ನರೇಂದ್ರ ಮೋದಿ ಮಾಡ ಹೊರಟಿರುವುದು ನಮ್ಮ ದುರಾದೃಷ್ಟ ಎಂದು ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ಹೇಳಿದರು.


ಚಿಕ್ಕಬಳ್ಳಾಪುರ (ಸೆ.08): 1947ರಲ್ಲಿ ಭಾರತದಿಂದ ಪಾಕಿಸ್ತಾನ ವಿಭಜನೆಯಾದಾಗ ಭಾರತಕ್ಕೆ ಇಂಡಿಯಾ ಹೆಸರಿಡಲು ಹೋದಾಗ ಬ್ರೀಟೀಷರೊಂದಿಗೆ ವಿರೋಧ ವ್ಯಕ್ತಪಡಿಸಿದ್ದು ಮಹಮದ್ ಜಿನ್ನಾ, ಆದರೆ ಇಂದು ಇಂಡಿಯಾ ಹೆಸರನ್ನು ವಿರೋಧಿಸಿ, ಮಹಮದ್ ಜಿನ್ನಾ ಪಾತ್ರವನ್ನು ನರೇಂದ್ರ ಮೋದಿ ಮಾಡ ಹೊರಟಿರುವುದು ನಮ್ಮ ದುರಾದೃಷ್ಟ ಎಂದು ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ಹೇಳಿದರು.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷದ ಸವಿನೆನಪಿನಲ್ಲಿ ಗುರುವಾರ ನಗರದ ಜೈ ಭೀಮ್ ಹಾಸ್ಟೆಲ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಾಂಕೇತಿಕ ಪಾದಯಾತ್ರೆ ನಡೆಸಿ, ಅಂಬೇಡ್ಕರ್‌ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ದ್ವೇಷ ಹಂಚುವ ಮೂಲಕ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದ ಕೋಮುವಾದಿ ಶಕ್ತಿಗಳ ವಿರುದ್ಧ ಸೆಡ್ಡು ಹೊಡೆದು ಕಾಂಗ್ರೆಸ್ ಬಿತ್ತಿದ್ದ ಪ್ರೀತಿಯ ಬೀಜ ವ್ಯರ್ಥವಾಗಲಿಲ್ಲ. ನಾಡಿನ ಸೌಹಾರ್ದ ಮನಸುಗಳನ್ನು ಒಂದಾಗಿಸಿದ ಭಾರತ್ ಜೋಡೊ ಯಾತ್ರೆಯ ಫಲ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ವ್ಯಕ್ತವಾಗಿದೆ ಎಂದರು.

Tap to resize

Latest Videos

ಸರ್ಕಾರ ಬಂದು 3 ತಿಂಗಳಾದರೂ ನೀರಾವರಿ ಸಲಹಾ ಸಮಿತಿಯ ಸಭೆ ಕರೆದಿಲ್ಲ: ಎಚ್.ಡಿ.ರೇವಣ್ಣ

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಅನೇಕ ಮುಖಂಡರು, ಸಂಘಸಂಸ್ಥೆಗಳು ಬುದ್ದಿಜೀವಿಗಳು ಹೆಜ್ಜೆ ಹಾಕಿದರು .ಇದರ ಭಾಗವಾಗಿ ರಾಜ್ಯದಲ್ಲಿ ಬಿಜೆಪಿ ಸೋತು ಕಾಂಗ್ರೇಸ್ ಗೆದ್ದಿದೆ. ಭಾರತ್ ಜೋಡೋಯಾತ್ರೆಯಿಂದ ದೇಶದಲ್ಲಿ ಅನೇಕ ಬದಲಾವಣೆಗಳಾಗಿವೆ. ಹಲವು ರಾಜ್ಯಗಳಲ್ಲಿ ಬಿಜೆಪಿ ಸೋತು ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ದೇಶದಲ್ಲಿ ಅನೇಕ ಧರ್ಮ ಜಾತಿ ಜನರಿದ್ದೇವೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಳೆದ 9 ವರ್ಷಗಳಿಂದ ದೇಶದಲ್ಲಿ ಸಾಮಾಜಿಕ ಸಾಮರಸ್ಯ ಕುಸಿದಿದೆ. ದ್ವೇಷ ರಾಜಕಾರಣ ನಡೆಯುತ್ತಿದೆ. ಧಾರ್ಮಿಕ, ಸಾಮಾಜಿಕ ಸಾಮರಸ್ಯದಿಂದ ಬದುಕು ಜೋಡಿಸುವ ಕೆಲಸ 60 ವರ್ಷಗಳಿಂದ ಕಾಂಗ್ರೆಸ್ ಮಾಡಿತ್ತು. ಅದನ್ನು ಮೋದಿ ಹಾಳು ಗೆಡವಿದ್ದಾರೆ ಎಂದರು.

ರಾಹುಲ್ ಗಾಂದಿ ಭಾರತ್ ಜೋಡೋ ಮೂಲಕ ಪಾದಯಾತ್ರೆ ನಡೆಸಿದಾಗ ಪ್ರಧಾನಿ ಮೋದಿಗೆ ನಡುಕ ಉಂಟಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸೋತು ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನ ಸಾರ್ವಜನಿಕರಿಗೆ ಮುಟ್ಟಿಸೋ ಕೆಲಸ ಮಾಡಿದೆ. ಮತೀಯವಾದದ ಬಿಜೆಪಿಯನ್ನ ದೂರವಿಡಲು 2023 ರ ಲೋಕಸಭಾ ಚುನಾವಣೆಗಾಗಿ 28 ಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟ ರಚಿಸಲಾಗಿದೆ. ಈ ಇಂಡಿಯಾ ಹೆಸರಿನಿಂದ ಮತ್ತೆ ಈಗ ಪ್ರಧಾನಿ ಮೋದಿಗೆ ನಡುಕ ಉಂಟಾಗಿ, ಅದಕ್ಕೆ ಇಂಡಿಯಾ ಹೆಸರನ್ನು ಭಾರತ ಎಂದು ಬದಲಾಯಿಸಲು ಹೊರಟಿದ್ದಾರೆ ಎಂದು ಚೇಡಿಸಿದರು.

ರಾಹುಲ್ ಗಾಂಧಿ 154 ದಿನಗಳ ಕಾಲ 4 ಸಾವಿರ ಕಿಮೀ ಪಾದಯಾತ್ರೆ ಮಾಡಿದರು. ರಾಹುಲ್ ಗಾಂಧಿಗೂ ಮೊದಲು ಶ್ರೀರಾಮ ಅಯೋಧ್ಯೆಯಿಂದ ಶ್ರೀಲಂಕಾಕ್ಕೆ ನಡೆದಿದ್ದರು. ಅವರ ನಂತರ ಮಹಾತ್ಮ ಗಾಂಧೀಜಿ ದೇಶಾದ್ಯಂತ ಕಾಲ್ನಡಿಗೆ ಮಾಡಿದ್ದರು ಎಂದರು. ತ್ರೇತಾ ಯುಗದಲ್ಲಿ ಶ್ರೀರಾಮನ ಅನುಯಾಯಿಗಳು ವಾನರ ಸೇನೆ ಅಂದರೆ ಹಿಂದುಳಿದವರು. ಈಗ ಅವರು ರಾಹುಲ್ ಗಾಂಧಿಯ ಜೊತೆ ಇದ್ದಾರೆ. ಆದರೆ ಮೋದಿ ಜೊತೆ ಶ್ರೀಮಂತರು ದೊಡ್ಡ ದೊಡ್ಡ ಕಂಪನಿಗಳು ಇವೆ. 2024ರ ಲೋಕಸಭೆಯಲ್ಲಿ ರಾಜ್ಯದಿಂದ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲಿಸಿ ಕಳುಹಿಸಬೇಕು ಎಂದು ಕರೆ ನೀಡಿದರು .

ಕಾರ್ಯಕ್ರಮದಲ್ಲಿ, ಮಾಜಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ, ಕೆಪಿಸಿಸಿ ಉಸ್ತುವಾರಿ ಉದಯ್ ಶಂಕರ್,ನಂದಿ ಎಂ.ಆಂಜಿನಪ್ಪ,ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಎಂ.ಶಿವಾನಂದ, ಜಿಲ್ಲಾಧ್ಯಕ್ಷ ಕೇಶವರೆಡ್ಡಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುರೇಶ್, ಯಲುವಳ್ಳಿ ರಮೇಶ್, ಕಿಸಾನ್ ಕಾಂಗ್ರೆಸ್‌ನ ರಾಮಕೃಷ್ಣಪ್ಪ, ಶಿಡ್ಲಘಟ್ಟ ಸಹನಾ ರಾಜೀವ್‌ಗೌಡ, ಅಡ್ಡಗಲ್ ಶ್ರೀಧರ್,ಕಳವಾರ ಶ್ರೀಧರ್,ಮುದಾಸಿರ್,ಬ್ಲಾಕ್ ಅಧ್ಯಕ್ಷರು, ಮುಖಂಡರು, ಯುವ ಕಾಂಗ್ರೆಸ್ ಮುಖಂಡರು ಮತ್ತಿತರರು ಇದ್ದರು.

ಜೆಡಿಎಸ್ ಒಲವು ಬಿಜೆಪಿ ಕಡೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡ ಕಾರಣ ಅವರು ಸೋತರು. ನಾವು ಸೋತೆವು. ಜೆಡಿಎಸ್ ಒಲವು ಬಿಜೆಪಿ ಕಡೆ ಇದೆ. ಮೋದಿ ಪರ ಇದ್ದಾರೆ.. ಈ ಕಾರಣದಿಂದ ರಾಜ್ಯದಲ್ಲಿ ಬಿಜೆಪಿ ಇನ್ನೂ ವಿರೋಧ ಪಕ್ಷ ನಾಯಕನ ಆಯ್ಕೆಯಾಗಿಲ್ಲ. ಜೆಡಿಎಸ್ ಪಕ್ಷದ ನಾಯಕ ಕುಮಾರಸ್ವಾಮಿಯೇ ಬಿಜೆಪಿ ವಕ್ತಾರ ನಂತೆ ಮಾತಾಡ್ತಾರೆಂದರು.

ನಟ ಗಣೇಶ್‌ ಜಮೀನಿಗೆ ತೆರಳಲು ರೈತರಿಂದ ಅಡ್ಡಿ: ಮಾತಿನ ಚಕಮಕಿ

ದೇಶದ ಚರಿತ್ರೆ ಬಿಜೆಪಿ ಆರ್ ಎಸ್ಎಸ್ ನವರಿಗೆ ಗೊತ್ತಿಲ್ಲ: ಆರ್ ಎಸ್ ಎಸ್ ಪರಿವಾರದ ಯಾರು ಕೂಡ ಸ್ವಾಂತತ್ರ್ಯ ಹೋರಾಟಕ್ಕೆ ಮುಂದಾಗಿಲ್ಲ. 2500 ವರ್ಷಗಳ ಹಿಂದೆಯೆ ದೇಶವನ್ನ ಅಲೆಗ್ಸಾಂಡರ್ ನಿಂದ ರಕ್ಷಿಸಿದವರು ಹಿಂದುಳಿದ ವರ್ಗದವರು ದೇಶದ ಚರಿತ್ರೆ ಬಿಜೆಪಿ ಆರ್ ಎಸ್ ಎಸ್ ನವರಿಗೆ ಗೊತ್ತಿಲ್ಲ. ಹಿಂದುಳಿದ, ಬಡವರ ದೀನ ದಲಿತರ ಬದುಕು ಹಸನಾಗಬೇಕು ಅಂದರೆ ರಾಹುಲ್ ಗಾಂಧಿ ಪ್ರಧಾನಿಯಾಬೇಕು.ರಾಹುಲ್ ಗಾಂಧಿ ಪ್ರಧಾನಿಯಾದರೆ ದೇಶದಲ್ಲಿ ಭ್ರಷ್ಟಾಚಾರ ತೊಲಗುತ್ತದೆ ಎಂದರು.

click me!