ಸಿಎಂ ಸಿದ್ದರಾಮಯ್ಯ ಬಳಿ ಹಲವಾರು ಸುಳ್ಳಿನ ಅಸ್ತ್ರಗಳಿದ್ದು, ಈ ಮೂಲಕ ಜನರನ್ನು ಮೋಸಗೊಳಿಸುತ್ತಾರೆ. ಅವರೊಂದು ರೀತಿ ಸುಳ್ಳಿನ ಸಾರಥಿಯೇ ಆಗಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಕಿಡಿ ಕಾರಿದ್ದಾರೆ.
ಕುಣಿಗಲ್ (ಫೆ.09): ಸಿಎಂ ಸಿದ್ದರಾಮಯ್ಯ ಬಳಿ ಹಲವಾರು ಸುಳ್ಳಿನ ಅಸ್ತ್ರಗಳಿದ್ದು, ಈ ಮೂಲಕ ಜನರನ್ನು ಮೋಸಗೊಳಿಸುತ್ತಾರೆ. ಅವರೊಂದು ರೀತಿ ಸುಳ್ಳಿನ ಸಾರಥಿಯೇ ಆಗಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಕಿಡಿ ಕಾರಿದ್ದಾರೆ. ಕುಣಿಗಲ್‌ನಲ್ಲಿ ಬಿಜೆಪಿ ಸಂಚಾರಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಜಾತಿಗಳನ್ನು ವಿಂಗಡಿಸುವ ಗುಣ ಸಿದ್ದರಾಮಯ್ಯನ ಬಳಿ ತುಂಬಾ ಚೆನ್ನಾಗಿದೆ. ಈ ಹಿಂದೆ ಅಂತಹ ಹಲವಾರು ಕೆಲಸ ಮಾಡಿದ್ದಾರೆ ಎಂದರು. ಇನ್ನು ಹಲವಾರು ಸುಳ್ಳುಗಳು ಅವರ ಬತ್ತಳಿಕೆಯಲ್ಲಿವೆ, ಚುನಾವಣೆ ನಂತರ ಕಾಂತರಾಜು ವರದಿ ಮುಖಾಂತರ ಕೆಲವೇ ದಿನಗಳಲ್ಲಿ ಮತ್ತೊಂದು ಸುಳ್ಳನ್ನು ಚೆಲ್ಲುತ್ತಾರೆ ಎಂದರು.
ದೇಶದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷದ ಅಧಿಕಾರ ಇದ್ದಾಗ ಅವರು ಹತ್ತು ವರ್ಷ ನೀಡಿದ ತೆರಿಗೆ ಪಾಲಿಗಿಂತ ಬಿಜೆಪಿ ಸರ್ಕಾರ ನೀಡಿರುವ ಹಣ ಬಹುದೊಡ್ಡದಿದೆ. ಅದನ್ನು ಮುಚ್ಚಿಟ್ಟು ಸಿದ್ದರಾಮಯ್ಯ ಕೇಂದ್ರಕ್ಕೆ ಸುಳ್ಳನ್ನು ನಂಬಿಸುವ ಉದ್ದೇಶದಿಂದ ನಮ್ಮ ತೆರಿಗೆ ಹಣದಲ್ಲಿ ಹೋಗಿದ್ದಾರೆ ಎಂದು ದೂರಿದರು. ಅಂಬೇಡ್ಕರ್‌ನ ಪಂಚಧಾಮಗಳನ್ನು ಅಭಿವೃದ್ಧಿ ಗೊಳಿಸಿದ್ದು ಬಿಜೆಪಿ, ಆದರೆ ಕೇಂದ್ರ ಸ್ಥಾನವಾದ ದೆಹಲಿಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಶವಸಂಸ್ಕಾರಕ್ಕೂ ಅವಕಾಶ ನೀಡಲಿಲ್ಲ ಎಂದರು. ಗಂಡನ ಜೋಬಿಗೆ ಕತ್ತರಿ ಹಾಕಿ ಹೆಂಡತಿಗೆ ಸೌಲಭ್ಯ ನೀಡುವುದು ಕಾಂಗ್ರೆಸ್ ಗುಣ. ಮುಂದಿನ ದಿನಗಳಲ್ಲಿ ಇನ್ನಷ್ಟು ಅವಾಂತರವನ್ನು ಕಾಂಗ್ರೆಸ್ ಮಾಡುತ್ತದೆ ಪ್ರತಿಯೊಬ್ಬರೂ ಜಾಗರೂಕತರಾಗಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕೆಂದರು.
undefined
ಕಾಂಗ್ರೆಸ್‌ಗೆ ದೇಶ ಒಗ್ಗೂಡಿಸೋದು ಗೊತ್ತಿಲ್ಲ, ಒಡೆಯೋದೆ ಗೊತ್ತಿರೋದು: ಸಿ.ಟಿ.ರವಿ
ಶ್ವೇತಪತ್ರ ಹೊರಡಿಸಲು ರವಿ ಆಗ್ರಹ: ಕಳೆದ 2004 ರಿಂದ 2014ರವರೆಗೆ ಹಾಗೂ 2014 ರಿಂದ 2024ರ ಫೆಬ್ರವರಿ ವರೆಗೆ ಕೇಂದ್ರದಿಂದ ಬಂದಿರುವ ತೆರಿಗೆ ಪಾಲು, ಅನುದಾನ ಮತ್ತು ಸಹಾಯಧನ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನವರಿಕೆ (ಕನ್ವಿನ್ಸ್) ಮಾಡಲು ಆಗದಿದ್ದರೆ ಗೊಂದಲ (ಕನ್ಫ್ಯೂಸ್) ಉಂಟು ಮಾಡುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮನಮೋಹನ್ ಸಿಂಗ್ ಹಾಗೂ ಮೋದಿಯವರಿಬ್ಬರ ಅಡಳಿತಾವಧಿಯಲ್ಲಿ ಅನುದಾನ-ಸಹಾಯಧನ ಎಷ್ಟು ಎಂದು ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು. 2004 ರಿಂದ 2014 ರವರೆಗೆ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಇದ್ದಾಗ ಬಂದ ತೆರಿಗೆ ಪಾಲು ₹81,795 ಕೋಟಿ, 2014 ರಿಂದ 2023ರ ಡಿಸೆಂಬರ್‌ವರೆಗೆ ನರೇಂದ್ರ ಮೋದಿ ಕೊಟ್ಟಿದ್ದು ₹2,82,791 ಕೋಟಿ. ಅಂದರೆ, ಪ್ರತಿಶತ 245ರಷ್ಟು ಹೆಚ್ಚು ನೀಡಿದ್ದಾರೆ. 2004- 2014 ರವರೆಗೆ ರಾಜ್ಯಕ್ಕೆ ಬಂದಿರುವ ಅನುದಾನ- ಸಹಾಯಧನ ₹60,779 ಕೋಟಿ, 2014- 2023 ರವರೆಗೆ ನರೇಂದ್ರ ಮೋದಿ ಕೊಟ್ಟಿರುವುದು ₹2,08,832 ಕೋಟಿ ನೀಡಿದ್ದಾರೆ ಎಂದರು.
ಜಾತಿ ಹೆಸರಿನಲ್ಲಿ ದೇಶ ಒಡೆದು ವಿಭಜನೆ ಮಾಡಿದ್ದೇ ಕಾಂಗ್ರೆಸ್: ಸಿ.ಟಿ.ರವಿ
ಸಿಎಂ ಸಿದ್ದರಾಮಯಯ್ಯ ಒಂದು ದಿನವೂ ಜಿಎಸ್‌ಟಿ ಕೌನ್ಸಿಲ್ ಮೀಟಿಂಗ್‌ಗೆ ಹೋಗಲಿಲ್ಲ. ನಾನೇಕೆ ಹೋಗಬೇಕು ಎಂಬ ಅಹಂಕಾರ ತೋರಿದರು. ಅನ್ಯಾಯವಾಗಿದ್ದರೆ ಜಿಎಸ್‌ಟಿ ಮೀಟಿಂಗ್‌ನಲ್ಲಿ ಪ್ರಶ್ನೆ ಮಾಡಿ ನ್ಯಾಯ ಕೇಳಬಹುದಿತ್ತು. ಸಚಿವ ಕೃಷ್ಣ ಬೈರೇಗೌಡ ಕೇಂದ್ರದ ನೀತಿ ಎಲ್ಲಾ ಸಮಾಧಾನವಾಗಿದೆ ಎಂದು ಹೇಳಿ ಬರುತ್ತಾರೆ. ಹೊರಗಡೆ ಬಂದು ಕೇಂದ್ರಕ್ಕೆ ಬೈಯುತ್ತಾ ಸುಳ್ಳು ಹೇಳಿ ರಾಜಕಾರಣ ಮಾಡುತ್ತಾರೆ ಎಂದು ಹೇಳಿದರು.