
ಶಿಡ್ಲಘಟ್ಟ (ಜ.19): ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದೆ ಆ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲೂ ಮನೆ ಮನೆಗೆ ಮಂತ್ರಾಕ್ಷತೆ ಹಾಗೂ ಶ್ರೀರಾಮಚಂದ್ರನ ಪೊಟೋ ಕ್ಯಾಲೆಂಡರ್ ನೀಡಿ ಮನೆಗಳ ಮುಂದೆ ರಂಗೋಲಿ ಬಿಡಿಸಿ ಉತ್ತರದ ಕಡೆ ದೀಪ ಬೆಳಗಿ ಶ್ರೀ ರಾಮ ಚಂದ್ರನನ್ನು ಮನೆಗಳಿಗೆ ಬರಮಾಡಿಕೊಳ್ಳಬೇಕೆಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದ ಬಿಜೆಪಿಯ ಸೇವಾ ಸೌಧ ಕಛೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯನ್ನು ದೀಪಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಮರಾಜ್ಯದ ಕನಸು ನನಸಾಗುವ ಸಮಯ ಬಂದಿದೆ. ನಮ್ಮ ಕಾಲಘಟ್ಟದಲ್ಲಿ ದೇವಾಲಯ ನಿರ್ಮಾಣವಾಗಿ ಪ್ರಾಣ ಪ್ರತಿಷ್ಟಾಪನೆ ನೋಡಲಿರುವ ನಾವೆಲ್ಲರೂ ಪುಣ್ಯವಂತರು ಎಂದರು. ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ ಮಾತನಾಡಿ ಹಿಂದೂ ಧರ್ಮವನ್ನು ನಾವೆಲ್ಲರೂ ಉಳಿಸುವ ಕೆಲಸ ಮಾಡಬೇಕು. ಮೋದಿಜಿಯವರ ದೇಶ ಪ್ರೇಮ ಹಾಗೂ ಅವರ ಅವಧಿಯಲ್ಲಾಗಿರುವ ಅಭಿವೃದ್ದಿ, ಜನಪರ ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ತಿಳಿಸಲು ಸಮಯ ಸಾಕಾಗುವುದಿಲ್ಲ.
ಕೊಚ್ಚೆಯಲ್ಲಿ ಇರುವುದು ಹಂದಿ ಮಾತ್ರ: ಸಂಸದ ಪ್ರತಾಪ್ ಸಿಂಹಗೆ ಕೌಂಟರ್ ನೀಡಿದ ಪ್ರದೀಪ್ ಈಶ್ವರ್!
ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ನೋಡಲು ದೇಶ ಕಾಯುತ್ತಿದೆ ಎಂದರು. ಮೋದಿಯವರು ಈಗಾಗಲೇ ದೇವಾಲಯಗಳ ಸ್ವಚ್ಛಗೊಳಿಸಲು ಕರೆ ನೀಡಿದ್ದಾರೆ ಜ. ೨೨ ರ ದಿನವನ್ನು ಹಬ್ಬದಂತೆ ವಿಜೃಂಭಣೆಯಿಂದ ಆಚರಿಸಬೇಕು ಶ್ರೀರಾಮನ ಪ್ಲೆಕ್ಸ್ ಹಾಗೂ ಬಂಟಿಂಗ್ ಎಲ್ಲಾ ವ್ಯವಸ್ಥೆಯನ್ನು ನಮ್ಮ ಟ್ರಸ್ಟಿನಿಂದ ಮಾಡಿಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜಿಲ್ಲಾ ಬಿಜೆಪಿ ವಕ್ತಾರ ರಮೇಶ್ ಬಾಯರಿ, ಮಾಜಿ ಶಾಸಕ ಎಂ ರಾಜಣ್ಣ, ತಾಲ್ಲೂಕು ಮಂಡಲ ಅಧ್ಯಕ್ಷ ಸುರೇಂದ್ರ ಗೌಡ ಮುಖಂಡರಾದ ಆನಂದ ಗೌಡ , ಪಟಾಕಿ ಕೇಶವ , ಪುರುಷೋತ್ತಮ್ ಸೇರಿದಂತೆ ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ಪ್ರಧಾನಿ ಮೋದಿ ಗ್ಯಾಂರಂಟಿಗಳ ಮೇಲೆ ಭರವಸೆ ಇಡಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ 3ನೇ ಬಾರಿಗೆ ಮೋಧಿ ಅವರು ಪ್ರಧಾನ ಮಂತ್ರಿ ಆಗಲಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರದ ಗ್ಯಾರಟಿಗಳನ್ನು ನಂಬಬೇಡಿ, ಮೋಧಿ ಸರ್ಕಾರದ ಗ್ಯಾರೆಂಟಿಗಳ ಮೇಲೆ ಭರವಸೆ ಇಡಿ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು. ತಾಲೂಕಿನ ದೇವರಗುಡಿಪಲ್ಲಿ ಗ್ರಾಮದ ಗಾಯತ್ರಿ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಅಯೋಧ್ಯೆಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಶುಭವೇಳೆಯಲ್ಲಿ ಪಕ್ಷದ ಕೆಲ ವಿರೋಧಿಗಳ ಶ್ರೀರಾಮನ ಪ್ರಾಣಪ್ರತಿಷ್ಠಾನೆ ವಿಷಯದಲ್ಲಿ ರಾಜಕೀಯ ಮಾಡುತ್ತಾ 140 ಕೋಟಿ ಭಾರತೀಯರ ನಂಬಿಕೆಗೆ ತ್ಯುತಿ ತರುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಮುಂದುವರಿಕೆ ಹೈಕಮಾಂಡ್‌ಗೆ ಬಿಟ್ಟದ್ದು: ಸಚಿವ ಪರಮೇಶ್ವರ್
ಹಿಂದೂ ವಿರೋಧಿ ಕಾಂಗ್ರೆಸ್: 1951ರಲ್ಲಿ ಜ್ಯೋತಿರ್‍ಲಿಂಗ ಸ್ಥಾಪನೆ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ನೆಹರು ರವರು ಹೋಗಲಿಲ್ಲ, ಕಾಂಗ್ರೆಸ್ ಸರ್ಕಾರಗಳು ಹಿಂದುತ್ವದ ವಿರುದ್ದ, ಹಿಂದುಗಳ ಭಾವನೆಗಳಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ. ನಾವು ಈ ರೀತಿಯಲ್ಲಿ ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿಲ್ಲ ದೇಶದ ಪ್ರತಿಯೊಬ್ಬರ ಮನಸು ಗೆಲ್ಲುವಂತಹ ಹಾಗೂ ಎಲ್ಲರನ್ನು ಒಂದು ಮಾಡುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಇದೇ 22ರಂದು ಇಡೀ ದೇಶದಲ್ಲಿ ಸಂಭ್ರಮ ಸಡಗರದಿಂದ ಶ್ರೀರಾಮ ಲಾಲ್ಲ ಪ್ರಾಣಪ್ರತಿಷ್ಠಾಪನೆ ನಡೆಸಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.