ರೂಪಾಲಿ ನಾಯ್ಕ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಒಬ್ಬ ಮಹಿಳೆಯನ್ನು ಸೋಲಿಸಲು ಎಲ್ಲ ಗಂಡಸರೂ ಒಂದಾಗಿದ್ದಾರೆ ಎಂದು ಟೀಕಿಸಿದ್ದಾರೆ. ಹಾಗಿದ್ದರೆ ಅವರೊಂದಿಗಿದ್ದ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರಿಗೆ ಅದಿಲ್ವಾ? ನಾವಿಬ್ಬರು ಮಾಜಿಗಳು. ಅವರು ಸ್ವತಃ ಶಾಸಕಿಯಾಗಿದ್ದವರು.
ಕಾರವಾರ (ಮೇ.18): ರೂಪಾಲಿ ನಾಯ್ಕ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಒಬ್ಬ ಮಹಿಳೆಯನ್ನು ಸೋಲಿಸಲು ಎಲ್ಲ ಗಂಡಸರೂ ಒಂದಾಗಿದ್ದಾರೆ ಎಂದು ಟೀಕಿಸಿದ್ದಾರೆ. ಹಾಗಿದ್ದರೆ ಅವರೊಂದಿಗಿದ್ದ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರಿಗೆ ಅದಿಲ್ವಾ? ನಾವಿಬ್ಬರು ಮಾಜಿಗಳು. ಅವರು ಸ್ವತಃ ಶಾಸಕಿಯಾಗಿದ್ದವರು. ಉಳ್ವೇಕರ್ ಒಬ್ಬರು ಎಂಎಲ್‌ಸಿ. ಹಾಗಿದ್ದರೆ ಅವರಿಗೆ ಇಲ್ವಾ? ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಪತ್ರಿಕಾಗೋಷ್ಠಿಯಲ್ಲಿ ಅಸಂಬದ್ಧವಾಗಿ ಕೈಸನ್ನೆ ಮಾಡಿ ಮಾತನಾಡಿದ್ದಾರೆ.
ನಾನು ಕ್ಷೇತ್ರದ ಪರವಾಗಿ, ಭ್ರಷ್ಟಾಚಾರದ ವಿರುದ್ಧವಾಗಿ, ಧರ್ಮಗಳ ನಡುವಿನ ಸಂಘರ್ಷದ ವಿರುದ್ಧ, ಮಾಜಿ ಶಾಸಕರೊಬ್ಬರಿಗೆ ಇನ್ನೂ 10 ಬಾರಿ ನೀವು ಮಾಜಿಯಾಗಿಯೇ ಇರುತ್ತೀರಿ ಎಂಬ ದರ್ಪದ ಮಾತಿನ ವಿರುದ್ಧ, ಕರೆ ಸ್ವೀಕರಿಸದ, ಮನೆಯಲ್ಲಿ ಸಾರ್ವಜನಿಕರಿಗೆ ಲಭ್ಯರಿಲ್ಲದ, ಸ್ಪಂದಿಸದ ಸರ್ವಾಧಿಕಾರಿ ಧೋರಣೆಯ ಆಡಳಿತದ ವಿರುದ್ಧವಾಗಿ ನಾನು ಸತೀಶ್ ಸೈಲ್ ಅವರಿಗೆ ಬೆಂಬಲ ನೀಡಿದ್ದೆ. ಆನಂದ್ ಸೈಲ್ ಜೊತೆಗೆ ಡೀಲ್ ಮಾಡಿಕೊಂಡಿದ್ದಾರೆ ಎಂದು ರೂಪಾಲಿ ನಾಯ್ಕ ಹೇಳಿದ್ದರು. ಹೌದು, ಕಾರವಾರದ ಕಾರಾಗೃಹದ ಸ್ಥಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಬೇಕು. ನನ್ನ ಅವಧಿಯಲ್ಲಿ ಮಂಜೂರಾದ ಎರಡು ಬಂದರುಗಳು ಆಗಬೇಕು.
'ಪ್ಲಾಟಿನಂ ರೇಟಿಂಗ್' ಗರಿ ಮುಡಿಗೇರಿಸಿಕೊಂಡ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2!
ಅಂಕೋಲಾದಲ್ಲಿ ಡಿಪ್ಲೋಮಾ ಕಾಲೇಜು, ಕ್ಷೇತ್ರದ ಯುವಜನರಿಗೆ ಉದ್ಯೋಗ ಸಿಗುವಂಥಾಗಬೇಕು, ಶಾಶ್ವತ ಕುಡಿಯುವ ನೀರಿನ ಯೋಜನೆ ಸೇರಿದಂತೆ ಎಲ್ಲಾ ಅಭಿವೃದ್ಧಿಪರವಾಗಿ ನಮ್ಮಿಬ್ಬರ ನಡುವೆ ಡೀಲ್ ಆಗಿತ್ತು. ಅದಕ್ಕಾಗಿ ನಾನು ಎಲ್ಲಾ ರೀತಿಯ ಬೆಂಬಲ ಕೊಟ್ಟಿದ್ದೆ ಎಂದರು. ರೂಪಾಲಿ ನಾಯ್ಕ ಅವರು ಪರಾಜಿತರಾದ ಬಳಿಕ ಮಾತನಾಡಿದ ಒಂದು ವಿಡಿಯೋದಲ್ಲಿ ಅವರು, ಬಿಜೆಪಿ ಕಾರ್ಯಕರ್ತರು, ಪ್ರಮುಖರೇ ಸೋಲಿಗೆ ಕಾರಣ ಎಂಬಂತೆ ಕೆಳಮಟ್ಟದಲ್ಲಿ ಹೇಳಿದ್ದಾರೆ. ನೇರವಾಗಿ ಎಲ್ಲಾ ಮುಖಂಡರು ದಗಲ್ಬಾಜಿ ಮಾಡಿದ್ದಾರೆ ಎಂದಿದ್ದಾರೆ. ರಕ್ತದಲ್ಲಿ ಬರೆದುಕೊಡುತ್ತೇನೆ, ಮೋದಿಯವರು ಕ್ಷೇತ್ರಕ್ಕೆ ಬಂದು ಹೋದ ಮೇಲೆ ಒಂದು ಬಿಜೆಪಿ ಓಟು ಕೂಡ ಸೈಲ್‌ಗೆ ಸಿಕ್ಕಿಲ್ಲ. 100ಕ್ಕೆ 100 ಓಟು ರೂಪಾಲಿಗೆ ಬಿದ್ದಿದೆ. ನಾನು ಬಹಿರಂಗವಾಗಿ ಹೊರ ಬರಲು ಕಾರಣವೇ ಮೋದಿ.
ಅಂಕೋಲಾದಲ್ಲಿನ ಬದಲಾವಣೆಯ ವಾತಾವರಣ ನೋಡಿ ಪ್ರಚಾರಕ್ಕೆ ಬಂದಿದ್ದೆ. ಇನ್ನೊಂದು, ಗೋವಾ ಮುಖ್ಯಮಂತ್ರಿ ಪ್ರಚಾರಕ್ಕೆ ಬಂದು ಸೈಲ್ ಅವರ ಹೆಸರನ್ನ ವ್ಯಂಗ್ಯ ಮಾಡಿ ಕೆಳಮಟ್ಟದಲ್ಲಿ ಟೀಕೆ ಮಾಡಿದ್ದರು. ಇದು ನನಗೆ ಬಹಳ ನೋವು ತಂದ ಕಾರಣ ನಾನು ಪ್ರಚಾರಕ್ಕೆ ಬರಬೇಕಾಯಿತು. ರೂಪಾಲಿಯ ಯೋಗ್ಯತೆ ಕೇವಲ 2000 ಮತ, ನಾನು ಸವಾಲು ಹಾಕುತ್ತೇನೆ. ಬಿಜೆಪಿಯಲ್ಲಿದ್ದಿದ್ದಕ್ಕೆ ಅವಳಿಗೆ ಇಷ್ಟು ಮತ ಬಿದ್ದಿದೆ ಎಂದರು. ಉಳ್ವೇಕರ್ ಅವರು ಎಂಎಲ್‌ಸಿ ಆದ ಬಳಿಕ ಅವರಿಗೆ ನಾನು ಅಭಿನಂದಿಸಿಲ್ಲ. ಹೀಗಾಗಿ ಮುಂದಿನ 15 ದಿನಗಳಲ್ಲಿ ಅವರು ಎಲ್ಲಿರುತ್ತಾರೋ ಅಲ್ಲಿಯೇ ಭೇಟಿಯಾಗಿ ಅವರನ್ನು ಅಭಿನಂದಿಸುವೆ.
ನಾವು ಸಿದ್ಧಾಂತದ ರಾಜಕಾರಣಕ್ಕಾಗಿ ಬಂದವರು: ಸಿ.ಟಿ.ರವಿ
ಮಾಜಿ ಶಾಸಕಿಗೂ ಕೂಡ ಅವರನ್ನು ಭೇಟಿಯಾಗಿ ಅಭಿನಂದಿಸುವೆ. ಆದರೆ, ಅವರ ಸಮಯ ನೋಡಿಕೊಳ್ಳಬೇಕು. ಅವರು ದೆಹಲಿ ಮಟ್ಟದ ನಾಯಕಿಯಾಗಿರುವುದರಿಂದ ಅವರು ಯಾವಾಗ ಸಿಗುತ್ತಾರೆಂದು ನೋಡಿಕೊಂಡು ಅವರಿಗೂ ಅಭಿನಂದನೆ ಹೇಳಿ ಬರಬೇಕು. ಶಾಸಕಿಯಾದ ಬಳಿಕ ನಾನು ಒಮ್ಮೆನೂ ಅವರಿಗೆ ಅಭಿನಂದಿಸಿರಲಿಲ್ಲ ಎಂದರು. ನಾನು ಎಂದಿಗೂ ಬಿಜೆಪಿಯನ್ನು ವಿರೋಧ ಮಾಡಿಲ್ಲ. ವಿರೋಧ ಮಾಡಿದ್ದು ರೂಪಾಲಿ ನಾಯ್ಕರನ್ನು. ಮೋದಿಯವರ ಮೇಲೆ ನನಗೆ ಬಹಳ ಗೌರವ ಇದೆ. ರೂಪಾಲಿಗೆ ಟಿಕೆಟ್ ತಪ್ಪಿಸಬೇಕೆಂದು ಮಾತನಾಡಿದ ಎಲ್ಲಾ ಮುಖಂಡರ ಆಡಿಯೋ ರೆಕಾರ್ಡ್ ನನ್ನ ಬಳಿ ಇದೆ. ಯಾರಿಗೂ ಅವರಿಗೆ ಟಿಕೆಟ್ ನೀಡಲು ಇಷ್ಟ ಇರಲಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.