ಬಿಎಸ್‌ವೈ ಹೊಂದಾಣಿಕೆ ರಹಸ್ಯವೀಗ ಬಯಲು, ಡಿಕೆಶಿ ಜನತೆ ಕ್ಷಮೆ ಕೇಳಲಿ: ಈಶ್ವರಪ್ಪ ವಾಗ್ದಾಳಿ

By Kannadaprabha NewsFirst Published Aug 10, 2024, 11:42 PM IST
Highlights

ಕಾಂಗ್ರೆಸ್‌, ಬಿಜೆಪಿ ಹೊಂದಾಣಿಕೆಯಿಂದಾಗಿ ವಿಜಯೇಂದ್ರ ಗೆದ್ದಿದ್ದಾರೆ ಎಂದು ನಾನು ಹಲವು ಬಾರಿ ಹೇಳಿದ್ದೆ. ಈಗ ಅದನ್ನು ಡಿ.ಕೆ.ಶಿವಕುಮಾರ್‌ ಅವರೇ ಬಹಿರಂಗ ಪಡಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಕುಟುಂಬ ಮತ್ತು ಕಾಂಗ್ರೆಸ್ಸಿನ ಹೊಂದಾಣಿಕೆಯ ರಹಸ್ಯ ಈಗ ಬಯಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು. 

ಶಿವಮೊಗ್ಗ (ಆ.10): ಕಾಂಗ್ರೆಸ್‌, ಬಿಜೆಪಿ ಹೊಂದಾಣಿಕೆಯಿಂದಾಗಿ ವಿಜಯೇಂದ್ರ ಗೆದ್ದಿದ್ದಾರೆ ಎಂದು ನಾನು ಹಲವು ಬಾರಿ ಹೇಳಿದ್ದೆ. ಈಗ ಅದನ್ನು ಡಿ.ಕೆ.ಶಿವಕುಮಾರ್‌ ಅವರೇ ಬಹಿರಂಗ ಪಡಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಕುಟುಂಬ ಮತ್ತು ಕಾಂಗ್ರೆಸ್ಸಿನ ಹೊಂದಾಣಿಕೆಯ ರಹಸ್ಯ ಈಗ ಬಯಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿಕಾರಿಪುರದಲ್ಲಿ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವ ಬಿ.ವೈ.ವಿಜಯೇಂದ್ರ, ಬಿ.ಎಸ್.ಯಡಿಯೂರಪ್ಪ ಮತ್ತು ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಹರಿಹಾಯ್ದರು.

ನಿಮ್ಮ ಹೊಂದಾಣಿಕೆಯಿಂದ ಕಾರ್ಯಕರ್ತರಿಗೆ ನಷ್ಟವಾಗಿದೆ. ನಿಮ್ಮಿಬ್ಬರಗೂ ಯಾವುದೇ ಸಿದ್ಧಾಂತ ಇಲ್ಲ. ಇದು ಸ್ವಾರ್ಥದ ರಾಜಕಾರಣವಾಗಿದೆ. ಶಿಕಾರಿಪುರ ಸೇರಿದಂತೆ ಇತರೆ ಕ್ಷೇತ್ರಗಳಲ್ಲೂ ಇದೇ ರೀತಿಯ ಹೊಂದಾಣಿಕೆ ರಾಜಕಾರಣ ನಡೆದಿರಬಹುದು. ಎರಡು ಪಕ್ಷದ ಕಾರ್ಯಕರ್ತರನ್ನು ವಂಚಿಸಲಾಗಿದೆ. ಹಾಗಾಗಿ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

Latest Videos

‘ವಕ್ಫ್’ ಕಾನೂನು ತಿದ್ದುಪಡಿಯಿಂದ ಅಲ್ಪಸಂಖ್ಯಾತ ಬಡವರಿಗೆ ನ್ಯಾಯ: ಸಂಸದ ಬಿ.ವೈ.ರಾಘವೇಂದ್ರ

ಮೂಢರ ಬೀದಿಬದಿ ಜಗಳ: ಮೈಸೂರು ಚಲೋ ಮತ್ತು ಪಾದಯಾತ್ರೆಯ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ಸಿಗರು ಹಗರಣಗಳ ದಾಖಲೆ ಬಗ್ಗೆ ಚರ್ಚಿಸುವುದನ್ನು ಬಿಟ್ಟು, ಹೀಗೆ ಬೀದಿಗೆ ಬಂದಿದ್ದಾರೆ. ಇದು ಒಂದು ರೀತಿಯಲ್ಲಿ ಮೂಢರ ಬೀದಿಬದಿ ಜಗಳದ ನಾಟಕವಂತಾಗಿದೆ. ನಾಯಕ-ನಾಯಕರು ಏಕವಚನದಲ್ಲಿ ಬಡಿದಾಡಿಗೊಂಡಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿರುವ ಎಲ್ಲಾ ಭ್ರಷ್ಟಾಚಾರಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದರು.

ಬಡವರಿಗೆ ಆಶ್ರಯ ಮನೆಗಳನ್ನು ನೀಡಿ: ಆಶ್ರಯಮನೆಗಳ ಬಗ್ಗೆ ಸಾಕಷ್ಟು ಹೋರಾಟ ಮಾಡಿದ ಫಲವಾಗಿ 288 ಮನೆಗಳನ್ನು ಈಗಾಗಲೇ ಹಂಚಲಾಗಿದೆ. ಇತ್ತೀಚೆಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ ವಸತಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿ ಆಗಸ್ಟ್ ತಿಂಗಳೋಳಗೆ 600 ಮನೆಗಳನ್ನು ಹಂಚಲಾಗುವುದು ಎಂದು ಭರವಸೆ ನೀಡಿದ್ದು, ಆದರೆ ಅಲ್ಲಿ ಕುಡಿಯುವ ನೀರು, ವಿದ್ಯುತ್ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳು ನೀಡದೇ ಹಂಚಬಾರದು. ಇವೆಲ್ಲ ಸೌಲಭ್ಯಗಳನ್ನು ನೀಡಿದ ನಂತರವೇ ಮನೆಗಳನ್ನು ವಿತರಿಸಬೇಕು ಎಂದರು.

ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಹಿಂದೂಗಳನ್ನು ಹುಡುಕಿ ಕಗ್ಗೊಲೆ ಮಾಡುತ್ತಿದ್ದಾರೆ. ಹಿಂದುಗಳು ಯಾವ ತಪ್ಪು ಮಾಡಿದ್ದರು? ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಲ್ಲೆ, ಅತ್ಯಾಚಾರಗಳು ತಕ್ಷಣವೇ ನಿಲ್ಲಬೇಕು. ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಬೇಕು. ಭಾರತ ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವಾಸ್, ಶಂಕರ್‌ಗನ್ನಿ, ಎಂ.ಶಂಕರ್, ಮಹಾಲಿಂಗಶಾಸ್ತ್ರಿ, ಅ.ಮಾ.ಪ್ರಕಾಶ್, ಬಾಲು, ಚಿದಾನಂದ, ನಾಗರಾಜು, ಮೋಹನ್ ಮುಂತಾದವರು ಇದ್ದರು.

ಪಾಲಿಕೆ ಚುನಾವಣೆ: ಸುಪ್ರೀಂ ಆದೇಶ ಪಾಲಿಸಿ: ಮಹಾನಗರ ಪಾಲಿಕೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಆ ಆದೇಶ ಪಾಲನೆ ಮಾಡಿ ಕೂಡಲೇ ಪಾಲಿಕೆ ಚುನಾವಣೆ ನಡೆಸಬೇಕು. ಚುನಾವಣೆ ಆಯೋಗದ ಅಧಿಕಾರಿಗಳು ಚುನಾವಣೆ ನಡೆಸುವುದಾಗಿ ತಿಳಿಸಿದ್ದಾರೆ. ಪಾಲಿಕೆಯಲ್ಲಿ ಚುನಾಯಿತಿ ಪ್ರತಿನಿಧಿಗಳಿಂದಲೇ ಅಧಿಕಾರಿಗಳ ಆಡಳಿತದಿಂದ ಜನರು‌ ನಲುಗಿ ಹೋಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳು ಇವೆ. ಹೀಗಾಗಿ ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಮಾಡಿ ಕೂಡಲೇ ಚುನಾವಣೆ ನಡೆಸಬೇಕು ಎಂದು ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದರು.

ತಂದೆ ತಾಯಿ ಪತ್ನಿ ಮಕ್ಕಳಿಲ್ಲದೆ ಅನಾಥನಾಗಿ ಕತ್ತಲೆ ಕೋಣೆಯಲ್ಲಿ ಕುಳಿತಿದ್ದ ಅನಾರೋಗ್ಯ ಪೀಡಿತ ವ್ಯಕ್ತಿಯ ರಕ್ಷಣೆ!

ಆಶ್ರಯಮನೆ ವಿತರಣೆಗೆ ಆಗ್ರಹಿಸಿ, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಸೌಲಭ್ಯಗಳ ಒದಗಿಸಲು ಆಗ್ರಹಿಸಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಒತ್ತಾಯಿಸಿ ಆ.13ರಂದು ದೈವಜ್ಞವೃತ್ತದಿಂದ, ದುರ್ಗಿಗುಡಿ, ನೆಹರು ರಸ್ತೆ, ಶಿವಪ್ಪನಾಯಕ ಪ್ರತಿಮೆ ಮೂಲಕ ನಗರಸಭೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಪಾಲಿಕೆಗೆ ಮನವಿ ಸಲ್ಲಿಸಲಾಗುವುದು. ಸುಮಾರು 3000 ಕ್ಕೂ ಹೆಚ್ಚು ಜನರು ಭಾಗವಹಿಸುವರು ಎಂದು ತಿಳಿಸಿದರು.

click me!