
ಬೀದರ್ (ನ.24): ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಕಾಂಗ್ರೆಸನ ಸುಳ್ಳು ಆಶ್ವಾಸನೆಗೆ ಮರುಳಾಗಬೇಡಿ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಡಿದಾಟದಲ್ಲಿ ರಾಜ್ಯದ ಅಭಿವೃದ್ಧಿ ಸ್ಥಗಿತಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ತೆಲಂಗಾಣದ ಜಹೀರಾಬಾದನಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಅವರು ಮಾತನಾಡಿ, ಬಿಟ್ಟಿ ಭಾಗ್ಯದಿಂದ ಅಭಿವೃದ್ಧಿ ಕುಂಠಿತಗೊಂಡಿವೆ. ನೀರಾವರಿ ಯೋಜನೆ, ರಸ್ತೆ ಸುಧಾರಣೆ ಎಲ್ಲ ಸ್ಥಗಿತಗೊಂಡಿದೆ ನಾವು ಅಧಿಕಾರದಲ್ಲಿ ಇದ್ದಾಗ ತಂದ ಯೋಜನೆ ಭಾಗ್ಯ ಲಕ್ಷ್ಮಿ ಯೋಜನೆ ಸರಿಯಾದ ರೀತಿಯಲ್ಲಿ ಜಾರಿಗೆ ತರದೆ ಮೋಸ ಮಾಡುತ್ತಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಯ ಕೇಂದ್ರ ಸರ್ಕಾರದ 6 ಸಾವಿರ, ನಾನು ಮುಖ್ಯಮಂತ್ರಿ ಇದ್ದಾಗ ರಾಜ್ಯ ಸರ್ಕಾರದಿಂದ 4 ಸಾವಿರ ನೀಡಿದ್ದೆ. ಅದನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದರು. ಈ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗೆ ಎಲ್ಲರು ಅತಿ ಹೆಚ್ಚು ಮತ ನೀಡಿ ಗೆಲ್ಲಿಸಬೇಕು ಸುಳ್ಳು ಆಶ್ವಾಸನೆಗೆ ಮರುಳಾಗಬೇಡಿ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಅನ್ಯಾಯ ಮಾಡಿದೆ. ಇಲ್ಲಿರುವ ನಮ್ಮ ಕನ್ನಡಿಗರು ಬಿಜೆಪಿಗೆ ಮತ ನೀಡಿ ಇಲ್ಲಿನ ಜನತೆ ಸಹ ಮತ ನೀಡುವಂತೆ ಮನವಿ ಮಾಡಬೇಕು.
ಕಾಡಾನೆ ದಾಳಿಗೆ ಮೂವರ ಬಲಿ: ಮಲೆನಾಡಿಗರಿಗೆ ಸುಳ್ಳು ಹೇಳಿದ್ರಾ ಸಿಎಂ ಸಿದ್ದರಾಮಯ್ಯ?
ಜಹೀರಾಬಾದ ನಲ್ಲಿ ನಮ್ಮ ಬೀದರ್ ಜನತೆ ಹೆಚ್ಚರುವ ಕಾರಣ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅನ್ಯಾಯ ಗೊತ್ತಿರುತ್ತದೆ. ಹೀಗಾಗಿ ಕರ್ನಾಟಕದ ಬೀದರ್ ನವರು ಬಿಜೆಪಿ ಬೆನ್ನಿಗೆ ನಿಲ್ಲಬೇಕು. ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು. ಬಿಜೆಪಿ ಅಭ್ಯರ್ಥಿ ರಾಮಚಂದ್ರ ರಾಜ ನರಸಿಂಹ ಅವರಿಗೆ ಗೆಲ್ಲಿಸಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಎಸ್ ಆರ್ ವಿಶ್ವನಾಥ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಶಾಸಕ ಪ್ರಭು ಚವ್ಹಾಣ, ರತ್ನಭ್ರಭಾ ಮುಖಂಡರಾದ ಬಾಬು ವಾಲಿ, ಗುರುನಾಥ ಕೊಳ್ಳೂರ್, ಬಸವರಾಜ ಆರ್ಯ, ಪದ್ಮಾಕರ ಪಾಟೀಲ್, ಹಣಮಂತಪ್ಪ ಮೈಲಾರೆ, ನಾಗಭೂಷಣ ಕಮಠಾಣಾ, ಶಿವಕುಮಾರ ಸ್ವಾಮಿ, ಜಹೀರಾಬಾದ ಮುಖಂಡರಾದ ನರೇಂದ್ರ ರೆಡ್ಡಿ, ಜಗನ್ನಾಥ ನೌಬಾದೆ ಜನಾರ್ಧನರೆಡ್ಡಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.