ಮಾಧ್ಯಮಗಳನ್ನು, ಕಾಂಗ್ರೆಸ್ ಪರವಾಗಿದ್ದವರಿಗೆ ಹೆದರಿಸಿ, ಬೆದರಿಸುತ್ತಿರುವ ಬಿಜೆಪಿಯವರು ಏನೇ ಮಾಡಲಿ, 141 ಕ್ಷೇತ್ರ ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಇದನ್ನು ನೀವು ಬರೆದಿಟ್ಟುಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ದಾವಣಗೆರೆ (ಮೇ.6) : ಮಾಧ್ಯಮಗಳನ್ನು, ಕಾಂಗ್ರೆಸ್ ಪರವಾಗಿದ್ದವರಿಗೆ ಹೆದರಿಸಿ, ಬೆದರಿಸುತ್ತಿರುವ ಬಿಜೆಪಿಯವರು ಏನೇ ಮಾಡಲಿ, 141 ಕ್ಷೇತ್ರ ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಇದನ್ನು ನೀವು ಬರೆದಿಟ್ಟುಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಹೊನ್ನಾಳಿ ಪಟ್ಟಣದ ಹೆಲಿಪ್ಯಾಡ್‌ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸುಖಾಸುಮ್ಮನೇ ನಕಲಿ ದಾಳಿ ಮಾಡಿ, ಏನೂ ಕೆಲಸ ಆಗದಂತೆ ಮಾಡುತ್ತಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಬಿಜೆಪಿಯವರು ಏನೇ ಮಾಡಲಿ, 140ಕ್ಕೂ ಹೆಚ್ಚು ಕ್ಷೇತ್ರ ಗೆದ್ದು ನಮ್ಮ ಪಕ್ಷವೇ ಸರ್ಕಾರ ರಚನೆಯನ್ನೂ ಮಾಡಲಿದೆ ಎಂದು ತಿಳಿಸಿದರು.
ರಾಜ್ಯ ವಿಧಾನಸಭೆ ಚುನಾವಣೆ ಗೆಲ್ಲಲು ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಮಣೆ..?
ಯಾವುದೇ ತೊಂದರೆ ಮಾಡಿಲ್ಲ:
ನರೇಂದ್ರ ಮೋದಿ ರೋಡ್ ಶೋ(Narendra Modi road show) ಗೆ ನಾವು ಯಾವುದೇ ತೊಂದರೆ ಮಾಡುವುದಿಲ್ಲ. ಚುನಾವಣೆಯಲ್ಲಿ ಬಿಜೆಪಿ ಸೋಲು ನಿಶ್ಚಿತವೆಂಬುದು ಗೊತ್ತಾಗಿದೆ. ಅದಕ್ಕಾಗಿಯೇ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಮೋದಿ ರೋಡ್ ಶೋ ವೇಳೆ ಕಾಂಗ್ರೆಸ್‌ನವರು ಆಂಬ್ಯುಲೆನ್ಸ್ ತಂದಿದ್ದಾರೆಂದರೆ ಏನರ್ಥ? ಹಾಗೊಂದು ವೇಳೆ ಅನುಮಾನವಿದ್ದರೆ, ಮಾಹಿತಿ ಪಡೆದು, ಆಂಬ್ಯುಲೆನ್ಸ್ ತಂದವನ ಬಂಧಿಸಲಿ. ಪ್ರಿಯಾಂಕಾ ಗಾಂಧಿಗೆ ಒಂದೇ ರೋಡ್ ನೀಡಿದ್ದಾರೆ. ಮೋದಿಗೆ ಹೋಗೋಕೆ, ನಿಲ್ಲೋಕೆ ಎರಡೂ ರಸ್ತೆ ಕೊಟ್ಟಿದ್ದಾರೆ. ರೋಡ್ ಶೋ ವೇಳೆ ಆಂಬ್ಯುಲೆನ್ಸ್ ತರುವಂತಹ ನೀಚ ಕೆಲಸ ನಾವು ಮಾಡುವುದಿಲ್ಲ. ಬಿಜೆಪಿಯವರು ಬೇಕಿದ್ದರೆ ರಸ್ತೆಯಲ್ಲೇ ಮಲಗಲಿ, ಉರುಳು ಸೇವೆ ಮಾಡಲಿ. ನಾವು ಯಾವುದೇ ತೊಂದರೆ ಮಾಡಿಲ್ಲ, ಮಾಡುವುದೂ ಇಲ್ಲ. ಡಬಲ್ ರೋಡ್‌ನಲ್ಲಿ ಒಂದು ಕಡೆ ಮೋದಿ ಓಡಾಡಲು ಜಾಗ ನೀಡುತ್ತಿದ್ದಾರೆ ಎಂದು ಕುಟುಕಿದರು.
ಗೋವಾದಲ್ಲಿ ಶ್ರೀರಾಮಸೇನೆಗೆ ಅವಕಾಶವೇ ನೀಡಿಲ್ಲ
ನೆರೆಯ ಗೋವಾದಲ್ಲಿ ಶ್ರೀರಾಮಸೇನೆ(Srirama sene)ಯನ್ನು ಆರಂಭಿಸಲು ಅಲ್ಲಿ ಬಿಜೆಪಿ ಸರ್ಕಾರವಿದ್ದರೂ ಅವಕಾಶ ನೀಡಿಲ್ಲ. ಅದೇ ಬಿಜೆಪಿಯವರು ಇವತ್ತು ಹನುಮಾನ್ ಚಾಲೀಸಾ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಲೇವಡಿ ಮಾಡಿದರು.
ಶ್ರೀರಾಮಸೇನೆಯನ್ನು ಗೋವಾದಲ್ಲಿ ಆರಂಭಿಸಲು ಬಿಜೆಪಿ ಸರ್ಕಾರವೇ ಅವಕಾಶ ನೀಡದೇ ಇದ್ದಾಗ ಶೋಭಕ್ಕ, ನರೇಂದ್ರ ಮೋದಿ ಎಲ್ಲಿದ್ದರು? ನೀವು ಅಮಾಯಕರನ್ನು ಹಾಳು ಮಾಡಿ, ದೇಶ ಲೂಟಿ ಹೊಡೆದು, ಹಾಳು ಮಾಡಿದ್ದೀರಿ. ನಿಮ್ಮ ಪಕ್ಷವನ್ನು ಬೆಳೆಸಿಕೊಳ್ಳಿ. ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಅನಾವಶ್ಯಕವಾಗಿ ಅಮಾಯಕರ ಜೀವಗಳನ್ನು ಬಲಿ ಕೊಡಬೇಡಿ ಎಂದು ಸಲಹೆ ನೀಡಿದರು. ಬಜರಂಗ ದಳ ಹೆಸರು ಹೇಳಿ, ದೇಶ ಲೂಟಿ ಹೊಡೆದಿದ್ದೀರಿ. ಮೋದಿಯವರು ಪ್ರಚಾರ ಸಭೆಗಳಲ್ಲಿ ಹನುಮಾನ್ ಎಂಬುದಾಗಿ ಹೇಳುತ್ತಿದ್ದಾರೆ. ಹನುಮಾನ್ ಬದಲಿಗೆ ತಮ್ಮ ಹೆಸರನ್ನು ನರೇಂದ್ರ ಅಂತಾ ಹೇಳಿಕೊಳ್ಳಲಿ, ನರೇಂದ್ರ ಹೆಸರು ದೇವರ ಹೆಸರಲ್ಲವಾ? ನಿಮ್ಮ ಹೆಸರನ್ನು ಹೇಳಿಕೊಳ್ಳಲಿ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಗೆದ್ದೇ ಗೆಲ್ತೀವಿ ಎಂದ ಅಮಿತ್ ಶಾ, ಜೆಡಿಎಸ್‌ಗೂ ನೀಡಿದ್ರು ಸಂದೇಶ!
ಡಿಕೆಶಿ ಹೆಲಿಕಾಪ್ಟರ್ ತಪಾಸಣೆ
ಹೊನ್ನಾಳಿಗೆ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ ಪರ ಪ್ರಚಾರಕ್ಕೆಂದು ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರ(DK Shivakumar) ಹೆಲಿಕಾಪ್ಟರ್‌ನ್ನು ಚುನಾವಣಾಧಿಕಾರಿಗಳು ಪರಿಶೀಲಿಸಿದರು. ಹೊನ್ನಾಳಿ ತಾಲೂಕು ಕಡದಕಟ್ಟೆಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ತಪಾಸಣೆ ಮಾಡಲಾಯಿತು. ಕಾಪ್ಟರ್‌ನಲ್ಲಿದ್ದ ಬ್ಯಾಗ್‌ಗಳನ್ನು ಕೆಳಗಿಳಿಸಿ, ಪರಿಶೀಲನೆ ಮಾಡಲಾಯಿತು.