ನಾರಾಯಣಗುರು ನಿಗಮ ಸ್ಥಾಪನೆ ಬಿಜೆಪಿಯ ಚುನಾವಣಾ ಗಿಮಿಕ್‌: ಸೊರಕೆ ಆರೋಪ

By Kannadaprabha NewsFirst Published Jan 4, 2023, 2:21 PM IST
Highlights

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಿಲ್ಲವ ಸಹಿತ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿ, ಈಗ ಮತ್ತೆ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಚುನಾವಣೆಗೆ ಸಿದ್ಧವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಆರೋಪಿಸಿದ್ದಾರೆ.

ಉಡುಪಿ (ಜ.4) : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಿಲ್ಲವ ಸಹಿತ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿ, ಈಗ ಮತ್ತೆ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಚುನಾವಣೆಗೆ ಸಿದ್ಧವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಆರೋಪಿಸಿದ್ದಾರೆ.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇತ್ತೀಚೆಗೆ ಬ್ರಹ್ಮಾವರದಲ್ಲಿ ನಡೆದ ಬಿಲ್ಲವರ ಸಮಾವೇಶದಲ್ಲಿ ಬಿಜೆಪಿ(bjp)ಯ ಸಚಿವರು, ಶಾಸಕರು, ಸಂಸದರು ಭಾಗವಹಿಸಿದ್ದರು. ಅಲ್ಲಿ ಅವರಿಗೆ ನಾರಾಯಣಗುರು ಅಭಿವೃದ್ಧಿ ನಿಗಮ(Narayanguru Development Corporation), ಅದರ ಮೂಲಕ ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ, ಬಿಲ್ಲವ ಸಮದಾಯ(Billava community)ದ ಮೀಸಲಾತಿ ಪ್ರವರ್ಗ ಬದಲಾವಣೆ, ವಿಧಾನ ಸೌಧ(Vidhana soudha)ದ ಮುಂದೆ ನಾರಾಯಣ ಗುರುಗಳ ಪ್ರತಿಮೆ ಸ್ಥಾಪನೆ ಮುಂತಾದ ಬೇಡಿಕೆಗಳನ್ನು ಸಲ್ಲಿಸಲಾಗಿತ್ತು, ಸರ್ಕಾರ ಇವುಗಳಲ್ಲಿ ಒಂದನ್ನೂ ಈಡೇರಿಸಿಲ್ಲ ಎಂದವರು ಆರೋಪಿಸಿದರು.

ಬಿಲ್ಲವರ 3 ಬೇಡಿಕೆ ಈಡೇರಿಸಿದರೆ ಪಾದಯಾತ್ರೆ ವಾಪಸ್‌: ಪ್ರಣವಾನಂದ ಶ್ರೀ

ಬಿಜೆಪಿ ಸರ್ಕಾರ(BJP govt) ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ರದ್ದು ಮಾಡಿತು. ಪಠ್ಯದಿಂದ ನಾರಾಯಣಗುರುಗಳ ಪಾಠವನ್ನು ಕೈಬಿಟ್ಟಿತು. ಈಗ ಸರ್ಕಾರ ಚುನಾವಣೆಯ ಹಿನ್ನೆಲೆಯಲ್ಲಿ ಬಿಲ್ಲವರ ಮತ ಗಳಿಕೆಗಾಗಿ ನಾರಾಯಣ ಗುರು ನಿಗಮ ಆರಂಭಿಸುವುದಕ್ಕೆ ಸಿದ್ಧವಾಗುತ್ತಿದೆ. ಸರ್ಕಾರಕ್ಕೆ ಕೇವಲ 3 ತಿಂಗಳ ಅಧಿಕಾರಾವಧಿ ಇದೆ, ಈಗ ನಿಗಮ ಸ್ಥಾಪಿಸಿದರೆ ಅನುದಾನ ಇಲ್ಲದೇ ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಇದು ಕೇವಲ ಚುನಾವಣಾ ಗಿಮಿಕ್‌ ಎಂದವರು ಅಭಿಪ್ರಾಯಪಟ್ಟರು.

ನಾರಾಯಣಗುರು ಅಧ್ಯಯನ ಪೀಠ ರಚನೆ, ನಾರಾಯಗುರುಗಳ ಪಾಠವನ್ನು ಪಠ್ಯದಲ್ಲಿಅಳವಡಿಕೆ, ನಾರಾಯಣಗುರು ಜಯಂತಿಯಂದು ರಜೆ, ವಿಶ್ವಕರ್ಮ ಶಿಲ್ಪಕಲಾ ಪರಿಷತ್‌, ಜಕಣಾಚಾರಿ ಜಯಂತಿ, ವಿಶ್ವಕರ್ಮ ನಿಗಮ ಸ್ಥಾಪನೆ, ಕುಂಬಾರ ನಿಗಮ ಸ್ಥಾಪನೆ, ಮೀನುಗಾರ ಸಮುದಾಯಕ್ಕೆ ಮತ್ಸ್ಯಾಶ್ರಯ ಮನೆಗಳು ಇವೆಲ್ಲಾ ಕಾಂಗ್ರೆಸ್‌ ಸರ್ಕಾರದ ಸಾಧನೆ. ಬಿಜೆಪಿ ಇಂತಹ ಯಾವುದೇ ಸಾಧನೆ ಮಾಡಿಲ್ಲ ಎಂದವರು ಹೇಳಿದರು.

ಕರ್ನಾಟಕದ ನಾಲ್ಕು ಕಡೆ ನಾರಾಯಣಗುರು ಹೆಸರಲ್ಲಿ ಶಾಲೆ: ಸಚಿವ ಕೋಟ

ಎಸ್‌ಡಿಪಿಐ ಬಗ್ಗೆ ನಮಗೆ ಚಿಂತೆ ಇಲ್ಲ

ಕಾಪು ಕ್ಷೇತ್ರದಲ್ಲಿ ಎಸ್‌ಡಿಪಿಐಗೆ ಬಿಜೆಪಿ ಪ್ರಾಯೋಜಕತ್ವ ಇದೆ. ಈ ಮೂಲಕ ಕಾಂಗ್ರೆಸ್‌ ಮತಗಳನ್ನ ಒಡೆಯುವುದು ಬಿಜೆಪಿ ಯೋಜನೆಯಾಗಿದೆ. ಆದರೆ ಅಲ್ಪಸಂಖ್ಯಾತರಿಗೆ ಯಾವುದು ಸರಿ ಯಾವುದು ತಪ್ಪು ಎಂಬುದು ಚೆನ್ನಾಗಿ ತಿಳಿದಿದೆ. ಎನ್‌ಆರ್‌ಸಿ ಜಾರಿಗೆ ತಂದು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುತ್ತಿರುವುದು ಕಾಂಗ್ರೆಸ್‌ ಪಕ್ಷ ಅಲ್ಲ, ಆದ್ದರಿಂದ ಎಸ್‌ಡಿಪಿಐಯಿಂದ ನಮ್ಮ ಮತಗಳು ಒಡೆಯುತ್ತವೆ ಎಂಬ ಚಿಂತೆ ನಮಗೆ ಇಲ್ಲ ಎಂದು ವಿನಯಕುಮಾರ್‌ ಸೊರಕೆ ಹೇಳಿದರು.

click me!