ಚುನಾವಣೆ ಪ್ರಕ್ರಿಯೆಯಲ್ಲಿ ಎಂ. ಮಂಜುನಾಥ್ ಗೆ 8 ಮತ ಮತ್ತು ರೂಪ ರವರಿಗೆ 8 ಮತಗಳ ಸಮ ಮತ ಬಂದ ಹಿನ್ನಲೆಯಲ್ಲಿ ಲಾಟರಿ ಮೂಲಕ ಎಂ. ಮಂಜುನಾಥ್ ಅಧ್ಯಕ್ಷರಾಗಿ ಆಯ್ಕೆಯಾದರೆ ಉಪಾಧ್ಯಕ್ಷರ ಸ್ಥಾನಕ್ಕೆ ಸುನಿತಾ(8) ಮತ್ತು ಶೈಲಾ(8) ರವರಿಗೂ ಸಮ ಮತ ಬಂದ ಕಾರಣ ಲಾಟರಿ ಮಾಡಲಾಗಿ ಕಾಂಗ್ರೆಸ್ ಬೆಂಬಲಿತ ಸುನಿತಾ ಉಪಾಧ್ಯಕ್ಷರಾಗಿ ಆಯ್ಕೆ.
ಕೋಲಾರ(ಆ.12): ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ದೊಡ್ಡಶಿವಾರ ಗ್ರಾಮ ಪಂಚಾಯತಿ ಅಧ್ಯಕ್ಷ ರಾಗಿ ಬಿಜೆಪಿ ಬೆಂಬಲಿತ ಮಂಜುನಾಥ್ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸುನಿತಾರವರು ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ.
ಇಂದು(ಶನಿವಾರ) ಮಾಲೂರು ತಾಲ್ಲೂಕಿನಲ್ಲಿ 2ನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಸಬಾ ಹೋಬಳಿ ದೊಡ್ಡ ಶಿವಾರ ಗ್ರಾಮ ಪಂಚಾಯತಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಎಂ.ಮಂಜುನಾಥ್ ಮತ್ತು ಕಾಂಗ್ರೆಸ್ ಬೆಂಬಲಿತ ರೂಪ ಉಪಾಧ್ಯಕ್ಷರ ಸ್ಥಾನಕ್ಕೆ ಸುನಿತಾ ಮತ್ತು ಶೈಲಾರವರು ಸ್ಪರ್ದಿಸಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಎಂ. ಮಂಜುನಾಥ್ ಗೆ 8 ಮತ ಮತ್ತು ರೂಪ ರವರಿಗೆ 8 ಮತಗಳ ಸಮ ಮತ ಬಂದ ಹಿನ್ನಲೆಯಲ್ಲಿ ಲಾಟರಿ ಮೂಲಕ ಎಂ. ಮಂಜುನಾಥ್ ಅಧ್ಯಕ್ಷರಾಗಿ ಆಯ್ಕೆಯಾದರೆ ಉಪಾಧ್ಯಕ್ಷರ ಸ್ಥಾನಕ್ಕೆ ಸುನಿತಾ(8) ಮತ್ತು ಶೈಲಾ(8) ರವರಿಗೂ ಸಮ ಮತ ಬಂದ ಕಾರಣ ಲಾಟರಿ ಮಾಡಲಾಗಿ ಕಾಂಗ್ರೆಸ್ ಬೆಂಬಲಿತ ಸುನಿತಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
undefined
ಸದ್ಯಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ: ಸಚಿವ ಮುನಿಯಪ್ಪ
ನೂತನ ಅಧ್ಯಕ್ಷ ಎಂ ಮಂಜುನಾಥ್ ಮಾತನಾಡಿ ನಾನು ಅಧ್ಯಕ್ಷ ನಾಗಲು ಸಹಕರಿಸಿದ ಎಲ್ಲಾ ಸದ್ಯಸರು ಹಿರಿಯ ಮಾರ್ಗದರ್ಶಿಗಳಿಗೂ ಕೃತಜ್ಞತೆ ಸಲ್ಲಿಸಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ ಪಂ ಸದ್ಯಸ ರಾಮಸ್ವಾಮಿ ರೆಡ್ಡಿ ,ಮಾಜಿ ಅಧ್ಯಕ್ಷ ಕರ್ಣಕರ್ ಮಾಜಿ ಉಪಾಧ್ಯಕ್ಷ ಗೋಪಾಲ್ ಸದಸ್ಯರಾದ ಉಷಾ, ನಾರಾಯಣರೆಡ್ಡಿ ,ಬಚ್ಚೆಗೌಡ, ಶೈಲಾ, ಗೀತಾ ಬಶಿರ್ ಉನ್ನಿಸಾ,ಮುಖoಡರಾದ ಎಸ್ ಎನ್ ರಘುನಾಥ್, ವೆಂಕಟೇಶ್, ಬಾಬು, ವರದರಾಜು, ನಾರಾಯಣಸ್ವಾಮಿ, ಶ್ರೀನಿವಾಸ್ ಎಸ್ ಜೆ ಎನ್ ನಾರಾಯಣಸ್ವಾಮಿ, ಶಿವಾರ ಮಂಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.