Rajya Sabha Election: ಡಿಕೆಶಿಗೆ ತೋರಿಸಿ ಎಚ್‌.ಡಿ.ರೇವಣ್ಣ ಹಾಕಿದ ಮತ ಸಿಂಧು: ಆಯೋಗ

By Kannadaprabha NewsFirst Published Jun 11, 2022, 7:54 AM IST
Highlights

*   ಅಸಿಂಧುಗೊಳಿಸಲು ಒತ್ತಾಯಿಸಿದ್ದ ಕಾಂಗ್ರೆಸ್‌, ಬಿಜೆಪಿ
*   ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ ಕೆಲವು ನಾಯಕರು ಆಕ್ಷೇಪ 
*   ಕಾಂಗ್ರೆಸ್‌ ನಾಯಕರು ಮತ್ತು ರೇವಣ್ಣ ನಡುವೆ ಸ್ವಲ್ಪ ಮಾತಿನ ಚಕಮಕಿ 

ಬೆಂಗಳೂರು(ಜೂ.11): ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ತೋರಿಸಿ ಚಲಾಯಿಸಿದ ಮತವು ಸಿಂಧು ಎಂದು ಪರಿಗಣಿಸಿ ಚುನಾವಣಾ ಆಯೋಗವು ಆದೇಶಿಸಿದೆ.

ಶುಕ್ರವಾರ ಮತದಾನ ಪ್ರಕ್ರಿಯೆ ಆರಂಭವಾದಾಗ ರೇವಣ್ಣ ಅವರು ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತದಾನ ಮಾಡಿರುವುದನ್ನು ತಮ್ಮ ಪಕ್ಷದ ಏಜೆಂಟ್‌ ಪುಟ್ಟರಾಜು ಅವರಿಗೆ ತೋರಿಸುವುದರ ಜತೆಗೆ ಶಿವಕುಮಾರ್‌ ಅವರಿಗೂ ತೋರಿಸಿದರು. ಇದಕ್ಕೆ ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ ಕೆಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಬಿಜೆಪಿಯ ನಾಯಕರು ಸಹ ರೇವಣ್ಣ ನಡೆಗೆ ಆಕ್ಷೇಪಿಸಿದರು. ರೇವಣ್ಣ ಅವರು ತಾವು ತೋರಿಸಿಲ್ಲ, ಅವರೇ ನೋಡಿದರು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ಈ ವೇಳೆ ಕಾಂಗ್ರೆಸ್‌ ನಾಯಕರು ಮತ್ತು ರೇವಣ್ಣ ನಡುವೆ ಸ್ವಲ್ಪ ಮಾತಿನ ಚಕಮಕಿ ನಡೆಯಿತು.

Rajya Sabha Election: ಕಾಂಗ್ರೆಸ್ಸಿಗರ ಮೇಲೆ ಸಿದ್ದು, ಡಿಕೆಶಿ ಕಣ್ಣು

ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರತ್ಯೇಕವಾಗಿ ಚುನಾವಣಾ ಆಯೋಗಕ್ಕೆ ರೇವಣ್ಣ ಮತವನ್ನು ಅಸಿಂಧುಗೊಳಿಸಬೇಕು ಎಂದು ದೂರು ನೀಡಿದವು. ಈ ದೂರನ್ನು ಪರಿಶೀಲಿಸಿದ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರು ಆಯೋಗಕ್ಕೆ ಮಾಹಿತಿ ನೀಡಿದರು. ಆಯೋಗವು ಸಹ ಕೂಲಂಕಷವಾಗಿ ಪರಿಶೀಲನೆ ನಡೆಸಿ ರೇವಣ್ಣ ಮತವು ಸಿಂಧು ಎಂದು ಆದೇಶಿಸಿತು. ಬಳಿಕ ಮತ ಎಣಿಕೆ ವೇಳೆ ರೇವಣ್ಣ ಮತವನ್ನು ಪರಿಗಣಿಸಲಾಯಿತು.

click me!