ಸಿಎಂ ಆಗುವ ಅರ್ಹತೆ ಪರಮೇಶ್ವರ್‌ಗೆ ಇದೆ: ಸಚಿವ ಕೆ.ಎನ್‌.ರಾಜಣ್ಣ

By Govindaraj SFirst Published Mar 8, 2024, 12:00 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಬದಲಾವಣೆ ಮಾಡಲು ಚಿಂತನೆ ನಡೆಸಿದರೆ ಅದು ದಲಿತ ಸಿಎಂ ಆಯ್ಕೆ ಮಾಡಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪುನರುಚ್ಚರಿಸಿದ್ದಾರೆ. 
 

ತುಮಕೂರು (ಮಾ.08): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಬದಲಾವಣೆ ಮಾಡಲು ಚಿಂತನೆ ನಡೆಸಿದರೆ ಅದು ದಲಿತ ಸಿಎಂ ಆಯ್ಕೆ ಮಾಡಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪುನರುಚ್ಚರಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯ ಅವರು, ಪೂರ್ಣಾವಧಿ ಸಿಎಂ ಆಗಬೇಕು ಎನ್ನುವುದು ಬಹುಪಾಲು ಶಾಸಕರ ಅಭಿಪ್ರಾಯವಾಗಿದೆ. 

ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲು ಬಯಸಿದರೆ ದಲಿತ ಸಿಎಂ ಮಾಡಬೇಕು ಎಂದು ಒತ್ತಾಯಿಸಿದರು. ದಲಿತ ಮುಖ್ಯಮಂತ್ರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಅರ್ಹತೆಯುಳ್ಳವರಾಗಿದ್ದಾರೆ.  ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಪರಮೇಶ್ವರ್ ಅವರಿಗೆ ಇದೆ. ಅವರು ಸಿಎಂ ಆಗಬೇಕು ಎಂಬುದು ನನ್ನ ಆಭಿಲಾಷೆ ಎಂದು ಸಚಿವ ಮಹದೇವಪ್ಪ ಅವರ ಹೇಳಿಕೆಗೆ ಬೆಂಬಲ ನೀಡಿದ್ದಾರೆ. ಹಾಗೆಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಮುಖ್ಯಮಂತ್ರಿ ಆಗಬಾರದು ಎಂದೇನೂ ಇಲ್ಲ. 

ಅವರೂ ಕೂಡ ಆಗಲಿ ಎಂದು ಹೇಳಿದ ಕೆ.ಎನ್.ರಾಜಣ್ಣ, ಈ ವಿಷಯವಾಗಿ ಮಹದೇವಪ್ಪ ಅವರಿಗಿಂತ ಮೊದಲೇ ನಾನು ಪ್ರಸ್ತಾಪ ಮಾಡಿದ್ದೇನೆ. ಈಗ ಚುನಾವಣೆ ಹತ್ತಿರ ಬರುತ್ತಿರುವು ದರಿಂದ ನಾವು ಇಂತಹ ವಿಚಾರವನ್ನು ಎತ್ತುವುದು ಸೂಕ್ತವಲ್ಲ. ಹಾಗಾಗಿ ನಮಗೆ ನಾವೇ ನಿರ್ಬಂಧ ಹಾಕಿಕೊಂಡಿದ್ದೇವೆ ಎಂದು ಹೇಳಿದರು. ಅದರಲ್ಲೂ ಜಿ.ಪರಮೇಶ್ವರ್ ಅರ್ಹತೆ ಯುಳ್ಳವರು, ಸಿಎಂ ಆಗುವ ಅರ್ಹತೆ ಪರಮೇಶ್ವರಗೆ ಎಲ್ಲವೂ ಇದೆ, ಅವರು ಸಿಎಂ ಆಗಬೇಕು ಅನ್ನೊದು ನನ್ನ ಅಭಿಲಾಷೆ ಎಂದರು. ದಲಿತ ಸಿಎಂ ನಮ್ಮ ಹಕ್ಕು, ನಮ್ಮ ಹಕ್ಕು ಕೇಳುವುದರಲ್ಲಿ ಯಾರ ಆಕ್ಷೇಪ ಇರಬಾರದು.

ದೇಶದ್ರೋಹಿಗಳ ಪರ ಸಚಿವರೇ ನಿಂತಿದ್ದು ದುರ್ದೈವ: ಮಾಜಿ ಸಿಎಂ ಬೊಮ್ಮಾಯಿ

ಈಗಿನಿಂದಲೇ ದಲಿತ ಸಿಎಂ ಕೂಗು ಹೊರಹಾಕಿದ್ದರೆ ಯಾವತ್ತೋ ಒಂದು ದಿನ ಯಶಸ್ವಿಯಾಗುತ್ತದೆ ಎಂದ ಅವರು, ಬೆಳಗ್ಗೆ ಕೇಳಿದರೆ ಸಂಜೆಗೆ ದಲಿತ ಸಿಎಂ ಕೊಟ್ಟುಬಿಡು ತ್ತಾರಾ ಎಂದರು. ಅದಕ್ಕೆ ಈಗಿ‌ನಿಂದಲೇ ಬೇಡಿಕೆ ಇಡುತಿದ್ದೇವೆ. ಡಿಕೆಶಿ ಅವರ ಕೇಸ್ ವಜಾ ಆಗಿದ ತಕ್ಷಣ ನಾವು ದಲಿತ ಸಿಎಂ ಕೇಳುತಿದ್ದೇವೆ ಅನ್ನೋದು ತಪ್ಪು. ಈ ಹಿಂದೆ ಹಲವು ಬಾರಿ ಕೇಳಿದ್ದೇವೆ ಎಂದರು. ತುಮಕೂರು ಲೋಕಸಭಾ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಲ್ಲಿ ಮುದ್ದಹನುಮೇಗೌಡರಿಗೆ ಆಗಲಿದೆ ಎಂದು ನಾನು ನಂಬಿದ್ದೇನೆ. ಹಾಗೆನೇ‌ ಬಿಜೆಪಿಯಲ್ಲಿ ವಿ.ಸೋಮಣ್ಣಗೆ ಟಿಕೆಟ್ ಆಗಲಿದೆ ಎಂದರು.

click me!