"ನನ್ನ ಜತೆಗೆ ಮಾತನಾಡಬೇಡಿ" ಎಂದು ಸ್ಮೃತಿ ಇರಾನಿಗೆ ಹೇಳಿದ ಸೋನಿಯಾ ಗಾಂಧಿ..!

Published : Jul 28, 2022, 05:20 PM IST
"ನನ್ನ ಜತೆಗೆ ಮಾತನಾಡಬೇಡಿ" ಎಂದು ಸ್ಮೃತಿ ಇರಾನಿಗೆ ಹೇಳಿದ ಸೋನಿಯಾ ಗಾಂಧಿ..!

ಸಾರಾಂಶ

ಬಿಜೆಪಿಯ ಮಹಿಳಾ ಸಂಸದರು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಕೇಸರಿ ಪಕ್ಷದ ಸಂಸದರೊಂದಿಗೆ ಮಾತನಾಡಲು ಸೋನಿಯಾ ಗಾಂಧಿ ಬಂದಿದ್ದಾರೆ. ಆ ವೇಳೆ ಸ್ಮೃತಿ ಇರಾನಿ ಸೋನಿಯಾ ಗಾಂಧಿಯತ್ತ ಮಾತನಾಡಲು ಹೋದಾಗ ‘’ನನ್ನೊಂದಿಗೆ ಮಾತನಾಡಬೇಡಿ’’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. 

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು "ರಾಷ್ಟ್ರಪತ್ನಿ" ಎಂದು ಕರೆದಿದ್ದಕ್ಕಾಗಿ ಸಂಸತ್‌ನಲ್ಲಿ ಬಿಜೆಪಿಯ ಸಂಸದರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಂಸತ್‌ನಲ್ಲಿ ಘರ್ಷಣೆಯೂ ನಡೆದಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋನಿಯಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಬಿಜೆಪಿಯ ಮಹಿಳಾ ಸಂಸದರು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಕೇಸರಿ ಪಕ್ಷದ ಸಂಸದರೊಂದಿಗೆ ಮಾತನಾಡಲು ಸೋನಿಯಾ ಗಾಂಧಿ ಬಂದಿದ್ದಾರೆ. ಆ ವೇಳೆ ಸ್ಮೃತಿ ಇರಾನಿ ಸೋನಿಯಾ ಗಾಂಧಿಯತ್ತ ಮಾತನಾಡಲು ಹೋದಾಗ ‘’ನನ್ನೊಂದಿಗೆ ಮಾತನಾಡಬೇಡಿ’’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. 

ಇದನ್ನು ಓದಿ: ದ್ರೌಪದಿ ಮುರ್ಮುರನ್ನು ರಾಷ್ಟ್ರಪತ್ನಿ ಎಂದ ಕಾಂಗ್ರೆಸ್‌ ನಾಯಕ: ಸಂಸತ್‌ನಲ್ಲಿ ಬಿಜೆಪಿ ಮಹಿಳಾ ಸಂಸದರ ಪ್ರತಿಭಟನೆ

ಅಲ್ಲದೆ, ಈ ಘಟನೆ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, “ಸೋನಿಯಾ ಗಾಂಧಿ ನಮ್ಮ ಹಿರಿಯ ನಾಯಕಿ ರಮಾದೇವಿ ಬಳಿಗೆ ಬಂದಾಗ ಏನಾಗುತ್ತಿದೆ ಎಂದು ತಿಳಿಯಲು ನಮ್ಮ ಕೆಲವು ಲೋಕಸಭಾ ಸಂಸದರು ಆತಂಕಗೊಂಡರು. ಈ ವೇಳೆ ನಮ್ಮ ಸದಸ್ಯರೊಬ್ಬರು ಅವರನ್ನು ಸಂಪರ್ಕಿಸಿದರು. ಅಲ್ಲಿ ಸೋನಿಯಾ ಗಾಂಧಿ, ನೀವು ನನ್ನೊಂದಿಗೆ ಮಾತನಾಡಬೇಡಿ ಎಂದು ಹೇಳಿದರು. ಕಾಂಗ್ರೆಸ್‌ನ ಅತ್ಯುನ್ನತ ನಾಯಕರಿಂದ ಪಶ್ಚಾತ್ತಾಪ ಪಡುವ ಬದಲು ನಾವು ಹೆಚ್ಚಿನ ಆಕ್ರೋಶವನ್ನು ಕಂಡಿದ್ದೇವೆ’’ ಎಂದೂ ಸೋನಿಯಾ ಗಾಂಧಿಯನ್ನು ಕಟುವಾಗಿ ಟೀಕಿಸಿದ್ದಾರೆ.

ಸೋನಿಯಾ ಗಾಂಧಿಯನ್ನು ಸಮರ್ಥಿಸಿಕೊಂಡ ವಿಪಕ್ಷ ಸಂಸದರು
ಆದರೆ,  ಸ್ಮೃತಿ ಇರಾನಿ ಮತ್ತು ಇತರ ಬಿಜೆಪಿ ಸಂಸದರು ಸೋನಿಯಾ ಗಾಂಧಿಯನ್ನು ಕೆಣಕುತ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಆರೋಪಿಸಿದರು. 

ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ವಿರುದ್ಧ ಬಿಜೆಪಿ ಸಂಸದರ ಪ್ರತಿಭಟನೆಯ ನಡುವೆ ಲೋಕಸಭೆ ಕಲಾಪ ಮುಂದೂಡಿದ ನಂತರ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಮಾತಿನ ಚಕಮಕಿ ನಡೆಯಿತು.  ಈ ವೇಳೆ "ಸೋನಿಯಾ ಗಾಂಧಿ, ಕ್ಷಮೆಯಾಚಿಸಿ" ಎಂದು ಸ್ಮೃತಿ ಇರಾನಿ ಸದನದಲ್ಲಿ ಹೇಳಿದ್ದರು ಹಾಗೂ ಆಡಳಿತಾರೂಢ ಬಿಜೆಪಿ ಸದಸ್ಯರು ಈ ರೀತಿಯ ಫಲಕಗಳನ್ನು ಹಿಡಿದಿದ್ದರು.

 "ಸೋನಿಯಾ ಗಾಂಧಿ, ನೀವು ದ್ರೌಪದಿ ಮುರ್ಮು ಅವರಿಗೆ ಮಾಡಿರುವ ಅವಮಾನವನ್ನು ಅನುಮೋದಿಸಿದ್ದೀರಿ. ಸೋನಿಯಾ ಜೀ ಅವರು ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಮಹಿಳೆಯ ಅವಮಾನವನ್ನು ಅನುಮೋದಿಸಿದ್ದಾರೆ" ಎಂದು ಕೇಂದ್ರ ಸಚಿವರು ಹೇಳಿದರು.

ಇನ್ನು, ಸದನವನ್ನು ಮುಂದೂಡಿದ ನಂತರ, ಸೋನಿಯಾ ಗಾಂಧಿ ಅವರು ಬಿಜೆಪಿ ಸಂಸದೆ ರಮಾ ದೇವಿ ಅವರೊಂದಿಗೆ ಮಾತನಾಡಲು ಹೊರಟರು. ಈ ವೇಳೆ ಇಬ್ಬರು ಕಾಂಗ್ರೆಸ್ ಸಂಸದರು ಅವರ ಜೊತೆಗಿದ್ದರು. ಅಲ್ಲದೆ, "ಅಧೀರ್ ರಂಜನ್ ಚೌಧರಿ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ನನ್ನ ತಪ್ಪೇನು?" ಎಂದು ಸೋನಿಯಾ ಗಾಂಧಿ ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಈ ವೇಳೆ  ಸ್ಮೃತಿ ಇರಾನಿ ಅವರು ಮಧ್ಯಪ್ರವೇಶಿಸಿ, "ಮೇಡಂ, ನಾನು ನಿಮಗೆ ಸಹಾಯ ಮಾಡಬಹುದೇ? ನಾನು ನಿಮ್ಮ ಹೆಸರನ್ನು ತೆಗೆದುಕೊಂಡಿದ್ದು’’ ಎಂದು ಸೋನಿಯಾ ಗಾಂಧಿಗೆ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ  ಸೋನಿಯಾ ಗಾಂಧಿ, "ನನ್ನೊಂದಿಗೆ ಮಾತನಾಡಬೇಡಿ" ಎಂದು ತಿರುಗೇಟು ನೀಡಿದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ದ್ರೌಪದಿ ಮಹಾಭಾರತದ ರಾಷ್ಟ್ರಪತಿ: ಜುಲೈ 25ಕ್ಕೆ ಪ್ರಮಾಣ

ಇನ್ನು, ಸೋನಿಯಾರನ್ನು ಸಮರ್ಥಿಸಿಕೊಂಡ ವಿಪಕ್ಷ ಸಂಸದರು, ‘’ಸೋನಿಯಾ ಗಾಂಧಿ ಅವರು "ಸಭ್ಯ ಸಂಭಾಷಣೆ ನಡೆಸುತ್ತಿದ್ದರು". ಆದರೆ, ಈ ವೇಳೆ ಸ್ಮೃತಿ ಇರಾನಿ, ಸೋನಿಯಾಗೆ ಬೆರಳು ತೋರಿಸಿ, ನೀವು ಇಲ್ಲಿ ಈ ರೀತಿಯಾಗಿ ಆಡಬೇಡಿ, ಇದು ನಿಮ್ಮ ಪಕ್ಷದ ಕಚೇರಿಯಲ್ಲ’’ ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಸಮರ್ಥೀಸಿಕೊಂಡರು.

ಹಾಗೂ, ಟಿಎಂಸಿ ಸಂಸದೆಯರಾದ ಮಹುವಾ ಮೊಹಿತ್ರಾ, ಅಪರೂಪ ಪೊಡ್ಡಾರ್‌ ಹಾಗೂ ಎನ್‌ಸಿಪಿಯ ಸುಪ್ರಿಯಾ ಸುಳೆ ಸೋನಿಯಾ ಗಾಂಧಿಯನ್ನು ಬಿಜೆಪಿಯ ಸಂಸದರಿಂದ ದೂರ ಕರೆದುಕೊಂಡು ಹೋಗಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಅಧ್ಯಕ್ಷೆಯನ್ನು ಹಲವು ವಿಪಕ್ಷ ಸಂಸದರು ಸಮರ್ಥಿಸಿಕೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌