ಬಿಜೆಪಿಯ ಗೊಂದಲಕ್ಕೂ, ಕಾಂಗ್ರೆಸ್‌ಗೂ ಹೋಲಿಕೆ‌ ಮಾಡಬೇಡಿ: ಸಚಿವ ದಿನೇಶ್ ಗುಂಡೂರಾವ್

Published : Jan 24, 2025, 02:08 PM IST
ಬಿಜೆಪಿಯ ಗೊಂದಲಕ್ಕೂ, ಕಾಂಗ್ರೆಸ್‌ಗೂ ಹೋಲಿಕೆ‌ ಮಾಡಬೇಡಿ: ಸಚಿವ ದಿನೇಶ್ ಗುಂಡೂರಾವ್

ಸಾರಾಂಶ

ಬಿಜೆಪಿಯ ಗೊಂದಲಕ್ಕೂ, ಕಾಂಗ್ರೆಸ್‌ಗೂ ಹೋಲಿಕೆ‌ ಮಾಡಬೇಡಿ. ನಾವು ಪವರ್‌ನಲ್ಲಿದ್ದೇವೆ. ನಮ್ಮಲ್ಲಿ ಪವರ್ ಶೇರಿಂಗ್ ಮುಖ್ಯ ಅಲ್ಲ, ಜನಪರ ಆಡಳಿತ ನೀಡುವುದು ಮುಖ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.

ರಾಮನಗರ (ಜ.24): ಬಿಜೆಪಿಯ ಗೊಂದಲಕ್ಕೂ, ಕಾಂಗ್ರೆಸ್‌ಗೂ ಹೋಲಿಕೆ‌ ಮಾಡಬೇಡಿ. ನಾವು ಪವರ್‌ನಲ್ಲಿದ್ದೇವೆ. ನಮ್ಮಲ್ಲಿ ಪವರ್ ಶೇರಿಂಗ್ ಮುಖ್ಯ ಅಲ್ಲ, ಜನಪರ ಆಡಳಿತ ನೀಡುವುದು ಮುಖ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲೂ ನಮ್ಮಲ್ಲಿ ಬಣ ರಾಜಕೀಯ ಅಂತ ಚರ್ಚೆ ಮಾಡಿದರು. ಆದರೆ, ಚುನಾವಣೆಯಲ್ಲಿ ಒಟ್ಟಾಗಿ‌ ಕೆಲಸ ಮಾಡಿ ಕಾಂಗ್ರೆಸ್ ಪಕ್ಷ ಬಹುಮತ ತೆಗೆದುಕೊಂಡಿತು. ನಾವು ಈಗಲೂ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ವಿಚಾರವನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಈ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ. ಏನೇ ಸಮಸ್ಯೆ ಇದ್ದರೂ ಬಗೆಹರಿಸಿಕೊಂಡು ಒಟ್ಟಾಗಿ ಹೋಗುತ್ತೇವೆ. ಬಿಜೆಪಿಯ ಗೊಂದಲಕ್ಕೂ, ನಮಗೂ ಹೋಲಿಕೆ‌ ಮಾಡಬೇಡಿ. ಈಗ ಬಿಜೆಪಿಯವರ ಪರಿಸ್ಥಿತಿ ನೋಡಿ ಯಾವ ಮಟ್ಟಕ್ಕೆ ಹೋಗಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ. ಎಲ್ಲರು ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಬ್ರಾಹ್ಮಣರು ಕಾಂಗ್ರೆಸ್ಸನ್ನು ದೂರ ಮಾಡಬಾರದು: ಸಚಿವ ದಿನೇಶ್ ಗುಂಡೂರಾವ್

ಮುಡಾ ಕೇಸ್ ನಲ್ಲಿ ಮುಖ್ಯಮಂತ್ರಿ ಕುಟುಂಬಕ್ಕೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಸಚಿವರು, ತಪ್ಪು ಮಾಡಿದ್ದರೆ ತಾನೆ ತಪ್ಪು ಅಂತ ಹೇಳುವುದು ಎಂದು ಹೇಳಿದರು. ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧವೂ ಷಡ್ಯಂತ್ರ ಮಾಡಿದರು. ಐಟಿ, ಇಡಿ ಅಧಿಕಾರಿಗಳನ್ನು ಬಿಜೆಪಿ ಪಕ್ಷ ಕೈಗೊಂಬೆಗಳನ್ನಾಗಿ ಮಾಡಿಕೊಂಡಿದೆ. ವಿರೋಧಿಗಳನ್ನು ಮುಗಿಸುವ ಹುನ್ನಾರ ಮಾಡುತ್ತಿದ್ದು, ಇದಕ್ಕೆಲ್ಲ ತಕ್ಕ ಉತ್ತರ ಕೊಟ್ಟು ಗಟ್ಟಿಯಾಗಿ ನಿಲ್ಲುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಈ ವೇಳೆ ಶಾಸಕ ಇಕ್ಬಾಲ್ ಹುಸೇನ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಬಿಡದಿ ಪುರಸಭೆ ಸದಸ್ಯ ಸಿ.ಉಮೇಶ್ , ಶ್ರೀನಿವಾಸ್ , ಬಿಂದ್ಯಾ, ಕಾಂಗ್ರೆಸ್ ಮುಖಂಡ ಬೆಟ್ಟಸ್ವಾಮಿ ಇತರರಿದ್ದರು.

ಮುಖ್ಯಮಂತ್ರಿಗಳು ತಪ್ಪು ಮಾಡಿಲ್ಲ: ನಮ್ಮ ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ಮುಡಾ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಈಗಾಗಲೇ ಇಡಿ ತನಿಖೆ ಮಾಡುತ್ತಿದೆ. ಮೊನ್ನೆ 300 ಕೋಟಿ ಅಂತ ಹೇಳಿದರು. ಮುಖ್ಯಮಂತ್ರಿಗಳಿಗೂ ಅದಕ್ಕೂ ಸಂಬಂಧ ಇದೆಯಾ. ಎಲ್ಲದಕ್ಕೂ ಮುಖ್ಯಮಂತ್ರಿ ಹೆಸರು ತಳುಕು ಹಾಕುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಹೆಸರನ್ನು ಹಾಳು ಮಾಡಲು ಷಡ್ಯಂತ್ರ ಮಾಡುತ್ತಿರುವ ಕೇಂದ್ರ ಬಿಜೆಪಿ, ತನಿಖಾ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದೆ. ಇದರಲ್ಲಿ ಸಿಎಂ ಹೆಸರು ಹೇಳಿ ಅಂತ ಮುಡಾ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಗರಿಂದ ಬೆಂಕಿ ಹಚ್ಚುವ ಕೆಲಸ: ಸಚಿವ ದಿನೇಶ್‌ ಗುಂಡೂರಾವ್‌

ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರ ವೀಕ್ಷಿಸಿದ್ದೇವೆ. ಅದನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಚಿಂತನೆ ಮಾಡಲಾಗಿದೆ. ಇನ್ನು ಜಿಲ್ಲಾಸ್ಪತ್ರೆಯಲ್ಲಿ ಏನೆಲ್ಲಾ ಸಮಸ್ಯೆಗಳಿವೆಯೋ ಅದನ್ನು ಸರಿಪಡಿಸುತ್ತೇವೆ. ಸಿಟಿ ಸ್ಕ್ಯಾನ್ ಸಮಸ್ಯೆ ಪರಿಹರಿಸುಲು 30 ಲಕ್ಷ ಅನುದಾನ ಕೊಟ್ಟಿದ್ದೇನೆ. ಇನ್ನೆರಡು ತಿಂಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಕೊಡುತ್ತೇವೆ. ವೈದ್ಯರು ಸಿಬ್ಬಂದಿ ಕೊರತೆ ನೀಗಿಸುತ್ತೇವೆ.
-ದಿನೇಶ್ ಗುಂಡೂರಾವ್ , ಆರೋಗ್ಯ ಸಚಿವರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌