
ಲಕ್ಷ್ಮೇಶ್ವರ(ಜ.24): ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಕುಚುಕು ಗೆಳೆಯರು. ಆತ್ಮೀಯ ಗೆಳೆಯರ ಮಧ್ಯೆ ಕೆಲವು ವೇಳೆ ಭಿನ್ನಾಭಿಪ್ರಾಯ ಬರುತ್ತವೆ. ಅಂತಿಮವಾಗಿ ಅವರ ಗೆಳೆತನ ಗೆಲ್ಲುತ್ತದೆ. ಇಬ್ಬರು ಒಂದಾಗ್ತಾರೆ, ನೀವೇ ನೋಡ್ತಿರಿ. ಬರುವ ದಿನಗಳಲ್ಲಿ ಇಬ್ಬರು ಒಂದಾಗಿ ಒಗ್ಗಟ್ಟಿನಿಂದ ಬಿಜೆಪಿ ಕಟ್ಟುವ ಕೆಲಸ ಮಾಡುತ್ತಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶ್ರೀರಾಮುಲು ಅಸಮಾಧಾನ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ಪಕ್ಷವಾಗಿದೆ. ನಮ್ಮಲ್ಲಿರುವ ಜಗಳ ಅಣ್ಣ-ತಮ್ಮರ ಜಗಳ. ಹಿರಿಯರು ಕೂತು ಬಗೆಹರಿಸುವ ವಿಶ್ವಾಸ ಇದೆ. ಮುಂಬರುವ ಚುನಾವಣೆ ಪ್ರಕ್ರಿಯೆ ಪೂರ್ವದಲ್ಲಿ ಎಲ್ಲವನ್ನೂ ಬಗೆಹರಿಸುವ ಪ್ರಯತ್ನ ಆಗು ತ್ತಿವೆ. ಅಧ್ಯಕ್ಷರ ಚುನಾವಣೆ ಸುಗಮವಾಗಿ ಜರಗುತ್ತದೆ ಎಂದರು.
ಬೀದಿಯಲ್ಲಿದ್ದವ ನಾನಲ್ಲ, ಜನಾರ್ದನ ರೆಡ್ಡಿಯಿಂದ ನನಗೆ ಏನೂ ಲಾಭ ಆಗಿಲ್ಲ: ರಾಮುಲು
ರಾಜ್ಯ ಬಿಜೆಪಿಯ ಭಿನ್ನಮತ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಸಣ್ಣಪುಟ್ಟ ಮನಸ್ತಾಪ ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ. ನಾವೆಲ್ಲರೂ ಕೂಡಿ ಮತ್ತೆ ಬಿಜೆಪಿ ಕಟ್ಟುವಲ್ಲಿ ಶ್ರಮಿಸುತ್ತೇವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ಪಕ್ಷವಾಗಿದೆ. ನಮ್ಮಲ್ಲಿರುವ ಜಗಳ ಅಣ್ಣ-ತಮ್ಮರ ಜಗಳ. ಹಿರಿಯರು ಕೂತು ಬಗೆಹರಿಸುವ ವಿಶ್ವಾಸ ಇದೆ. ಮುಂಬರುವ ಚುನಾವಣೆ ಪ್ರಕ್ರಿಯೆ ಪೂರ್ವದಲ್ಲಿ ಎಲ್ಲವನ್ನೂ ಬಗೆಹರಿಸುವ ಪ್ರಯತ್ನ ಆಗುತ್ತಿವೆ. ಅಧ್ಯಕ್ಷರ ಚುನಾವಣೆ ಸುಗಮವಾಗಿ ಜರಗುತ್ತದೆ. ಚುನಾವಣೆಯ ನಂತರ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.
ಜನಾರ್ದನ್ ರೆಡ್ಡಿ ವರ್ಸಸ್ ಶ್ರೀರಾಮುಲು ಫೈಟ್ ಕುರಿತು ಪ್ರಶ್ನಿಸಿದಾಗ, ರಾಮುಲು ಹಾಗೂ ಜನಾರ್ದನ ರೆಡ್ಡಿ ಕುಚಿಕು ಗೆಳೆಯರು. ಆತ್ಮೀಯ ಗೆಳೆಯರ ಮಧ್ಯೆ ಕೆಲವು ವೇಳೆ ಭಿನ್ನಾಭಿಪ್ರಾಯ ಬರುತ್ತವೆ. ಅಂತಿಮವಾಗಿ ಅವರ ಗೆಳೆತನ ಗೆಲ್ಲುತ್ತದೆ. ಇಬ್ಬರು ಒಂದಾಗ್ತಾರೆ, ನೀವೆ ನೋಡ್ತಿರಿ. ಇಬ್ಬರು ಒಂದಾಗಿ ಬರುವ ದಿನಗಳಲ್ಲಿ ಒಗ್ಗಟ್ಟಿನಿಂದ ಬಿಜೆಪಿ ಕಟ್ಟುವ ಕೆಲಸ ಮಾಡುತ್ತಾರೆ ಎಂದರು.
ಶ್ರೀರಾಮುಲು ಹಾಗೂ ಜನಾರ್ದನ್ ರೆಡ್ಡಿ ಪ್ರತ್ಯೇಕ ಸುದ್ದಿಗೋಷ್ಠಿ ವಿಚಾರಕ್ಕೆ ಉತ್ತರಿಸಿದ ಅವರು, ಈ ಕುರಿತು ಶ್ರೀರಾಮುಲು ಬಳಿ ನಾನು ಮಾತನಾಡಿದ್ದೇನೆ. ಜನಾರ್ದನ ರೆಡ್ಡಿ ಬಳಿಯೂ ಮಾತನಾಡಿ ಎಲ್ಲವನ್ನೂ ಸರಿ ಮಾಡುವ ವಿಶ್ವಾಸವಿದೆ. ರಾಜ್ಯ ರಾಜಕಾರಣದ ಬಗ್ಗೆ ಬಹಿರಂಗ ಚರ್ಚೆ ಮಾಡಲ್ಲ ಎಂದು ಹೇಳಿದರು.
ರೌಡಿ ರಾಮುಲುನ ರಕ್ಷಣೆ ಮಾಡಿದ್ದೇ ನಾನು ಎಸಗಿದ ದ್ರೋಹ: ರೆಡ್ಡಿ ಸಿಡಿಲು
ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಎಂಬ ವಿಷಯದ ಕುರಿತು ಮಾತನಾಡಿದ ಅವರು, ನಮ್ಮ ಬಿಜೆಪಿ ಮನೆ ಬಾಗಿಲು ಒಂದೇ ಇದೆ. ಬಿಜೆಪಿ ಒಂದೇ ಮನೆ, ಬಾಗಿಲು ಒಂದೇ ಇದೆ. ಈ ಬಗ್ಗೆ ಯಾರೂ ವಿಚಾರ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಮುಂದೆ ಹೋಗುವ ಸಂಕಲ್ಪ ಮಾಡಿದ್ದೇವೆ. ಅದಕ್ಕೆ ಬೇಕಾದ ಎಲ್ಲ ಕಾರ್ಯ ರೂಪಿಸುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್, ಸುನೀಲ ಮಹಾಂತಶೆಟ್ಟರ್, ಶಕ್ತಿ ಕತ್ತಿ. ಜಾನು ಲಮಾಣಿ, ಅನಿಲ ಮುಳಗುಂದ, ನವೀನ ಬೆಳ್ಳಟ್ಟಿ, ಭೀಮಣ್ಣ ಬಂಗಾಡಿ. ಕುಬೇರಪ್ಪ ಮಹಾಂತಶೆಟ್ಟರ್ ಸೇರಿದಂತೆ ಅನೇಕರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.