'ಸಿದ್ದರಾಮಯ್ಯರನ್ನು ಮಾಜಿ ಸಿಎಂ ಅಂತ ಕರೆದ್ರೆ ಅಪಮಾನ ಮಾಡಿದಂತೆ'

By Suvarna News  |  First Published Apr 4, 2021, 2:25 PM IST

ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಅಂತ ಕರೆಯಬೇಡಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಹಾಗಾದ್ರೆ ಏನಂತ ಕರೆಯಬೇಕು?


ಬೆಂಗಳೂರು, (ಏ.04): ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಎಂದು ಕರೆಯಬೇಡಿ.ಇದು ಅವರಿಗೆ ಅಪಮಾನ ಮಾಡಿದಂತೆ ಆಗಲಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ಇಮದು (ಭಾನುವಾರ) ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದರು. ಬದಲಾದ ಸಂದರ್ಭದಲ್ಲಿ ಅವರು ಮತ್ತೆ ಸಿಎಂ ಆಗಲು ಸಾಧ್ಯವಾಗಲಿಲ್ಲ. ಜನ ಇಷ್ಟ ಪಟ್ಟರೆ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದರು.

Tap to resize

Latest Videos

undefined

'ಸಿದ್ದು ವ್ಯಕ್ತಿತ್ವ ಹೇಗಿದೆ ಅಂತ ನೀವೇ ತೂಕಮಾಡಿ, ಅವರೆಂತ ನಾಯಕ ಅನ್ನೋದು ನಿಮಗೇ ಗೊತ್ತಾಗುತ್ತೆ'

ಜನರ ಕಷ್ಟಕ್ಕೆ ಅವರು ಸ್ಪಂದಿಸಿದ್ದಾಗ, ಅವರು ಹತ್ತಿರ ಆಗುತ್ತಾರೆ. ಮುಂದೆ ಮತ್ತೆ ಒಳ್ಳೆಯದಾಗಬಹುದು. ಮಾಜಿ ಮುಖ್ಯಮಂತ್ರಿ ಎಂದು ಅವರನ್ನ ಕರೆಯಬೇಡಿ ಎಂದು ಮನವಿ ಮಾಡುತ್ತೇನೆ. ಅವರನ್ನ ವಿರೋಧ ಪಕ್ಷದ ನಾಯಕರು ಅಂತ ಕರೆಯಿರಿ ಎಂದು ಹೇಳಿದರು.

click me!