ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ; 'ಇದು ಭಾಗ್ಯ ಇದು ಭಾಗ್ಯವಯ್ಯ' ದಾಸರ ಕೀರ್ತನೆ ಹೇಳಿದ ಡಿಕೆಶಿ

Published : Apr 24, 2023, 09:59 PM ISTUpdated : Apr 24, 2023, 10:06 PM IST
ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ; 'ಇದು ಭಾಗ್ಯ ಇದು ಭಾಗ್ಯವಯ್ಯ' ದಾಸರ ಕೀರ್ತನೆ ಹೇಳಿದ ಡಿಕೆಶಿ

ಸಾರಾಂಶ

ದೊಡ್ಡಬಳ್ಳಾಪುರದ 8 ಮಂದಿ ಹಾಲಿ ನಗರಸಭೆ ಸದಸ್ಯರು ಪಕ್ಷ ಕಾಂಗ್ರೆಸ್ ಸೇರ್ಪಡೆ ‌ಆಗ್ತಿದ್ದಾರೆ. ನಾನು ಸ್ಥಳದಲ್ಲೇ ಮಾಡ್ಕೋಳಿ ಅಂತ ಹೇಳಿದ್ದೆ. ದೊಡ್ಡ ಅವಕಾಶ, 'ಇದು ಭಾಗ್ಯ ಇದು ಭಾಗ್ಯ' ಎಂದು ಪುರಂದರದಾಸರ ಕೀರ್ತನೆ ಹೇಳುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಬೆಂಗಳೂರು (ಏ.24) : ಕರ್ನಾಟಕ ವಿಧಾನಸಭಾ ಚುನಾವಣೆ ಕೆಲವೇ ದಿನ ಬಾಕಿ ಉಳಿದಿರುವ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಟಿಕೆಟ್ ವಂಚಿತರು, ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರು, ದೊಡ್ಡಬಳ್ಳಾಪುರದ 8 ಮಂದಿ ಹಾಲಿ ನಗರಸಭೆ ಸದಸ್ಯರು ಪಕ್ಷ ಕಾಂಗ್ರೆಸ್ ಸೇರ್ಪಡೆ ‌ಆಗ್ತಿದ್ದಾರೆ. ನಾನು ಸ್ಥಳದಲ್ಲೇ ಮಾಡ್ಕೋಳಿ ಅಂತ ಹೇಳಿದ್ದೆ. ದೊಡ್ಡ ಅವಕಾಶ, 'ಇದು ಭಾಗ್ಯ ಇದು ಭಾಗ್ಯ' ಎಂದು ಪುರಂದರದಾಸರ ಕೀರ್ತನೆ ಹೇಳುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಬೈಂದೂರಿನಲ್ಲಿ ಒಂದೂವರೆ ಸಾವಿರ ಜನ ಸೇರ್ಪಡೆ ಆಗಿದ್ದಾರೆ. ಶೆಟ್ಟರ್(Jagadish shettar), ಸವದಿಯಂ(Laxman savadi)ತವರು ಪಕ್ಷ ಸೇರ್ಪಡೆ ಆಗಿದ್ದಾರೆ. ಸ್ವಾತಂತ್ರ್ಯ ತಂದು ಕೊಟ್ಟ ಬಾವುಟವನ್ನ ಹಾಕಿಕೊಳ್ಳೋದೆ ಭಾಗ್ಯ ಎಂದರು.

ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ, ದಾನ ಮಾಡುವ ಕೈ ಅಧಿಕಾರದಲ್ಲಿದ್ರೆ ಚೆಂದ : ಡಿಕೆಶಿ

ನಾನು 3-4 ದಿನಗಳಿಂದ ಪ್ರವಾಸ  ಮಾಡುತ್ತಿದ್ದೇನೆ ಹಳ್ಳಿಗಳಲ್ಲಿ ಸಾಕಷ್ಟು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ಚಿಕ್ಕಮಗಳೂರು ನಲ್ಲಿ 5ಕ್ಕೆ 5 ಸೀಟು ಗೆಲ್ಲುತ್ತೇವೆ. ಮಂಗಳೂರಿನಲ್ಲಿ ಸಹ ಈ ಬಾರಿ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ರಾಜ್ಯದ ಹೊರಗಡೆ ಇರುವ ಮತದಾರರು ಕರ್ನಾಟಕಕ್ಕೆ ಒಂದೊಳ್ಳೆ ಹೆಸರು ತಂದುಕೊಟ್ಟಿದ್ದಿರಿ. ನೀವೂ ರಾಜ್ಯಕ್ಕೆ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದೀರಿ. ನೀವು ಎಲ್ಲರೂ ಬಂದು ಮೇ 10 ರಂದು ಮತ ಚಲಾಯಿಸಬೇಕು ಎಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಬೇಕು. ಇದಕ್ಕಾಗಿ ಕಾಂಗ್ರೆಸ್ NRI ಹೊಸ ಡಿಪಾರ್ಟ್ಮೆಂಟ್ ಮಾಡುತ್ತಿದ್ದೇವೆ. ಅವರು ಎಲ್ಲಾ ಮೇಲ್ವಿಚಾರಣೆಯನ್ನ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಪಂಚಮಸಾಲಿ ಸಮುದಾಯ(Panchamasali community reservation)  2ಎ ಮೀಸಲಾತಿ ಕೊಡ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡ್ತೇವೆ. ಯಾರಿಗೂ ತೊಂದರೆ ಕೊಡಲ್ಲ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ತೊಂದರೆ ಆಗಿದೆ ಆ ರೀತಿ ನಾವು ಮಾಡಲ್ಲ. ಒಬ್ಬರಿಗೆ ಕೊಟ್ಟು ಮತ್ತೊಬ್ಬರಿಂದ ಕಿತ್ತುಕೊಳ್ಳುವುದು ಮಾಡುವುದಿಲ್ಲ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ನಕಾರ ಎಂದ ಡಿಕೆ ಶಿವಕುಮಾರ್.(DK Shivakumar)

Karnataka election 2023: ಶೃಂಗೇರಿಯಲ್ಲಿಂದು ಡಿಕೆಶಿ ಚುನಾವಣಾ ಪ್ರಚಾರ

ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟ ಎಂಬ ಸಿದ್ದರಾಮಯ್ಯ(Siddaramaih) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹಿರಿಯರು, ಅವರಿಗೆ ಕಾಮನ್ ಸೆನ್ಸ್ ಇದೆ. ಅವರು ಕ್ಲಾರಿಪೈ ಮಾಡಿದ್ದಾರೆ. ಯಾರ ನಾಯಕತ್ವದಲ್ಲಿ ನಡೀತು ಎಂಬುದರ ಬಗ್ಗೆ ನಿಮಗೆ ಬಿಡುವೆ. ಪ್ರಿಯಾಂಕಾ ಗಾಂಧಿ ಶೃಂಗೇರಿಗೂ ಭೇಟಿ ನೀಡ್ತಿದ್ದಾರೆ. ಸೋನಿಯಾ ಗಾಂಧಿ ಆಗಮನದ ಬಗ್ಗೆ ಮುಂದೆ ತಿಳಿಸ್ತೇವೆ ಎಂದರು.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್