ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ, ಡಿಕೆಶಿ ಮೊದಲ ಪ್ರತಿಕ್ರಿಯೆ...!

By Suvarna News  |  First Published Oct 24, 2020, 2:16 PM IST

ಡಿ.ಕೆ ಶಿವಕುಮಾರ್ ಮುಂದಿನ ಸಿಎಂ ಎಂದು ಕೈ ಮುಖಂಡರ ಹೇಳಿಕೆಗೆ ಸಂಬಂಧಿಸಿದಂತೆ ಸ್ವತಃ ಡಿಕೆಶಿ ಅವರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.


ಬೆಂಗಳೂರು, (ಅ.24): ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಂತ ನನ್ನ ಮೇಲಿನ ಪ್ರೀತಿ ಹಾಗೂ ಅಭಿಮಾನದಿಂದ ಹೇಳಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​, ಶಾಸಕಿ ಸೌಮ್ಯ ರೆಡ್ಡಿ  ಹಾಗೂ ಹನುಂತರಾಯಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಂದು (ಶನಿವಾರ) ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡೋದು ಶಾಸಕರು ಹಾಗೂ ಹೈಕಮಾಂಡ್. ಮೊದಲು ನಾವು ಅಧಿಕಾರಕ್ಕೆ ಬರಬೇಕು ಅನ್ನೋದೇ ನನ್ನ ಗುರಿ. ಸಾಮೂಹಿಕ ನಾಯಕತ್ವದಲ್ಲಿ ನನಗೆ ನಂಬಿಕೆ, ವಿಶ್ವಾಸವಿದೆ. ಐ ಬಿಲೀವ್ ಇನ್ ಕಲೆಕ್ವಿವ್​​ ಲೀಡರ್ ಶಿಪ್ ಎಂದರು.

Latest Videos

undefined

ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ: ಸರಿಸಮಾನರ ಜೊತೆ ಯುದ್ಧ ಎಂದ ಡಿಕೆಶಿ

ಮುಂದಿನ ಚುನಾವಣೆಯ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಆಗೋದನ್ನ ಯಾರಿಗೂ ತಪ್ಪಿಸಲಾಗಲ್ಲ ಎಂಬ ಜಮೀರ್ ಹೇಳಿಕೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಜಮೀರ್ ಅಹ್ಮದ್ ಖಾನ್ ನನ್ನ ಸ್ನೇಹಿತ ಒಮ್ಮೊಮ್ಮೆ ಎಮೋಷನಲ್ ಆಗಿ ಏನೇನೋ ಹೇಳ್ತಾರೆ ಎಂದು ಜಮೀರ್​ ಮಾತನ್ನು ಎಮೋಷನಲ್ ಹೇಳಿಕೆ ಎಂದು ಹೇಳಿದರು.

ಇನ್ನು ಆರ್​.ಆರ್​ ನಗರ ಚುನಾವಣೆ ಕುರಿತು ಮಾತನಾಡಿದ ಡಿಕೆಶಿ,  ಅಕ್ರಮವಾಗಿ ಓಟರ್ ಐಡಿ ಸಂಗ್ರಹಿಸುತ್ತಿರುವ ಪ್ರಕರಣದ ಹಿನ್ನಲೆಯಲ್ಲಿ ಮುನಿರತ್ನ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ್ದೆವು. ನ್ಯಾಯಾಲಯ ಎಫ್.ಐ.ಆರ್ ದಾಖಲಿಸುವಂತೆ ಸೂಚನೆ ನೀಡಿದೆ. ಅಕ್ರಮಗಳ ಬಗ್ಗೆ ಕೂಡಲೇ ಎಫ್ ಐಆರ್ ದಾಖಲಿಸಬೇಕು ಎಂದಿದೆ. ಆರ್.ಆರ್.ನಗರದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!